ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಪ್ರಮುಖ 5 ಆಟಗಾರರು ಐಪಿಎಲ್‌ ಆರಂಭಿಕ ಪಂದ್ಯಗಳಲ್ಲಿ ಆಡಲ್ಲ!

IPL 2021: Mumbai Indians all set to miss Quinton de Kock in opening game

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನ ಹಾಲಿ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ನ ಪ್ರಮುಖ ಬ್ಯಾಟ್ಸ್‌ಮನ್‌ ಕಮ್ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಈ ಐಪಿಎಲ್‌ ಸೀಸನ್‌ನ ಆರಂಭಿಕ ಪಂದ್ಯದಲ್ಲಿ ಆಡದಿರುವ ಸಾಧ್ಯತೆ ಹೆಚ್ಚಿದೆ. ಎಂಐಯ ಸ್ಟಾರ್ ಓಪನರ್ ಆಗಿರುವ ಡಿ ಕಾಕ್ ಏಪ್ರಿಲ್ 9ರಂದು ನಡೆಯುವ ಉದ್ಘಾಟನೆ ಪಂದ್ಯದಲ್ಲಿ ಆಡುವ ಸಾಧ್ಯತೆ ತುಂಬಾ ಕಡಿಮೆ. ಮೊದಲ ಪಂದ್ಯವನ್ನು ಡಿ ಕಾಕ್ ಬಹುತೇಕ ಮಿಸ್ ಮಾಡಿಕೊಳ್ಳಲಿದ್ದಾರೆ.

ಐಪಿಎಲ್ : ಅತಿ ಚಿಕ್ಕ ವಯಸ್ಸಿನಲ್ಲೇ ನಾಯಕರಾದವರ ಪಟ್ಟಿಐಪಿಎಲ್ : ಅತಿ ಚಿಕ್ಕ ವಯಸ್ಸಿನಲ್ಲೇ ನಾಯಕರಾದವರ ಪಟ್ಟಿ

28ರ ಹರೆಯದ ಕ್ವಿಂಟನ್ ಡಿ ಕಾಕ್ ಸದ್ಯ ರಾಷ್ಟ್ರೀಯ ಕರ್ತವ್ಯದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ-ಪಾಕಿಸ್ತಾನ ಮಧ್ಯೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಈ ಸರಣಿಯಲ್ಲಿ ಡಿ ಕಾಕ್ ಆಡುತ್ತಿದ್ದಾರೆ. ಹೀಗಾಗಿ ಡಿ ಕಾಕ್‌ಗೆ ಆರಂಭಿಕ ಪಂದ್ಯದಲ್ಲಿ ಮುಂಬೈ ಪರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಣಕ್ಕಿಳಿಯಲು ಸಾಧ್ಯವಾಗುತ್ತಿಲ್ಲ.

ಕ್ರಿಕೆಟ್‌ನಲ್ಲಿ 'ಸಾಫ್ಟ್‌ ಸಿಗ್ನಲ್' ಅಂದ್ರೇನು?, ಇಲ್ಲಿದೆ ಸಂಪೂರ್ಣ ಮಾಹಿತಿಕ್ರಿಕೆಟ್‌ನಲ್ಲಿ 'ಸಾಫ್ಟ್‌ ಸಿಗ್ನಲ್' ಅಂದ್ರೇನು?, ಇಲ್ಲಿದೆ ಸಂಪೂರ್ಣ ಮಾಹಿತಿ

ಕ್ವಿಂಟನ್ ಡಿ ಕಾಕ್ ಸೇರಿ ಇನ್ನೂ ಒಂದಿಷ್ಟು ಪ್ರಮುಖ ಆಟಗಾರರು ಐಪಿಎಲ್‌ ಆರಂಭಿಕ ಪಂದ್ಯದಲ್ಲಿ ಆಡದಿರುವ ಸಾಧ್ಯತೆಯಿದೆ. ಅವರ ಮಾಹಿತಿ ಇಲ್ಲಿದೆ.

ಯಾಕೆ ಪ್ರಮುಖ ಆಟಗಾರರು ಮಿಸ್?

ಯಾಕೆ ಪ್ರಮುಖ ಆಟಗಾರರು ಮಿಸ್?

ದಕ್ಷಿಣ ಆಫ್ರಿಕಾ ರಾಷ್ಟ್ರೀಯ ತಂಡದಲ್ಲಿ ಆಡುವ ಪ್ರಮುಖ ಆಟಗಾರರು ಐಪಿಎಲ್‌ನ ಬೇರೆ ಬೇರೆ ತಂಡಗಳಲ್ಲಿ ಆಡುತ್ತಿದ್ದಾರೆ. ಪಾಕಿಸ್ತಾನ-ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಏಪ್ರಿಲ್ 2ರಿಂದ ಆರಂಭಗೊಳ್ಳಲಿದೆ. ಹೀಗಾಗಿ ಸರಣಿ ಮುಗಿಸಿ ದಕ್ಷಿಣ ಆಫ್ರಿಕಾ ಆಟಗಾರರು ಕ್ವಾರಂಟೈನ್ ಪಾಲಿಸಿ ಆಯಾ ಫ್ರಾಂಚೈಸಿ ಪರ ಆಡುವಾಗ ಸಹಜವಾಗೇ ತಡವಾಗುವ ಸಾಧ್ಯತೆಯಿದೆ. ಹೀಗಾಗಿ ಆರಂಭಿಕ ಪಂದ್ಯಗಳನ್ನು ಇವರು ಮಿಸ್ ಮಾಡಿಕೊಳ್ಳುವ ಸಾಧ್ಯತೆಯಿದೆ.

