ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರಂಭಿಕ ಪಂದ್ಯದಲ್ಲಿ ಆರ್‌ಸಿಬಿಯೇ ಗೆಲ್ಲುತ್ತದೆ ಎನ್ನುತ್ತಿದೆ ಈ ಅಂಕಿ-ಅಂಶ!

IPL 2021: Mumbai Indians Never Won A Opening Match Since 2013

ಚೆನ್ನೈ: ಏಪ್ರಿಲ್ 9ರಿಂದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಆವೃತ್ತಿ ಆರಂಭವಾಗಲಿದೆ. ನಗದು ಶ್ರೀಮಂತ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಸೆಣಸಾಡಲಿದೆ. ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ 7.30 pmಗೆ ಈ ಪಂದ್ಯ ಆರಂಭಗೊಳ್ಳಲಿದೆ. ಆರಂಭಿಕ ಪಂದ್ಯವೇ ಜಿದ್ದಾಜಿದ್ದಿ ಎನಿಸುವ ನಿರೀಕ್ಷೆಯಿದೆ.

ಐಪಿಎಲ್‌ನಲ್ಲಿ ಅತೀ ಹೆಚ್ಚು ಗೆಲುವುಗಳ ದಾಖಲೆಯಿರುವ ತಂಡಗಳ ಪಟ್ಟಿಐಪಿಎಲ್‌ನಲ್ಲಿ ಅತೀ ಹೆಚ್ಚು ಗೆಲುವುಗಳ ದಾಖಲೆಯಿರುವ ತಂಡಗಳ ಪಟ್ಟಿ

ಐಪಿಎಲ್ ಇತಿಹಾಸದಲ್ಲೇ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಅತೀ ಬಲಿಷ್ಠ ತಂಡ. ಮುಂಬೈ ಒಟ್ಟಾರೆ 5 ಬಾರಿ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ. ಆದರೆ ಈ ಬಾರಿಯ ಸೀಸನ್‌ನಲ್ಲಿ ಮೊದಲ ಪಂದ್ಯದಲ್ಲಿ ಆರ್‌ಸಿಬಿಯೇ ಗೆಲ್ಲುವ ಸಾಧ್ಯತೆ ಹೆಚ್ಚಿದೆ.

ಕುತೂಹಲಕಾರಿ ಅಂಕಿ-ಅಂಶ

ಕುತೂಹಲಕಾರಿ ಅಂಕಿ-ಅಂಶ

ಅತೀ ಬಲಿಷ್ಠ ತಂಡ ಮುಂಬೈ ಇಂಡಿಯನ್ಸ್ ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೇ ಗೆಲ್ಲಲಿದೆ ಎನ್ನಲು ಕಾರಣವಿದೆ. ಯಾಕೆಂದರೆ ಕುತೂಹಲಕಾರಿ ಅಂಕಿ-ಅಂಶವೊಂದು ಈ ಸತ್ಯ ಬಹಿರಂಗಪಡಿಸುತ್ತಿದೆ. ಅದೇನೆಂದರೆ ಆರಂಭಿಕ ಪಂದ್ಯದಲ್ಲಿ ಮುಂಬೈ ಗೆದ್ದಿದ್ದು ಕಡಿಮೆ. ಸೋತಿದ್ದೇ ಹೆಚ್ಚು. ಸಾಲದ್ದಕ್ಕೆ ವಿರಾಟ್ ಕೊಹ್ಲಿ ಪಡೆ ಈ ಸಾರಿ ಇನ್ನೂ ಬಲಿಷ್ಠವಾಗಿರುವುದರಿಂದ ಗೆಲ್ಲುವ ನಿರೀಕ್ಷೆ ಮೂಡಿಸಿದೆ.

8 ವರ್ಷಗಳಿಂದ ಸತತ ಸೋಲು

8 ವರ್ಷಗಳಿಂದ ಸತತ ಸೋಲು

2013ರಿಂದ 2020ರ ವರೆಗೂ ಎಂಐ ತಂಡ ಟೂರ್ನಿಯ ಆರಂಭಿಕ ಪಂದ್ಯಗಳನ್ನು ಸೋತಿದೆ ಎಂದರೆ ನಿಮಗೆ ಅಚ್ಚರಿಯೆನಿಸಬಹುದು. ಆದರೆ ಇದು ನಿಜ. ಕಳೆದ 8 ವರ್ಷಗಳಿಂದಲೂ ಮುಂಬೈ ತಂಡ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಗೆದ್ದಿದ್ದೇ ಇಲ್ಲ. ಆದರೆ ಟೂರ್ನಿಯ ಮಧ್ಯದಲ್ಲಿ ಅಥವಾ ಕಡೇ ಪಂದ್ಯಗಳಲ್ಲಿ ಗೆಲ್ಲಲು ಮುಂಬೈ ತೀವ್ರವಾದ ಹೋರಾಟ ನಡೆಸಿದ್ದು ಕಾಣಿಸುತ್ತದೆ. ಈ ನಿಟ್ಟಿನಲ್ಲಿ ಆರ್‌ಸಿಬಿಗೆ ಟೂರ್ನಿ ಆರಂಭದಲ್ಲೇ ಶುಭಾರಂಭ ಕಾಣುವ ನಿರೀಕ್ಷೆ ಹೆಚ್ಚಿದೆ.

ಆರಂಭಿಕ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಫಲಿತಾಂಶ

ಆರಂಭಿಕ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಫಲಿತಾಂಶ

* 2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಲು
* 2015ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪರಾಜಯ
* 2016ರಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಎದುರು ಸೋಲು
* 2017ರಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧ ಪರಾಭವ
* 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಎದುರು ಸೋಲು
* 2019ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹಿನ್ನಡೆ
* 2020ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಸೋಲು

Story first published: Friday, April 9, 2021, 9:53 [IST]
Other articles published on Apr 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X