ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಪಂಜಾಬ್ vs ರಾಜಸ್ಥಾನ ಹೆಡ್ ಟು ಹೆಡ್ ಅಂಕಿಅಂಶದಲ್ಲಿ ಯಾರಿಗೆ ಮೇಲುಗೈ

IPL 2021, PBKS vs RR Head to Head record and Full squads

ಐಪಿಎಲ್ 14ನೇ ಆವೃತ್ತಿಯ ಎರಡನೇ ಚರಣದ ಪಂದ್ಯಗಳಿಗೆ ಅದ್ಭುತ ಚಾಲನೆ ದೊರೆತಿದೆ. ಈಗಾಗಲೇ ಎರಡನೇ ಚರಣದಲ್ಲಿ ಎರಡು ಪಂದ್ಯಗಳು ಮುಕ್ತಾಯವಾಗಿದ್ದು ಇಂದು ಟೂರ್ನಿಯ 32ನೇ ಪಂದ್ಯ ನಡೆಯಲಿದೆ. ಇಂದು ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು ಕುತೂಹಲ ಮೂಡಿಸಿದೆ.

ಈ ಬಾರಿಯ ಆವೃತ್ತಿಯಲ್ಲಿಯೂ ಈ ಎರಡು ತಂಡಗಳಿಂದ ಹೇಳಿಕೊಳ್ಳುವಂತಾ ಪ್ರದರ್ಶನ ಬಂದಿಲ್ಲ. ಎರಡಯ ತಂಡಗಳು ಕೂಡ ಅಂಕಪಟ್ಟಿಯಲ್ಲಿ ಸದ್ಯ 6 ಹಾಗೂ 7ನೇ ಸ್ಥಾನವನ್ನು ಪಡೆದುಕೊಂಡಿದೆ. ಹೀಗಾಗಿ ಈ ಪಂದ್ಯದಲ್ಲಿ ಗೆಲುವು ಸಾಧಿಸುವುದು ಎರಡು ತಂಡಗಳಿಗೂ ಅನಿವಾರ್ಯವಾಗಿದೆ. ಸೋತ ತಂಡ ಟೂರ್ನಿಯಲ್ಲಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಸಾಕಷ್ಟು ಪೈಪೋಟಿಯಿಂದ ಈ ಪಂದ್ಯ ನಡೆಯುವ ಸಾಧ್ಯತೆಯಿದೆ.

ಐಪಿಎಲ್ ಇತಿಹಾಸದಲ್ಲಿ 7ನೇ ಬಾರಿಗೆ ಮೂರಂಕಿ ದಾಟಲು ವಿಫಲವಾದ ಆರ್‌ಸಿಬಿಐಪಿಎಲ್ ಇತಿಹಾಸದಲ್ಲಿ 7ನೇ ಬಾರಿಗೆ ಮೂರಂಕಿ ದಾಟಲು ವಿಫಲವಾದ ಆರ್‌ಸಿಬಿ

ರಾಜಸ್ಥಾನ್ ರಾಯಲ್ಸ್ ತಂಡ ಹಾರ್ಡ್ ಹಿಟ್ಟಿಂಗ್ ಆರಂಭಿಕರಾದ ಲಿಯಾಮ್ ಲಿವಿಂಗ್ಸ್ಟನ್ ಹಾಗೂ ಎವಿನ್ ಲೂಯಿಸ್ ಅವರಿಂದ ಅದ್ಭುತ ಆರಂಭದ ನಿರೀಕ್ಷೆಯನ್ನು ಹೊಂದಿದೆ. ಮತ್ತೊಂದೆಡೆ ಪಂಜಾಬ್ ಕಿಂಗ್ಸ್ ಪಡೆ ಬರ್ತ್‌ಡೇ ಬಾಯ್ ಕ್ರಿಸ್ ಗೇಲ್, ನಾಯಕ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅವರಿಂದ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ವಿಶ್ವಾಸವನ್ನು ಹೊಂದಿದೆ. ಆದರೆ ರಾಜಸ್ಥಾನ್ ರಾಯಲ್ಸ್‌ಗೆ ಈ ಬಾರಿ ಜೋಸ್ ಬಟ್ಲರ್ ಅಲಭ್ಯತೆ ಖಂಡಿತಾ ಕಾಡಲಿದೆ. ಈ ಸ್ಥಾನಕ್ಕೆ ಲೂಯಿಸ್ ಆಗಮಿಸಿರುವುದು ತಂಡದ ಬ್ಯಾಟಿಂಗ್ ಪಡೆಗೆ ಶಕ್ತಿ ನೀಡಿದೆ. ಇನ್ನು ಲಿಯಾಮ್ ಲಿವಿಂಗ್ಸ್ಟನ್ ಇತ್ತೀಚೆಗಷ್ಟೇ ಅಂತ್ಯವಾದ 'ದಿ ಹಂಡ್ರೆಡ್' ಲೀಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದು ಐಪಿಎಲ್‌ನಲ್ಲಿಯೂ ಈ ಪ್ರದರ್ಶನ ಮುಂದುವರಿಸುವ ನಿರೀಕ್ಷೆಯಿದೆ.

