ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಬುಧಾಬಿಗೆ ಮುಂಬೈ ಇಂಡಿಯನ್ಸ್‌ನ ಕೀರನ್ ಪೊಲಾರ್ಡ್ ಆಗಮನ

IPL 2021: Mumbai Indians all-rounder Kieron Pollard arrives in Abu Dhabi

ಅಬುಧಾಬಿ: ಮುಂಬೈ ಇಂಡಿಯನ್ಸ್ ಸ್ಟಾರ್ ಆಲ್ ರೌಂಡರ್, ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್‌ ಕೀರನ್ ಪೊಲಾರ್ಡ್ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ದ್ವಿತೀಯ ಹಂತದ ಟೂರ್ನಿಗಾಗಿ ಸೆಪ್ಟೆಂಬರ್ 16ರ ಗುರುವಾರ ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಯುಎಇ) ಅಬುಧಾಬಿಗೆ ಬಂದಿಳಿದಿದ್ದಾರೆ. ಐಪಿಎಲ್ ಆರಂಭಿಕ ಪಂದ್ಯಕ್ಕೆ ಮುಂಬೈ ಸಜ್ಜಾಗಿದೆ.

ಟಿ20 ವಿಶ್ವಕಪ್‌ ಸೋತ್ರೆ ಏಕದಿನ ನಾಯಕತ್ವವೂ ತ್ಯಜಿಸುತ್ತಾರಾ ವಿರಾಟ್ ಕೊಹ್ಲಿ!?ಟಿ20 ವಿಶ್ವಕಪ್‌ ಸೋತ್ರೆ ಏಕದಿನ ನಾಯಕತ್ವವೂ ತ್ಯಜಿಸುತ್ತಾರಾ ವಿರಾಟ್ ಕೊಹ್ಲಿ!?

ಕೀರನ್ ಪೊಲಾರ್ಡ್ ಇತ್ತೀಚೆಗಷ್ಟೇ ಮುಕ್ತಾಯವಾಗಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್‌ (ಸಿಪಿಎಲ್)ನಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್‌ಗೆ ನಾಯಕರಾಗಿದ್ದರು. ಪೊಲಾರ್ಡ್ ಸಿಪಿಎಲ್ ಮುಗಿಸಿ ಬರುತ್ತಿರುವುದರಿಂದ ಅವರಿಗೆ ಕಡ್ಡಾಯ ಕ್ವಾರಂಟೈನ್‌ನ ಅಗತ್ಯವಿಲ್ಲ. ಎರಡು ದಿನಗಳ ಐಸೊಲೇಶನ್ ಬಳಿಕ ಪೊಲಾರ್ಡ್ ಮುಂಬೈ ಇಂಡಿಯನ್ಸ್ ಬಯೋಬಬಲ್ ಸೇರಿಕೊಳ್ಳಲಿದ್ದಾರೆ.

ದೈತ್ಯ ವ್ಯಕ್ತಿ ಇಲ್ಲಿದ್ದಾನೆ ಎಂದು ಮುಂಬೈ ಇಂಡಿಯನ್ಸ್ ಟ್ವೀಟ್

ಅಬುಧಾಬಿಗೆ ಬಂದಿಳಿಯುತ್ತಲೇ ಅಪ್‌ಡೇಟ್‌ ನೀಡಿರುವ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಪೊಲಾರ್ಡ್ ಫೋಟೋ ಸಹಿತ ಟ್ವೀಟ್‌ ಮಾಡಿದೆ. 'ದೈತ್ಯ ವ್ಯಕ್ತಿ ಇಲ್ಲಿದ್ದಾನೆ. ನಮ್ಮ ಒನ್ ಫ್ಯಾಮಿಲಿಯ ಎಲ್ಲಾ ಸದಸ್ಯರು ಈಗ ಒಂದೇ ಸೂರಿನಡಿಯಿದ್ದಾರೆ. ಗುಡ್‌ನೈಟ್ ಪಲ್ಟಾನ್' ಎಂದು ಟ್ವೀಟ್‌ನಲ್ಲಿ ಬರೆದುಕೊಳ್ಳಲಾಗಿದೆ. ಮುಂಬೈ ಇಂಡಿಯನ್ಸ್ ಆಟಗಾರರಲ್ಲಿ ಪೊಲಾರ್ಡ್ ಮಾತ್ರ ಬಾಕಿ ಉಳಿದಿದ್ದರು. ಈಗ ಎಂಐನ ಎಲ್ಲರೂ ಒಂದೆಡೆ ಸೇರಿಕೊಂಡಂತಾಗಿದೆ. ನಾಯಕ ರೋಹಿತ್ ಶರ್ಮಾ ಸೇರಿದಂತೆ ಎಲ್ಲರೂ ತಂಡದಲ್ಲಿದ್ದು, ಮುಂಬೈ ಉದ್ಘಾಟನಾ ಪಂದ್ಯಕ್ಕೆ ಸಿದ್ದತೆ ನಡೆಸಿದೆ. ಅಂದ್ಹಾಗೆ, ಸಿಪಿಎಲ್ ಲೀಗ್‌ ಹಂತವನ್ನು ಅಂಕಪಟ್ಟಿಯ ಅಗ್ರ ಸ್ಥಾನದಲ್ಲಿ ಮುಗಿಸಿದ್ದ ಟ್ರಿನ್‌ಬಾಗೊ ನೈಟ್ ರೈಡರ್ಸ್ ಆ ಬಳಿಕ ಸೆಮಿಫೈನಲ್‌ನಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು.

