ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಅಂತೂ ಗೆಲುವಿನ ನಗೆ ಬೀರಿದ ಮುಂಬೈ; ಪ್ಲೇಆಫ್‌ ಪ್ರವೇಶಕ್ಕೆ ಇನ್ನೆಷ್ಟು ಪಂದ್ಯ ಗೆಲ್ಲಬೇಕು?

IPL 2021: Mumbai indians won against Punjab Kings and have kept their playoff dream alive

ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇಂದು ( ಸೆಪ್ಟೆಂಬರ್ 28 ) ಎರಡು ಪಂದ್ಯಗಳನ್ನು ಆಯೋಜಿಸಲಾಗಿದ್ದು ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಮತ್ತು ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡಗಳು ಸೆಣಸಾಡಿದವು. ಅಬುಧಾಬಿಯ ಶೈಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ನಡುವಿನ ಈ ಪಂದ್ಯ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 42ನೇ ಪಂದ್ಯವಾಗಿತ್ತು.

ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಈ ಪಂದ್ಯ ನಡೆಯುವವರೆಗೂ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳೆರಡೂ ಸಹ ತಲಾ 10 ಪಂದ್ಯಗಳನ್ನಾಡಿ, 6 ಪಂದ್ಯಗಳಲ್ಲಿ ಸೋಲುಂಡು, 4 ಪಂದ್ಯಗಳಲ್ಲಿ ಜಯಗಳಿಸುವ ಮೂಲಕ 8 ಅಂಕಗಳನ್ನು ಪಡೆದಿದ್ದವು. ಹೀಗಾಗಿ ಇಂದು ( ಸೆಪ್ಟೆಂಬರ್ 28 ) ಈ ಎರಡೂ ತಂಡಗಳ ನಡುವೆ ನಡೆದ ಪಂದ್ಯ ಸಾಕಷ್ಟು ನಿರೀಕ್ಷೆ ಮತ್ತು ಕುತೂಹಲಗಳನ್ನು ಹುಟ್ಟು ಹಾಕಿತ್ತು. ಹೀಗೆ ಸಾಕಷ್ಟು ಕುತೂಹಲವನ್ನು ಕೆರಳಿಸಿದ್ದ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 6 ವಿಕೆಟ್‍ಗಳ ಜಯವನ್ನು ಸಾಧಿಸಿ ಟೂರ್ನಿಯಲ್ಲಿ ತನ್ನ ಐದನೇ ಗೆಲುವನ್ನು ಪಡೆದುಕೊಂಡಿದೆ.

ಕೊಹ್ಲಿ-ರೋಹಿತ್ ನಡುವೆ ಬಿರುಕಿದೆ ಎನ್ನುವವರಿಗೆ ಸರಿಯಾದ ಉತ್ತರ ಕೊಟ್ಟ ಕೊಹ್ಲಿಕೊಹ್ಲಿ-ರೋಹಿತ್ ನಡುವೆ ಬಿರುಕಿದೆ ಎನ್ನುವವರಿಗೆ ಸರಿಯಾದ ಉತ್ತರ ಕೊಟ್ಟ ಕೊಹ್ಲಿ

