ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಮುಂಬೈ vs ಪಂಜಾಬ್, ದಾಖಲೆಗಳು, ಕುತೂಹಲಕಾರಿ ಅಂಕಿ-ಅಂಶಗಳು

IPL 2021: Mumbai Indians vs Punjab Kings Stats and Records Preview

ಅಬುಧಾಬಿ: ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಮಂಗಳವಾರ (ಸೆಪ್ಟೆಂಬರ್ 28) ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 42ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್‌ ತಂಡಗಳು ಕಾದಾಡಲಿವೆ. ಹಾಲಿ ಚಾಂಪಿಯನ್ಸ್ ಮುಂಬೈ ಈ ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ಅಂಕಪಟ್ಟಿಯಲ್ಲಿ ಎಂಐ 7ನೇ ಸ್ಥಾನದಲ್ಲಿದೆ. ಪಂಜಾಬ್‌ 5ನೇ ಸ್ಥಾನದಲ್ಲಿದೆ.

ಸನ್‌ರೈಸರ್ಸ್ ಜರ್ಸಿಯಲ್ಲಿ ವಾರ್ನರ್ ಇನ್ನು ಕಣಕ್ಕಿಳಿಯೋದು ಅನುಮಾನ: ಕೋಚ್ ನೀಡಿದ್ರು ಸುಳಿವುಸನ್‌ರೈಸರ್ಸ್ ಜರ್ಸಿಯಲ್ಲಿ ವಾರ್ನರ್ ಇನ್ನು ಕಣಕ್ಕಿಳಿಯೋದು ಅನುಮಾನ: ಕೋಚ್ ನೀಡಿದ್ರು ಸುಳಿವು

ಮುಂಬೈ ಇಂಡಿಯನ್ಸ್ ಆಡಿರುವ 10 ಪಂದ್ಯಗಳಲ್ಲಿ 4 ಪಂದ್ಯ ಗೆದ್ದು 8 ಪಾಯಿಂಟ್ಸ್‌, -0.551 ನೆಟ್ ರನ್‌ರೇಟ್ ಗಳಿಸಿದೆ. ಪಂಜಾಬ್ ತಂಡ 10 ರಲ್ಲಿ 4 ಪಂದ್ಯ ಗೆದ್ದು 8 ಪಾಯಿಂಟ್ಸ್‌, -0.271 ರೇಟಿಂಗ್‌ ಪಾಯಿಂಟ್ಸ್‌ ಹೊಂದಿದೆ. ರೇಟಿಂಗ್ ಪಾಯಿಂಟ್ ಆಧಾರದಲ್ಲಿ ಪಂಜಾಬ್‌ ತಂಡ ಮುಂಬೈಗಿಂತ ಉತ್ತಮ ಸ್ಥಿತಿಯಲ್ಲಿದೆ.

ಕೆಕೆಆರ್ ಸ್ಪಿನ್ನರ್ ಕುಲ್‌ದೀಪ್ ಯಾದವ್‌ಗೆ ಗಾಯ, ಭಾರತಕ್ಕೆ ವಾಪಾಸ್: ವರದಿಕೆಕೆಆರ್ ಸ್ಪಿನ್ನರ್ ಕುಲ್‌ದೀಪ್ ಯಾದವ್‌ಗೆ ಗಾಯ, ಭಾರತಕ್ಕೆ ವಾಪಾಸ್: ವರದಿ

ಪಂಜಾಬ್ ಕಿಂಗ್ಸ್-ಮುಂಬೈ ಇಂಡಿಯನ್ಸ್ ಮುಖಾಮುಖಿಯ ವೇಳೆ ಒಂದಿಷ್ಟು ದಾಖಲೆಗಳು ನಿರ್ಮಾಣವಾಗಲಿವೆ. ಇತ್ತಂಡಗಳ ಪಂದ್ಯದಲ್ಲಿ ಆಗಲಿರುವ ದಾಖಲೆಗಳ ಪಟ್ಟಿ ಇಲ್ಲಿದೆ.