ಐಪಿಎಲ್: ಕೆಕೆಆರ್ ವಿರುದ್ಧದ ಹೀನಾಯ ಸೋಲಿಗೆ ಕಾರಣ ಯಾರೆಂಬುದನ್ನು ಬಹಿರಂಗಪಡಿಸಿದ ಕೊಹ್ಲಿಐಪಿಎಲ್: ಕೆಕೆಆರ್ ವಿರುದ್ಧದ ಹೀನಾಯ ಸೋಲಿಗೆ ಕಾರಣ ಯಾರೆಂಬುದನ್ನು ಬಹಿರಂಗಪಡಿಸಿದ ಕೊಹ್ಲಿ

ಎರಡು ತಂಡಗಳ ಸಂಪೂರ್ಣ ಸ್ಕ್ವಾಡ್
ಪಂಜಾಬ್ ಕಿಂಗ್ಸ್ (ಪಿಬಿಕೆಎಸ್): ಕೆಎಲ್ ರಾಹುಲ್ (ವಿಕೆಟ್ ಕೀಪರ್/ನಾಯಕ), ಮಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ನಿಕೋಲಸ್ ಪೂರನ್, ದೀಪಕ್ ಹೂಡಾ, ಶಾರುಖ್ ಖಾನ್, ರವಿ ಬಿಶ್ನೋಯ್, ಆದಿಲ್ ರಶೀದ್, ಮೊಹಮ್ಮದ್ ಶಮಿ, ಹರಪ್ರೀತ್ ಬ್ರಾರ್, ಐಡೆನ್ ಮಾರ್ಕ್ರಮ್, ನಾಥನ್ ಎಲ್ಲಿಸ್, ಇಶಾನ್ ಪೊರೆಲ್, ಕ್ರಿಸ್ ಜೋರ್ಡಾನ್, ಜಲಜ್ ಸಕ್ಸೇನಾ, ಮೊಯಿಸ್ ಹೆನ್ರಿಕ್ಸ್, ಪ್ರಭಸಿಮ್ರಾನ್ ಸಿಂಗ್, ಮಂದೀಪ್ ಸಿಂಗ್, ಮುರುಗನ್ ಅಶ್ವಿನ್, ಸರ್ಫರಾಜ್ ಖಾನ್, ಫ್ಯಾಬಿಯನ್ ಅಲೆನ್, ಸೌರಭ್ ಕುಮಾರ್, ಉತ್ಕರ್ಶ್ ಸಿಂಗ್, ದರ್ಶನ್ ನಲ್ಕಂಡೆ, ಅರ್ಷದೀಪ್ ಸಿಂಗ್

ರಾಜಸ್ಥಾನ ರಾಯಲ್ಸ್ (ಆರ್ಆರ್): ಎವಿನ್ ಲೂಯಿಸ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್ / ನಾಯಕ), ರಿಯಾನ್ ಪರಾಗ್, ಶಿವಂ ದುಬೆ, ರಾಹುಲ್ ತೆವಾಟಿಯಾ, ಕ್ರಿಸ್ ಮೋರಿಸ್, ಕಾರ್ತಿಕ್ ತ್ಯಾಗಿ, ಚೇತನ್ ಸಕಾರಿಯಾ, ಮುಸ್ತಫಿಜುರ್ ರಹಮಾನ್, ತಬ್ರೈಜ್ ಶಮ್ಸಿ, ಶ್ರೇಯಸ್ ಗೋವಿಲ್, ಲಿಯಾಮ್ ಲಿವಿಂಗ್ಸ್ಟನ್, ಜಯ್‌ದೇವ್ ಉನಾದ್ಕಟ್, ಡೇವಿಡ್ ಮಿಲ್ಲರ್, ಮನನ್ ವೊಹ್ರಾ, ಕೆಸಿ ಕರಿಯಪ್ಪ, ಗ್ಲೆನ್ ಫಿಲಿಪ್ಸ್, ಮಹಿಪಾಲ್ ಲೊಮರ್, ಓಶಾನೆ ಥಾಮಸ್, ಮಯಾಂಕ್ ಮಾರ್ಕಂಡೆ, ಅನುಜ್ ರಾವತ್, ಜೆರಾಲ್ಡ್ ಕೊಯೆಟ್ಜಿ, ಕುಲ್ದಿಪ್ ಯಾದವ್, ಆಕಾಶ್ ಸಿಂಗ್

RCB vs KKR ಪಂದ್ಯದ ನಡುವೆ ಕಾಣಿಸಿಕೊಂಡ ಕಿಚ್ಚ Sudeep | Oneindia Kannada

ಹೆಡ್‌ ಟು ಹೆಟ್ ಅಂಕಿ ಅಂಶ: ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್‌ನಲ್ಲಿ ಒಟ್ಟು 22 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ ರಾಜಸ್ತಾನ್ ರಾಯಲ್ಸ್ ಉತ್ತಮ ದಾಖಲೆ ಹೊಂದಿದ್ದು ಪಂಜಾಬ್ ಕಿಂಗ್ಸ್ ವಿರುದ್ಧ 12 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಪಂಜಾಬ್ 10 ಪಂದ್ಯಗಳಲ್ಲಿ ಗೆದ್ದುಕೊಂಡಿದೆ.

Story first published: Tuesday, September 21, 2021, 13:20 [IST]
Other articles published on Sep 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X