ಮುಂಬೈ ಇಂಡಿಯನ್ಸ್ ಬಲ ಪೊಲಾರ್ಡ್

ಮುಂಬೈ ಇಂಡಿಯನ್ಸ್ ಬಲ ಪೊಲಾರ್ಡ್

ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಐಪಿಎಲ್ ಇತಿಹಾಸದಲ್ಲೇ ಅತೀ ಯಶಸ್ವಿ ತಂಡವೆಂಬ ಹೆಗ್ಗಳಿಗೆ ಪಾತ್ರವಾಗಿದೆ. ಒಟ್ಟು ಐದು ಬಾರಿ ಮುಂಬೈ ಟ್ರೋಫಿ ಗೆದ್ದಿದೆ. ಮುಂಬೈ ಬಿಟ್ಟರೆ ಚೆನ್ನೈ ಸೂಪರ್ ಕಿಂಗ್ಸ್ ಮೂರು ಬಾರಿ ಚಾಂಪಿಯನ್ ಪಟ್ಟ ಗೆದ್ದಿದೆ. ಐಪಿಎಲ್ ದ್ವಿತೀಯ ಹಂತದಲ್ಲಿ ಆರಂಭಿಕ ಪಂದ್ಯದಲ್ಲೇ ಮುಂಬೈ ಮತ್ತು ಚೆನ್ನೈ ತಂಡಗಳು ಕಾದಾಡಲಿವೆ. ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಈಗ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ದ್ವಿತೀಯ ಸ್ಥಾನದಲ್ಲಿ ಸಿಎಸ್‌ಕೆ, ಮೂರನೇ ಸ್ಥಾನದಲ್ಲಿ ಆರ್‌ಸಿಬಿ ತಂಡಗಳಿವೆ.

27 ದಿನಗಳ ಕಾಲ ದ್ವಿತೀಯ ಹಂತದ ಐಪಿಎಲ್ ಪಂದ್ಯಗಳು

27 ದಿನಗಳ ಕಾಲ ದ್ವಿತೀಯ ಹಂತದ ಐಪಿಎಲ್ ಪಂದ್ಯಗಳು

ಐಪಿಎಲ್ ಆರಂಭಿಕ ಹಂತದಲ್ಲಿ ಭಾರತದಲ್ಲಿ ಒಟ್ಟು 29 ಪಂದ್ಯಗಳು ನಡೆದಿದ್ದವು. ಇನ್ನು 31 ಪಂದ್ಯಗಳು ಯುಎಇಯಲ್ಲಿ ನಡೆಯಲಿದೆ. ಐಪಿಎಲ್ ಫ್ರಾಂಚೈಸಿಗಳಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದರಿಂದ ಅನಿವಾರ್ಯವಾಗಿ ಟೂರ್ನಿ ಅರ್ಧಕ್ಕೆ ನಿಲ್ಲಿಸಲ್ಪಟ್ಟು ಮುಂದೂಡಲಾಗಿತ್ತು. ನಡೆಯಲಿರುವ 31 ಪಂದ್ಯಗಳಲ್ಲಿ 13 ಪಂದ್ಯಗಳು ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿವೆ. ಮೊದಲ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯಗಳು ಇದೇ ಸ್ಟೇಡಿಯಂನಲ್ಲಿ ನಡೆಯಲಿವೆ. ಶಾರ್ಜಾ ಸ್ಟೇಡಿಯಂನಲ್ಲಿ 10 ಪಂದ್ಯಗಳು ನಡೆಯಲಿವೆ. ಇದರಲ್ಲಿ ದ್ವಿತೀಯ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯ ಸೇರಿದೆ. ಐಪಿಎಲ್ ದ್ವಿತೀಯ ಹಂತದ ಐಪಿಎಲ್ ಪಂದ್ಯಗಳ ವೇಳೆ ಒಟ್ಟು 7 ಡಬಲ್ ಹೆಡ್ಡರ್ ಪಂದ್ಯಗಳು ನಡೆಯಲಿವೆ. ಸುಮಾರು 27 ದಿನಗಳ ಕಾಲ ದ್ವಿತೀಯ ಹಂತದ ಐಪಿಎಲ್ ನಡೆಯಲಿದೆ. ಅಂದ್ಹಾಗೆ ಐಪಿಎಲ್ ದ್ವಿತೀಯ ಹಂತದ ಉದ್ಘಾಟನಾ ಪಂದ್ಯದಲ್ಲಿ ಅಂದರೆ ಸೆಪ್ಟೆಂಬರ್‌ 19ಕ್ಕೆ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ.

Story first published: Friday, September 17, 2021, 12:38 [IST]
Other articles published on Sep 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X