ರೋಹಿತ್ ಶರ್ಮಾ, ಕೆಎಲ್ ರಾಹುಲ್

ರೋಹಿತ್ ಶರ್ಮಾ, ಕೆಎಲ್ ರಾಹುಲ್

ಮಂಗಳವಾರ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ ಮುಂಬೈ ನಾಯಕ ರೋಹಿತ್ ಶರ್ಮಾ ವಿಶೇಷ ದಾಖಲೆ ನಿರ್ಮಿಸಲಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ರೋಹಿತ್ 398 ಸಿಕ್ಸರ್‌ಗಳ ದಾಖಲೆ ಹೊಂದಿದ್ದಾರೆ. ಇನ್ನು 2 ಸಿಕ್ಸರ್ ಬಾರಿಸಿದರೆ ಹಿಟ್‌ಮ್ಯಾನ್ ರೋಹಿತ್ ಟಿ20 ಕ್ರಿಕೆಟ್‌ನಲ್ಲಿ 400 ಸಿಕ್ಸರ್‌ಗಳ ದಾಖಲೆ ನಿರ್ಮಿಸಲಿದ್ದಾರೆ. 34ರ ಹರೆಯದ ರೋಹಿತ್ 43 ಟೆಸ್ಟ್‌ ಪಂದ್ಯಗಳಲ್ಲಿ 3047 ರನ್, 63 ಸಿಕ್ಸರ್, 227 ಏಕದಿನ ಪಂದ್ಯಗಳಲ್ಲಿ 9205 ರನ್, 244 ಸಿಕ್ಸರ್, 111 ಟಿ20ಐ ಪಂದ್ಯಗಳಲ್ಲಿ 2864 ರನ್, 133 ಸಿಕ್ಸರ್, 209 ಐಪಿಎಲ್ ಪಂದ್ಯಗಳಲ್ಲಿ 5556 ರನ್, 225 ಸಿಕ್ಸರ್ ದಾಖಲೆ ಹೊಂದಿದ್ದಾರೆ. ಇನ್ನು ಪಂಜಾಬ್ ಕಿಂಗ್ಸ್‌ ನಾಯಕ ಕೆಎಲ್ ರಾಹುಲ್ ಕೂಡ ಸಿಕ್ಸರ್‌ಗಾಗಿ ದಾಖಲೆ ನಿರ್ಮಿಸಲಿದ್ದಾರೆ. ರಾಹುಲ್ ಇನ್ನು 2 ಸಿಕ್ಸರ್ ಬಾರಿಸಿದರೂ ಸಾಕು ಐಪಿಎಲ್‌ನಲ್ಲಿ 100 ಸಿಕ್ಸರ್‌ಗಳ ದಾಖಲೆ ನಿರ್ಮಾಣವಾಗಲಿದೆ.

ಕೃನಾಲ್ ಪಾಂಡ್ಯ, ಕ್ವಿಂಟನ್ ಡಿ ಕಾಕ್

ಕೃನಾಲ್ ಪಾಂಡ್ಯ, ಕ್ವಿಂಟನ್ ಡಿ ಕಾಕ್

ಮುಂಬೈ ಇಂಡಿಯನ್ಸ್ ಆಲ್ ರೌಂಡರ್ ಕೃನಾಲ್ ಪಾಂಡ್ಯ ಕಳೆದ 7 ಪಂದ್ಯಗಳಲ್ಲಿ ಬೌಲಿಂಗ್‌ ಮಾಡಿದ್ದಾರಾದರೂ ಅವರಿಗೆ ಒಂದೂ ವಿಕೆಟ್ ಲಭಿಸಿಲ್ಲ. ಪಂಜಾಬ್ ವಿರುದ್ಧ ಮಂಗಳವಾರ (ಸೆಪ್ಟೆಂಬರ್ 28) ಕೃನಾಲ್‌ಗೆ 1 ವಿಕೆಟ್‌ ಲಭಿಸಿದರೆ ಐಪಿಎಲ್‌ನಲ್ಲಿ ಕೃನಾಲ್ ಮುಂಬೈ ಇಂಡಿಯನ್ಸ್ ಪರ 50 ವಿಕೆಟ್‌ ಗಳಿಸಿದಂತಾಗುತ್ತದೆ. ಬಹುಶಃ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಕೃನಾಲ್ ಈ ದಾಖಲೆ ನಿರ್ಮಿಸುವ ನಿರೀಕ್ಷೆಯಿದೆ. ಮುಂಬೈ ಮತ್ತೊಬ್ಬ ಬ್ಯಾಟ್ಸ್‌ಮನ್‌ ಕಮ್ ವಿಕೆಟ್ ಕೀಪರ್, ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಟಿ20 ಕ್ರಿಕೆಟ್‌ ಮಾದರಿಯಲ್ಲಿ 7000 ರನ್ ದಾಖಲೆ ಸಮೀಪದಲ್ಲಿದ್ದಾರೆ. ಇನ್ನು ಕೇವಲ 2 ರನ್ ಬಾರಿಸಿದರೂ ಡಿ ಕಾಕ್ ಹೆಸರಿನಲ್ಲಿ ಟಿ20 ಕ್ರಿಕೆಟ್‌ನಲ್ಲಿ 7000 ರನ್ ದಾಖಲೆ ಪೂರ್ಣಗೊಳ್ಳಲಿದೆ.

