ಐಪಿಎಲ್ 2021 : ಅಬ್ಬರಿಸುವ ಸೂಚನೆ ನೀಡಿದ ನಿಕೋಲಸ್ ಪೂರನ್

2021ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಏಪ್ರಿಲ್ 9ರಂದು ಆರಂಭವಾಗಿ ಮೇ 4ನೇ ತಾರೀಕಿನವರೆಗೂ ಯಾವುದೇ ಅಡಚಣೆಯಿಲ್ಲದೆ ಯಶಸ್ವಿಯಾಗಿ ನಡೆದಿತ್ತು. ನಂತರ ವಿವಿಧ ತಂಡಗಳ ಕೆಲ ಆಟಗಾರರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಪ್ರಸ್ತುತ ಐಪಿಎಲ್ ಟೂರ್ನಿಯನ್ನು ಬಿಸಿಸಿಐ ಮುಂದೂಡಿದೆ. ಇದುವರೆಗೂ 29 ಐಪಿಎಲ್ ಪಂದ್ಯಗಳು ಯಶಸ್ವಿಯಾಗಿ ಮುಗಿದಿದ್ದು 8 ಪಂದ್ಯಗಳನ್ನಾಡಿದ್ದ ಪಂಜಾಬ್ ಕಿಂಗ್ಸ್ ತಂಡ 3 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿ 5 ಪಂದ್ಯಗಳಲ್ಲಿ ಸೋಲುಂಡಿತ್ತು. ಈ ಮೂಲಕ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್ ಮುಂದೂಡಿಕೆಯ ವೇಳೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.

ಪಂಜಾಬ್ ಕಿಂಗ್ಸ್ ತಂಡದ ಪ್ರಮುಖ ಆಟಗಾರರ ಸಾಲಿನಲ್ಲಿದ್ದ ನಿಕೋಲಸ್ ಪೂರನ್ ಕ್ರೀಡಾಭಿಮಾನಿಗಳು ನಿರೀಕ್ಷಿಸಿದಂತೆ ಟೂರ್ನಿಯಲ್ಲಿ ಅಬ್ಬರಿಸಲಿಲ್ಲ. ಈ ಬಾರಿ 6 ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ಮಾಡಿದ ನಿಕೋಲಸ್ ಪೂರನ್ ಕೇವಲ 28 ರನ್ ಗಳಿಸಿ ಟೂರ್ನಿಯಲ್ಲಿ ಇದುವರೆಗೂ ಅತಿ ಕಳಪೆ ಪ್ರದರ್ಶನ ತೋರಿದ ಆಟಗಾರರಲ್ಲೊಬ್ಬ ಎನಿಸಿಕೊಂಡಿದ್ದಾರೆ. 6 ಇನ್ನಿಂಗ್ಸ್‌ ಆಡಿ ಕೇವಲ 28 ರನ್ ಗಳಿಸಿದ್ದು ಮಾತ್ರವಲ್ಲದೆ 4 ಇನ್ನಿಂಗ್ಸ್‌ನಲ್ಲಿ ಡಕ್ಔಟ್ ಆಗುವ ಮೂಲಕ ನಿಕೋಲಸ್ ಪೂರನ್ ತೀವ್ರ ಟೀಕೆಗೆ ಒಳಗಾಗಿದ್ದರು.

ಇದೀಗ ಐಪಿಎಲ್ ಮುಂದೂಡಿಕೆಯ ನಂತರ ಟೂರ್ನಿಯಲ್ಲಿನ ತಮ್ಮ ಕಳಪೆ ಪ್ರದರ್ಶನದ ಬಗ್ಗೆ ನಿಕೋಲಸ್ ಪೂರನ್ ತುಟಿ ಬಿಚ್ಚಿದ್ದಾರೆ. 'ಪ್ರಸ್ತುತ ಐಪಿಎಲ್ ಟೂರ್ನಿ ಮುಂದೂಡಿಕೆಯಾಗಿದೆ ಮತ್ತು ಅದರ ಹಿಂದಿನ ಕಾರಣ ಹೃದಯವಿದ್ರಾವಕವಾಗಿದ್ದು, ಬಿಸಿಸಿಐ ತೆಗೆದುಕೊಂಡ ನಿರ್ಧಾರ ಸರಿಯಾಗಿದೆ. ಆದಷ್ಟು ಬೇಗ ಮತ್ತೆ ಐಪಿಎಲ್ ಟೂರ್ನಿಯನ್ನು ಆಡಲಿದ್ದೇನೆ, ಅಲ್ಲಿಯವರೆಗೂ ಟೂರ್ನಿಯಲ್ಲಿ ನಾನು ತೋರಿದ ಕಳಪೆ ಪ್ರದರ್ಶನವನ್ನು ಪ್ರೇರಣೆಯನ್ನಾಗಿಟ್ಟುಕೊಂಡು ಮತ್ತೆ ಯಶಸ್ಸಿನ ಹಾದಿಗೆ ಮರಳುತ್ತೇನೆ. ಎಲ್ಲರೂ ಸುರಕ್ಷಿತರಾಗಿರಿ' ಎಂದು ಪೂರನ್ ತಿಳಿಸಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ತಾವು ತೋರಿದ ಕಳಪೆ ಪ್ರದರ್ಶನವನ್ನೇ ಪ್ರೇರಣೆಯಾಗಿಟ್ಟುಕೊಂಡು ಮುಂಬರುವ ಐಪಿಎಲ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ನಿಕೋಲಸ್ ಪೂರನ್ ವ್ಯಕ್ತಪಡಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Friday, May 7, 2021, 14:41 [IST]
Other articles published on May 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X