ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಬಿಡುಗಡೆಗೊಳಿಸಿದಕ್ಕೆ ಧನ್ಯವಾದ ಎಂದ ಪಾರ್ಥಿವ್ ಪಟೇಲ್

IPL 2021: Parthiv Patel says honour to be released after retirement

ಐಪಿಎಲ್ 14ನೇ ಆವೃತ್ತಿಯ ಚಟುವಟಿಕೆಗಳಿಗೆ ಅಧಿಕೃತವಾಗಿ ಚಾಲನೆ ದೊರೆತಿದೆ. ಬುಧವಾರ ಎಲ್ಲಾ 8 ಫ್ರಾಂಚೈಸಿಗಳು ತಮ್ಮ ತಂಡದಲ್ಲಿ ಮುಂಬರುವ ಆವೃತ್ತಿಯಲ್ಲಿ ಉಳಿಸಿಕೊಳ್ಳಲು ಬಯಸಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದವು. ಇದರಲ್ಲಿ ಬೆಂಗಳೂರು ಮೂಲದ ಫ್ರಾಂಚೈಸಿ ಆರ್‌ಸಿಬಿ ಕೂಡ ಉಳಿಸಿಕೊಳ್ಳುವ ಹಾಗೂ ಬಿಡುಗಡೆಗೊಳ್ಳುವ ಆಟಗಾರರ ಮಾಹಿತಿಯನ್ನು ನೀಡಿದ್ದು ಟೀಮ್ ಇಂಡಿಯಾದ ಮಾಜಿ ಆಟಗಾರ ಪಾರ್ಥೀವ್ ಪಟೇಲ್ ಕೂಡ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಆರ್‌ಸಿಬಿ ಬಿಡುಗಡೆಯ ಪಟ್ಟಿಯಲ್ಲಿ ಕಾಣಿಸಿಕೊಂಡ ನಂತರ ಪಾರ್ಥೀವ್ ಪಟೇಲ್ ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಪ್ರತಿಕ್ರಿಯೆಯನ್ನು ಹಂಚಿಕೊಂಡಿದ್ದಾರೆ. ಆದರೆ ಈ ಟ್ವೀಟ್‌ನಲ್ಲಿ ಪಾರ್ಥೀವ್ ಪಟೇಲ್ ಆರ್‌ಸಿಬಿಗೆ ಧನ್ಯವಾದಗಳನ್ನು ಹೇಳಿದ್ದು ಇದು ಆರ್‌ಸಿಬಿ ಮ್ಯಾನೇಜ್‌ಮೆಂಟ್‌ಗೆ ತಿವಿದಂತೆ ಭಾಸವಾಗುತ್ತಿದೆ.

ಐಪಿಎಲ್ 2021: ಎಲ್ಲಾ 8 ತಂಡಗಳು ಉಳಿಸಿಕೊಂಡ, ಬಿಟ್ಟುಕೊಟ್ಟ ಆಟಗಾರರ ಸಂಪೂರ್ಣ ಪಟ್ಟಿಐಪಿಎಲ್ 2021: ಎಲ್ಲಾ 8 ತಂಡಗಳು ಉಳಿಸಿಕೊಂಡ, ಬಿಟ್ಟುಕೊಟ್ಟ ಆಟಗಾರರ ಸಂಪೂರ್ಣ ಪಟ್ಟಿ

ಕಳೆದ ಐಪಿಲ್ ಆವೃತ್ತಿಯ ಬಳಿಕ ಪಾರ್ಥೀವ್ ಪಟೇಲ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸುತ್ತಿರುವುದಾಗಿ ಪ್ರಕಟಿಸಿದರು. ಹೀಗಾಗಿ ಆರ್‌ಸಿಬಿ ಬಿಡುಗಡೆಗೊಳಿಸುತ್ತಿರುವ ಪಟ್ಟಿಯಲ್ಲಿ ಪಾರ್ಥೀವ್ ಪಟೇಲ್ ಅವರನ್ನು ಹೆಸರಿಸಿದರೂ "ನಿವೃತ್ತರಾಗಿದ್ದಾರೆ" ಎಂದು ಉಲ್ಲೇಖಿಸಿತ್ತು.

ಈ ಬಗ್ಗೆ ಪಾರ್ಥೀವ್ ಪಟೇಲ್ ಟ್ವಿಟ್ಟರ್ ಖಾತೆಯಲ್ಲಿ " ನಿವೃತ್ತಿಯನ್ನು ಘೋಷಿಸಿದ ನಂತರ ಬಿಡುಗಡೆಗೊಳಿಸಿರುವುದಕ್ಕೆ ಗೌರವ ಸಲ್ಲಿಸುತ್ತಿದ್ದೇನೆ. ...ಧನ್ಯವಾದಗಳು ಆರ್‌ಸಿಬಿ" ಎಂದು ಪಾರ್ಥೀವ್ ಪಟೇಲ್ ಈ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಪಾರ್ಥೀವ್ ಪಟೇಲ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ ಮರು ದಿನವೇ ಮುಂಬೈ ಇಂಡಿಯನ್ಸ್‌ನ ಪ್ರತಿಭಾನ್ವೇಷಣಾ ತಂಡಕ್ಕೆ ಸೇರಿಕೊಂಡಿದ್ದರು.

ಐಪಿಎಲ್ 2021: ಮುಂಬೈ ಇಂಡಿಯನ್ಸ್‌ ಉಳಿಸಿಕೊಂಡಿರುವ, ಬಿಟ್ಟಿರುವ ಆಟಗಾರರ ಪಟ್ಟಿಐಪಿಎಲ್ 2021: ಮುಂಬೈ ಇಂಡಿಯನ್ಸ್‌ ಉಳಿಸಿಕೊಂಡಿರುವ, ಬಿಟ್ಟಿರುವ ಆಟಗಾರರ ಪಟ್ಟಿ

ಆರ್‌ಸಿಬಿ ತಂಡದಿಂದ ಬಿಡುಗಡೆಯಾದ ಆಟಗಾರರು: ಉಮೇಶ್ ಯಾದವ್, ಕ್ರಿಸ್ ಮೋರಿಸ್, ಮೊಯೀನ್ ಅಲಿ, ಆರೋನ್ ಫಿಂಚ್, ಇಸುರು ಉದಾನಾ, ಡೇಲ್ ಸ್ಟೇನ್, ಗುರ್ಕೀರತ್ ಮನ್, ಶಿವಂ ದುಬೆ, ಪವನ್ ನೇಗಿ, ಪಾರ್ಥಿವ್ ಪಟೇಲ್ (ನಿವೃತ್ತಿ)

Story first published: Thursday, January 21, 2021, 13:07 [IST]
Other articles published on Jan 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X