KL ರಾಹುಲ್ ನಾವೆಲ್ರೂ ಮೈದಾನದಲ್ಲಿ ಕನ್ನಡದಲ್ಲೇ ಮಾತನಾಡ್ತೇವೆ | Oneindia Kannada
ಕ್ರಿಸ್ ಗೇಲ್, ಹಾರ್ದಿಕ್ ಪಾಂಡ್ಯ

ಕ್ರಿಸ್ ಗೇಲ್, ಹಾರ್ದಿಕ್ ಪಾಂಡ್ಯ

ಟಿ20 ಕ್ರಿಕೆಟ್‌ ಮಾದರಿಯಲ್ಲಿನ ಸ್ಫೋಟಕ ಬ್ಯಾಟ್ಸ್‌ಮನ್‌, ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ ಐಪಿಎಲ್‌ ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲಿದ್ದಾರೆ. ಮುಂದಿನ ಪಂದ್ಯದಲ್ಲಿ ಗೇಲ್ ಕೇವಲ 36 ರನ್ ಬಾರಿಸಿದರೂ ಸಾಕು ಐಪಿಎಲ್‌ನಲ್ಲಿ 5000 ರನ್ ದಾಖಲೆ ಯುನಿವರ್ಸಲ್ ಬಾಸ್ ಹೆಸರಿನಲ್ಲಿ ನಿರ್ಮಾಣವಾಗಲಿದೆ. ಟಿ20 ಕ್ರಿಕೆಟ್‌ನಲ್ಲಿ ಗೇಲ್ ಅನೇಕ ದಾಖಲೆಗಳನ್ನು ತನ್ನ ಹೆಸರಿನಲ್ಲಿ ಉಳಿಸಿಕೊಂಡಿದ್ದಾರೆ. ಎಂಐ ಮತ್ತೊಬ್ಬ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಸಿಕ್ಸರ್ ವಿಚಾರದಲ್ಲಿ ದಾಖಲೆ ಸನಿಹದಲ್ಲಿದ್ದಾರೆ. ಮುಂದಿನ ಪಂದ್ಯದಲ್ಲಿ ಹಾರ್ದಿಕ್ 5 ಸಿಕ್ಸರ್ ಬಾರಿಸಿದರೂ ಸಾಕು ಐಪಿಎಲ್‌ನಲ್ಲಿ 100 ಸಿಕ್ಸರ್ ದಾಖಲೆಗೆ ಹಾರ್ದಿಕ್ ಕಾರಣರಾಗಲಿದ್ದಾರೆ. ಸೆಪ್ಟೆಂಬರ್ 28ರಂದು ಡಬಲ್ ಹೆಡ್ಡರ್ ನಡೆಯಲಿದೆ. ಆರಂಭಿಕ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಡಿದರೆ ಅನಂತರದ ಪಂದ್ಯದಲ್ಲಿ ಮುಂಬೈ-ಪಂಜಾಬ್ ಕಾದಾಡಲಿವೆ.

Story first published: Tuesday, September 28, 2021, 16:24 [IST]
Other articles published on Sep 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X