ಈ ಪಂದ್ಯದಲ್ಲಿ ಯಾವ ತಂಡ ಸೋಲುತ್ತದೆಯೋ ಆ ತಂಡ ಬಹುತೇಕ ಟೂರ್ನಿಯಿಂದ ಹೊರಬಿದ್ದಂತೆ ಎಂಬ ಒತ್ತಡದ ನಡುವೆಯೇ ಎರಡೂ ತಂಡಗಳು ಕಣಕ್ಕಿಳಿದಿದ್ದವು. ಇನ್ನು ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಳ್ಳುವುದರ ಮೂಲಕ ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ನೀಡಿದರು. ಹೀಗೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದ ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡ ಆರಂಭದಲ್ಲಿಯೇ ಆಘಾತವನ್ನು ಅನುಭವಿಸಿತು. ತಂಡ 36 ರನ್ ಗಳಿಸಿದ್ದಾಗ ಆರಂಭಿಕ ಆಟಗಾರನಾದ ಮನ್ ದೀಪ್ ಸಿಂಗ್ 15 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಇದರ ಬೆನ್ನಲ್ಲೇ ಸ್ಫೋಟಕ ಆಟಗಾರ ಕ್ರಿಸ್ ಗೇಲ್ 1 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು ಹಾಗೂ ಕೆಎಲ್ ರಾಹುಲ್ 21 ರನ್ ಗಳಿಸಿ ಔಟ್ ಆದರು. ಹೀಗೆ ಪಂಜಾಬ್ ಕಿಂಗ್ಸ್ ತಂಡ ತನ್ನ ಪ್ರಮುಖ 3 ವಿಕೆಟ್‍ಗಳನ್ನು 41 ರನ್‌ಗಳಿಗೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರ ಪಂಜಾಬ್ ಕಿಂಗ್ಸ್ ತಂಡಕ್ಕೆ ಆಸರೆಯಾದ ಏಡನ್ ಮಾರ್ಕ್ರಮ್ 29 ಎಸೆತಗಳಿಗೆ 42 ರನ್ ಚಚ್ಚಿದರು. ಪಂಜಾಬ್ ಕಿಂಗ್ಸ್ ತಂಡದ ಮತ್ತೋರ್ವ ಆಟಗಾರ ನಿಕೋಲಸ್ ಪೂರನ್ 2 ರನ್ ಗಳಿಸಿ ಮತ್ತೊಮ್ಮೆ ನಿರಾಸೆ ಮೂಡಿಸಿದರು ಮತ್ತು ದೀಪಕ್ ಹೂಡಾ 26 ಎಸೆತಗಳಲ್ಲಿ 28 ರನ್ ಗಳಿಸಿ ಔಟಾದರು. ಉಳಿದಂತೆ ಹರ್ ಪ್ರೀತ್ ಬ್ರಾರ್ ಅಜೇಯ 14 ಮತ್ತು ನಾಥನ್ ಎಲ್ಲಿಸ್ ಅಜೇಯ 6 ರನ್ ಗಳಿಸುವುದರ ಮೂಲಕ ಪಂಜಾಬ್ ಕಿಂಗ್ಸ್ ತಂಡ 6 ವಿಕೆಟ್ ನಷ್ಟಕ್ಕೆ 20 ಓವರ್‌ಗಳಲ್ಲಿ 135 ರನ್‌ಗಳನ್ನು ಕಲೆಹಾಕಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲ್ಲಲು 136 ರನ್‌ಗಳ ಗುರಿಯನ್ನು ನೀಡಿತು.

ಆರ್‌ಸಿಬಿಯ ಈ ಸ್ಟಾರ್ ಬ್ಯಾಟ್ಸ್‌ಮನ್‌ಗೆ ಕೃನಾಲ್ ಪಾಂಡ್ಯ ಎದುರಿಸುವ ಧೈರ್ಯ ಇಲ್ಲ ಎಂದ ಮಾಜಿ ಕ್ರಿಕೆಟಿಗ!ಆರ್‌ಸಿಬಿಯ ಈ ಸ್ಟಾರ್ ಬ್ಯಾಟ್ಸ್‌ಮನ್‌ಗೆ ಕೃನಾಲ್ ಪಾಂಡ್ಯ ಎದುರಿಸುವ ಧೈರ್ಯ ಇಲ್ಲ ಎಂದ ಮಾಜಿ ಕ್ರಿಕೆಟಿಗ!

