ಐಪಿಎಲ್ 2021: ಸತತ ಗೆಲುವಿನಿಂದ ಅತ್ಯುತ್ಸಾಹವಿಲ್ಲ ಎಂದ ವಿರಾಟ್ ಕೊಹ್ಲಿ

ಐಪಿಎಲ್‌ನ ಮೊದಲ ಎರಡು ಪಂದ್ಯಗಳಲ್ಲಿ ಆರ್‌ಸಿಬಿ ಭರ್ಜರಿ ಗೆಲುವು ಸಾಧಿಸಲು ಸಾಧ್ಯವಾಗಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈಗೆ ಸೋಲುಣಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಂತರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರೋಚಕ ಗೆಲುವು ಸಾಧಿಸಿದೆ. ಆದರೆ ಈ ಎರಡು ಗೆಲುವಿನಿಂದ ನಾನು ಅತಿಯಾದ ಉತ್ಸಾಹವನ್ನು ಹೊಂದಿಲ್ಲ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ ರೋಚಕ ರೀತಿಯಲ್ಲಿ ಗೆಲುವು ಸಾಧಿಸಿತು. ಚೆನ್ನೈನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ನೀಡಿದ 150 ರನ್‌ಗಳನ್ನು ಬೆನ್ನಟ್ಟುವ ಸಂದರ್ಭದಲ್ಲಿ ವಾರ್ನರ್ ಪಡೆ ತನ್ನ ಅಂತಿಮ 7 ವಿಕೆಟ್‌ಗಳನ್ನು ಕೇವಲ 28 ರನ್‌ಗಳ ಅಂತರದಲ್ಲಿ ಕಳೆದುಕೊಂಡಿತು. ಈ ಮೂಲಕ ಆರ್‌ಸಿಬಿ ಶರಣಾಯಿತು.

ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಆರ್‌ಸಿಬಿ!

"ತಂಡದ ಪ್ರದರ್ಶನ ಹೆಮ್ಮೆ ಮೂಡಿಸಿದೆ. ನಮ್ಮ ಪಾಲಿಗೆ ಇದು ಆದ್ಭುತವಾದ ಆಟ. ಬಹುಶಃ ಇಲ್ಲಿಂದ ಇದು ಮತ್ತಷ್ಟು ಕಠಿಣವಾಗುತ್ತಾ ಸಾಗುತ್ತದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾವು ಗೆಲುವಿನಿಂದ ಅತ್ಯುತ್ಸಾಹವನ್ನು ಹೊಂದಿಲ್ಲ" ಎಂದು ವಿರಾಟ್ ಕೊಹ್ಲಿ ಪಂದ್ಯದ ಅಂತ್ಯದ ಬಳಿಕ ಹೇಳಿಕೆ ನೀಡಿದ್ದಾರೆ.

"ಮುಂಬೈ ವಿರುದ್ಧದ ಪಂದ್ಯದಲ್ಲೂ ನೀವು ಗಮನಿಸಿರುತ್ತೀರಿ. ನೀವು ನಿಜಕ್ಕೂ ಪಂದ್ಯದಿಂದ ಹೊರಕ್ಕೆ ಬಿದ್ದಿರುವುದಿಲ್ಲ. ಕೆಲ ಹೆಚ್ಚುವರಿ ಅವಕಾಶಗಳು ಮಧ್ಯದ ಓವರ್‌ಗಳಲ್ಲಿ ಪಂದ್ಯದ ಮೇಲೆ ದೊಡ್ಡ ಪರಿಣಾಮವನ್ನು ಉಂಟುಮಾಡುತ್ತದೆ" ಎಂದು ಎಂದು ಅಂತಿಮ ಹಂತದಲ್ಲಿ ತಿರುವು ಪಡೆದ ವಿಚಾರವಾಗಿ ಕೊಹ್ಲಿ ಅಭಿಪ್ರಾಯ ಹಂಚಿಕೊಂಡರು.

ಐಪಿಎಲ್ 2021: ಹೈದರಾಬಾದ್ ವಿರುದ್ಧ ಬೆಂಗಳೂರಿಗೆ ರೋಚಕ ಜಯ

"ನಾವು 149 ರನ್‌ ಗಳಿಸಲು ಕಷ್ಟಪಟ್ಟಿದ್ದೇವೆ ಎನ್ನುವುದಾದರೆ ಅದು ಅವರಿಗೂ ಕಠಿಣವಾಗಿರಲಿದೆ ಎಂದು ನಾನು ತಂಡದ ಸದಸ್ಯರಿಗೆ ಸ್ಪಷ್ಟವಾಗಿ ಹೇಳೀದ್ದೆ. 150 ರನ್‌ಗಳ ಸವಾಲು ನೀಡಿ ನಾವು ಗೆಲ್ಲ ಬಹುದು ಎಂದು ನಿಜಕ್ಕೂ ನಾನು ನಂಬಿದ್ದೆ. ಚೆಂಡು ಕಳೆಯದಾದಷ್ಟೂ ಪಿಚ್ ಕಠಿಣವಾಗುತ್ತದೆ ಸಾಗಿತ್ತು" ಎಂದಿದ್ದಾರೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ

For Quick Alerts
ALLOW NOTIFICATIONS
For Daily Alerts
Story first published: Thursday, April 15, 2021, 9:10 [IST]
Other articles published on Apr 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X