ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂಬೈ vs ಹೈದರಾಬಾದ್ ಪಂದ್ಯದಲ್ಲಿ ಆಗಲಿರುವ ದಾಖಲೆಗಳ ಪಟ್ಟಿ

IPL 2021: Mumbai Indians vs Sunrisers Hyderabad Stats and Records Preview

ಚೆನ್ನೈ: ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಐಪಿಎಲ್ 9ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಡಲಿವೆ. ಎರಡೂ ತಂಡಗಳಿಗೂ ಎರಡೆರಡು ಪಂದ್ಯಗಳು ನಡೆದಿವೆ. ಇದರಲ್ಲಿ ಮುಂಬೈ ಒಂದರಲ್ಲಿ ಗೆದ್ದು ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿದೆ. ಹೈದರಾಬಾದ್‌ ತಂಡ ಎರಡರಲ್ಲಿ ಎರಡೂ ಪಂದ್ಯಗಳನ್ನು ಸೋತು ಅಂಕಪಟ್ಟಿಯಲ್ಲಿ ಕೆಳ ಸ್ಥಾನದಲ್ಲಿದೆ.

ಮೋರಿಸ್‌ಗೆ ಸಿಂಗಲ್ ನಿರಾಕರಣೆ ಸಮರ್ಥಿಸಿದ ಸ್ಯಾಮ್ಸನ್: ಇಲ್ಲಿದೆ ಅಸಲಿ ಕಾರಣ!ಮೋರಿಸ್‌ಗೆ ಸಿಂಗಲ್ ನಿರಾಕರಣೆ ಸಮರ್ಥಿಸಿದ ಸ್ಯಾಮ್ಸನ್: ಇಲ್ಲಿದೆ ಅಸಲಿ ಕಾರಣ!

ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಎರಡೂ ತಂಡಗಳೂ ಇಂದಿನ ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಮೇಲಕ್ಕೇರಲು ಎದುರು ನೋಡುತ್ತಿವೆ. ಇಂದಿನ ಪಂದ್ಯದಲ್ಲಿ ಎರಡೂ ತಂಡಗಳ ಆಟಗಾರರು ಕೆಲವು ವಿಶೇಷ ದಾಖಲೆಗಳನ್ನು ನಿರ್ಮಿಸಲು ಅವಕಾಶವಿದೆ. ಆ ದಾಖಲೆಗಳ ಮಾಹಿತಿ ಇಲ್ಲಿದೆ.

50 ಅರ್ಧ ಶತಕಗಳ ದಾಖಲೆ

50 ಅರ್ಧ ಶತಕಗಳ ದಾಖಲೆ

ಸನ್ ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್‌ ಇನ್ನೊಂದು ಅರ್ಧ ಶತಕ ಬಾರಿಸಿದರೆ ಅವರ ಹೆಸರಿನಲ್ಲಿ ದಾಖಲೆ ನಿರ್ಮಾಣವಾಗಲಿದೆ. ಐಪಿಎಲ್‌ನಲ್ಲಿ 50 ಬಾರಿ ಅರ್ಧ ಶತಕಗಳನ್ನು ಬಾರಿಸಿದ ಅಪರೂಪದ ದಾಖಲೆಗೆ ವಾರ್ನರ್ ಕಾರಣರಾಗಿದ್ದಾರೆ. ಈ ದಾಖಲೆ ಮಾಡಿದ ಮೊದಲ ಆಟಗಾರನಾಗಿ ವಾರ್ನರ್ ಗುರುತಿಸಿಕೊಳ್ಳಲಿದ್ದಾರೆ. ಈ ದಾಖಲೆ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಶಿಖರ್ ಧವನ್ 42 ಅರ್ಧ ಶತಕಗಳನ್ನು ಬಾರಿಸಿದ್ದಾರೆ.

ಪೊಲಾರ್ಡ್, ವಾರ್ನರ್ ದಾಖಲೆ

ಪೊಲಾರ್ಡ್, ವಾರ್ನರ್ ದಾಖಲೆ

* ಶನಿವಾರದ ಪಂದ್ಯದಲ್ಲಿ ಹೈದರಾಬಾದ್‌ನ ಡೇವಿಡ್ ವಾರ್ನರ್ ಇನ್ನು 5 ಸಿಕ್ಸರ್ ಚಚ್ಚಿದರೆ ಐಪಿಎಲ್‌ನಲ್ಲಿ 200 ಸಿಕ್ಸರ್‌ಗಳ ದಾಖಲೆಗೆ ವಾರ್ನರ್ ಕಾರಣರಾಗಲಿದ್ದಾರೆ.
* ಮುಂಬೈ ಇಂಡಿಯನ್ಸ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ ಕೀರನ್ ಪೊಲಾರ್ಡ್ ಇನ್ನು 2 ಸಿಕ್ಸರ್ ಬಾರಿಸಿದರೂ ಸಾಕು ಅವರ ಐಪಿಎಲ್‌ನಲ್ಲಿ 200 ಸಿಕ್ಸರ್‌ಗಳ ಪಟ್ಟಿ ಸೇರಿಕೊಳ್ಳಲಿದ್ದಾರೆ.

ಮನೀಷ್, ಕೃನಾಲ್ ಮೈಲಿಗಲ್ಲು

ಮನೀಷ್, ಕೃನಾಲ್ ಮೈಲಿಗಲ್ಲು

* ಸನ್ ರೈಸರ್ಸ್ ಹೈದರಾಬಾದ್‌ನ ಬ್ಯಾಟ್ಸ್‌ಮನ್‌, ಕನ್ನಡಿಗ ಮನೀಶ್ ಪಾಂಡೆ ಇನ್ನು 2 ಸಿಕ್ಸರ್ ಬಾರಿಸಿದರೆ ಐಪಿಎಲ್‌ನಲ್ಲಿ 100 ಸಿಕ್ಸರ್‌ಗಳ ಮೈಲಿಗಲ್ಲು ಸ್ಥಾಪಿಸಲಿದ್ದಾರೆ.
* ಮುಂಬೈಯ ಆಲ್ ರೌಂಡರ್ ಕೃನಾಲ್ ಪಾಂಡ್ಯ ಮತ್ತು ಹೈದರಾಬಾದ್‌ನ ಶಹಬಾಝ್ ನದೀಮ್ 2 ವಿಕೆಟ್‌ ಪಡೆದರೆ ಐಪಿಎಲ್‌ನಲ್ಲಿ 50 ವಿಕೆಟ್‌ಗಳನ್ನು ಪೂರೈಸಿದಂತಾಗುತ್ತದೆ.

Story first published: Saturday, April 17, 2021, 15:08 [IST]
Other articles published on Apr 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X