ಹೀಗೆ ಪಂಜಾಬ್ ಕಿಂಗ್ಸ್ ತಂಡ ನೀಡಿದ 136 ರನ್‌ಗಳ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡದ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಕ್ವಿಂಟನ್ ಡಿ ಕಾಕ್ ಉತ್ತಮ ಆರಂಭವನ್ನು ಕಟ್ಟುವಲ್ಲಿ ವಿಫಲರಾದರು. ನಾಯಕ ರೋಹಿತ್ ಶರ್ಮಾ 8 ರನ್‌ಗಳಿಗೆ ನಿರ್ಗಮಿಸಿದರೆ, ಕ್ವಿಂಟನ್ ಡಿ ಕಾಕ್ 27 ರನ್ ಗಳಿಸಿ ಔಟಾದರು. ಇನ್ನು ಸೂರ್ಯಕುಮಾರ್ ಡಕ್ ಔಟ್ ಆಗುವುದರ ಮೂಲಕ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಹೀಗೆ 61 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಸರೆಯಾದದ್ದು ಇಂದು ಇಶಾನ್ ಕಿಶಾನ್ ಬದಲು ತಂಡ ಸೇರಿದ ಸೌರಭ್ ತಿವಾರಿ. ಹೌದು ಸೌರಬ್ ತಿವಾರಿ 37 ಎಸೆತಗಳಲ್ಲಿ 45 ರನ್ ಗಳಿಸುವುದರ ಮೂಲಕ ಮುಂಬೈ ಇಂಡಿಯನ್ಸ್ ತಂಡವನ್ನು ಗೆಲುವಿನೆಡೆಗೆ ಎಳೆದೊಯ್ದರು. ಸೌರಭ್ ತಿವಾರಿ ಔಟ್ ಆದ ಬಳಿಕ ಅಬ್ಬರಿಸಿದ ಹಾರ್ದಿಕ್ ಪಾಂಡ್ಯ 40 ಮತ್ತು ಕೀರನ್ ಪೊಲಾರ್ಡ್ 15 ರನ್ ಗಳಿಸುವುದರ ಮೂಲಕ ಮುಂಬೈ ಇಂಡಿಯನ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಮುಂಬೈ ಇಂಡಿಯನ್ಸ್ 19 ಓವರ್‌ಗಳಲ್ಲಿ 137 ರನ್ ಗಳಿಸಿ 6 ವಿಕೆಟ್‍ಗಳ ಜಯವನ್ನು ಸಾಧಿಸಿದೆ. ಶಮಿ ಮಾಡಿದ 19ನೇ ಓವರ್‌ನಲ್ಲಿ 17 ಓವರ್ ಚಚ್ಚುವುದರ ಮೂಲಕ ಮುಂಬೈ ಇಂಡಿಯನ್ಸ್ ಗೆಲುವಿನ ನಗೆ ಬೀರಿತು.

ಹೀಗೆ ಮುಂಬೈ ಇಂಡಿಯನ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 6 ವಿಕೆಟ್‍ಗಳ ಗೆಲುವು ಸಾಧಿಸುವುದರ ಮೂಲಕ ಪ್ಲೇ ಆಫ್ ಹಂತವನ್ನು ಪ್ರವೇಶಿಸುವ ಕನಸನ್ನು ಇನ್ನೂ ಜೀವಂತವಾಗಿರಿಸಿಕೊಂಡಿದ್ದು ಈ ಕೆಳಕಂಡಂತೆ ಮುಂದಿನ ಪಂದ್ಯಗಳಲ್ಲಿ ಪ್ರದರ್ಶನ ನೀಡಿದರೆ ಪ್ಲೇ ಆಫ್ ಪ್ರವೇಶಿಸುವುದು ಖಚಿತ ಎನ್ನಬಹುದು.

ಉಳಿದ ಪಂದ್ಯಗಳಲ್ಲಿ ಎಷ್ಟು ಗೆಲ್ಲಬೇಕು?

ಉಳಿದ ಪಂದ್ಯಗಳಲ್ಲಿ ಎಷ್ಟು ಗೆಲ್ಲಬೇಕು?