ಮೊದಲ ಪಂದ್ಯದಲ್ಲೇ ಆಡಬಹುದು, ಆದರೆ..

ಮೊದಲ ಪಂದ್ಯದಲ್ಲೇ ಆಡಬಹುದು, ಆದರೆ..

ದಕ್ಷಿಣ ಆಫ್ರಿಕಾ ಪರ ಆಡುವ ಐಪಿಎಲ್ ಆಟಗಾರರನ್ನು ಪಾಕ್ ವಿರುದ್ಧ ದ್ವಿತೀಯ ಏಕದಿನ ಮುಗಿದ ಬಳಿಕ ಅಂದರೆ ಏಪ್ರಿಲ್ 4ರ ಬಳಿಕ ಭಾರತಕ್ಕೆ ಕಳುಹಿಸಿಕೊಡಲು ಕ್ರಿಕೆಟ್ ಸೌತ್ ಆಫ್ರಿಕಾ ಒಪ್ಪಿದೆ. ಕ್ವಿಂಟರ್ ಡಿ ಕಾಕ್ ಅವರು ಮುಂಬೈ ಇಂಡಿಯನ್ಸ್ ಪರ ಆರಂಭಿಕ ಪಂದ್ಯದಲ್ಲೇ ಆಡಲು ಅವಕಾಶವಿದೆ. ಆದರೆ ಏಪ್ರಿಲ್ 4ಕ್ಕೆ ಮುಂಬೈ ಫ್ರಾಂಚೈಸಿ ದಕ್ಷಿಣ ಆಫ್ರಿಕಾಕ್ಕೆ ಚಾರ್ಟರ್ಡ್ ಫ್ಲೈಟ್ ವ್ಯವಸ್ಥೆ ಮಾಡಬೇಕು. ಆಗ ಬಯೋ ಬಬಲ್‌ನಿಂದ ಬಯೋಬಬಲ್‌ಗೆ ಆಟಗಾರನ ವರ್ಗಾವಣೆ ಆದಂತಾಗುತ್ತದೆ. ಹೀಗಾದರೆ ಒಬ್ಬ ಆಟಗಾರ ಮತ್ತೆ ಕ್ವಾರಂಟೈನ್ ಪಾಲಿಸುವ ಅನಿವಾರ್ಯತೆ ಇರುವುದಿಲ್ಲ. ಬಯೋ ಬಬಲ್‌ನಿಂದ ಬಯೋ ಬಬಲ್‌ಗೆ ಆಟಗಾರನ ವರ್ಗಾವಣೆ ಆಗದಿದ್ದರೆ ಆ ಆಟಗಾರ ತಾಣಕ್ಕೆ ಬಂದ ಬಳಿಕ ಕನಿಷ್ಠ 1 ವಾರದ ಕ್ವಾರಂಟೈನ್ ಪಾಲಿಸಬೇಕು.

ಯಾವೆಲ್ಲ ಆಟಗಾರರು ಮಿಸ್?

ಯಾವೆಲ್ಲ ಆಟಗಾರರು ಮಿಸ್?

ದಕ್ಷಿಣ ಆಫ್ರಿಕಾ ರಾಷ್ಟ್ರೀಯ ತಂಡದಲ್ಲಿ ಆಡುವ ಒಟ್ಟು ಐದು ಪ್ರಮುಖ ಆಟಗಾರರು ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಅವರೆಂದರೆ ಕಾಗಿಸೊ ರಬಾಡ ಮತ್ತು ಅನ್ರಿಕ್ ನಾಟ್ಜ್‌ (ಇಬ್ಬರೂ ಡೆಲ್ಲಿ ಕ್ಯಾಪಿಟಲ್ಸ್), ಸ್ಫೋಟಕ ಬ್ಯಾಟ್ಸ್‌ಮನ್‌ ಡೇವಿಡ್ ಮಿಲ್ಲರ್ (ರಾಜಸ್ಥಾನ್ ರಾಯಲ್ಸ್), ವೇಗಿ ಲುಂಗಿ ಸಾಲಿ ಎನ್‌ಗಿಡಿ (ಚೆನ್ನೈ ಸೂಪರ್ ಕಿಂಗ್ಸ್). ಈ ಆಟಗಾರರು ಏಪ್ರಿಲ್ 5ಕ್ಕೆ ಅವರವರ ತಾಣಕ್ಕೆ ಬಂದರೂ ಕ್ವಾರಂಟೈನ್ ಮುಗಿಸಿ ಪಂದ್ಯಕ್ಕೆ ಲಭ್ಯರಾಗೋದು ಏಪ್ರಿಲ್ 12ರ ಬಳಿಕ. ಆದರೆ ಏಪ್ರಿಲ್ 9ರಂದು ಐಪಿಎಲ್ ಆರಂಭಗೊಳ್ಳುವುದರಿಂದ 9ರಂದು ಎಂಐ vs ಆರ್‌ಸಿಬಿ, 10ರಂದು ಸಿಎಸ್‌ಕೆ vs ಡಿಸಿ, 11ರಂದು ಎಸ್‌ಆರ್‌ಎಚ್ vs ಕೆಕೆಆರ್, 12ರಂದು ಆರ್‌ಆರ್‌ vs ಪಿಕೆ ಪಂದ್ಯಗಳು ನಡೆಯಲಿವೆ.

Story first published: Wednesday, March 31, 2021, 20:22 [IST]
Other articles published on Mar 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X