ಇಂದು ( ಸೆಪ್ಟೆಂಬರ್ 28 ) ಪಂಜಾಬ್ ಕಿಂಗ್ಸ್ ವಿರುದ್ದ ಗೆಲುವನ್ನು ಸಾಧಿಸುವುದರ ಮೂಲಕ ಮುಂಬೈ ಇಂಡಿಯನ್ಸ್ ತಂಡ ಟೂರ್ನಿಯಲ್ಲಿ ತನ್ನ ಐದನೇ ಗೆಲುವನ್ನು ದಾಖಲಿಸಿದೆ. ಈ ಮೂಲಕ 10 ಅಂಕಗಳನ್ನು ಪಡೆದು ಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ 5ನೇ ಸ್ಥಾನವನ್ನು ಅಲಂಕರಿಸಿದ್ದು, ಪ್ಲೇ ಆಫ್ ಹಂತವನ್ನು ಪ್ರವೇಶಿಸಲು ಅರ್ಹತೆ ಪಡೆಯಬೇಕೆಂದರೆ ಮುಂಬೈ ಇಂಡಿಯನ್ಸ್ ತಂಡ ತನ್ನ ಮುಂದಿನ ಎಲ್ಲಾ 3 ಪಂದ್ಯಗಳಲ್ಲಿಯೂ ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ.

3 ಪಂದ್ಯಗಳನ್ನು ಗೆಲ್ಲದೇ ಇದ್ದರೆ ಅನ್ಯ ಮಾರ್ಗ?

3 ಪಂದ್ಯಗಳನ್ನು ಗೆಲ್ಲದೇ ಇದ್ದರೆ ಅನ್ಯ ಮಾರ್ಗ?


ಇನ್ನು ಮುಂಬೈ ಇಂಡಿಯನ್ಸ್ ತಂಡ ಪ್ರಸಕ್ತ ಐಪಿಎಲ್ ಟೂರ್ನಿಯ ತನ್ನ ಮುಂದಿನ 3 ಪಂದ್ಯಗಳ ಪೈಕಿ ಮೂರರಲ್ಲಿಯೂ ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ. ಒಂದುವೇಳೆ 3 ಪಂದ್ಯಗಳ ಪೈಕಿ ಒಂದರಲ್ಲಿ ಸೋತು 2 ಪಂದ್ಯಗಳಲ್ಲಿ ಜಯ ಗಳಿಸಿದರೆ, ಉಳಿದ ತಂಡಗಳ ನಡುವಿನ ಪಂದ್ಯಗಳ ಫಲಿತಾಂಶದ ಮೇಲೆ ಮುಂಬೈ ಇಂಡಿಯನ್ಸ್ ತಂಡದ ಪ್ಲೇ ಆಫ್ ಪ್ರವೇಶ ಅವಲಂಬಿತವಾಗಿರಲಿದೆ. ಮುಂಬೈ ಇಂಡಿಯನ್ಸ್ ತಂಡದ ನೆಟ್ ರನ್ ರೇಟ್ ಕೂಡ ಕಡಿಮೆ ಇರುವ ಕಾರಣ ಪ್ಲೇ ಆಫ್ ಹಂತವನ್ನು ಪ್ರವೇಶಿಸಬೇಕೆಂದರೆ ಉಳಿದ ತಂಡಗಳ ಫಲಿತಾಂಶ ಹೆಚ್ಚಾಗಿ ಪ್ರಭಾವ ಬೀರಲಿದೆ.

T 20 ವಿಶ್ವಕಪ್ ನಿಂದ ಮುಂಬೈ ತಂಡದ ತ್ರಿಮೂರ್ತಿಗಳಲ್ಲಿ ಒಬ್ಬರಿಗೆ ಕೊಕ್ | Oneindia Kannada
ಮುಂಬೈ ಇಂಡಿಯನ್ಸ್ ತಂಡದ ಮುಂದಿನ ಎದುರಾಳಿಗಳು

ಮುಂಬೈ ಇಂಡಿಯನ್ಸ್ ತಂಡದ ಮುಂದಿನ ಎದುರಾಳಿಗಳು

ಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವಿನ ನಗೆ ಬೀರಿರುವ ಮುಂಬೈ ಇಂಡಿಯನ್ಸ್ ತಂಡ ತನ್ನ ಮುಂದಿನ ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.

Story first published: Wednesday, September 29, 2021, 10:27 [IST]
Other articles published on Sep 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X