ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಐಪಿಎಲ್ ದ್ವಿತೀಯ ಹಂತದಲ್ಲೂ ಮತ್ತೆ ಕೋವಿಡ್-19 ಭೀತಿ!

IPL 2021: Possible COVID scare in IPL second leg, says report

ಅಬುಧಾಬಿ: ಭಾರತದಲ್ಲಿ ಏಪ್ರಿಲ್ 9ರಂದು ಆರಂಭಗೊಂಡಿದ್ದ 2021ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಕೋವಿಡ್-19 ಕಾರಣದಿಂದಾಗಿ ಮೇ 4ರಂದು ನಿಲುಗಡೆಯಾಗಿತ್ತು. ಆವತ್ತು ನಿಲುಗಡೆಯಾಗಿದ್ದ ಟೂರ್ನಿ ಸೆಪ್ಟೆಂಬರ್ 19ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌(ಯುಎಇ) ನಲ್ಲಿ ನಡೆಯುತ್ತಿದೆ. ನಗದು ಶ್ರೀಮಂತ ಟೂರ್ನಿಯಲ್ಲಿ ಮತ್ತೆ ಕೋವಿಡ್-19 ಭೀತಿ ಶುರುವಾಗಿದೆ ಎಂದು ಹೇಳಲಾಗುತ್ತಿದೆ.

ಐಪಿಎಲ್ 2021: ಪ್ರಮುಖ ಆಟಗಾರನ ಹೊರಗಿಟ್ಟಿದ್ದಕ್ಕೆ ಅನಿಲ್ ಕುಂಬ್ಳೆ ಟ್ರೋಲ್ಐಪಿಎಲ್ 2021: ಪ್ರಮುಖ ಆಟಗಾರನ ಹೊರಗಿಟ್ಟಿದ್ದಕ್ಕೆ ಅನಿಲ್ ಕುಂಬ್ಳೆ ಟ್ರೋಲ್

ಭಾರತದಲ್ಲಿ ಐಪಿಎಲ್ ನಡೆಯುತ್ತಿದ್ದಾಗ ಕೋವಿಡ್ ಪ್ರಕರಣಗಳು ಐಪಿಎಲ್ ಬಯೋಬಬಲ್ ಒಳಗೂ ಕಾಣಿಸಿಕೊಂಡಿದ್ದವು. ಹಲವಾರು ಫ್ರಾಂಚೈಸಿಗಳ ಆಟಗಾರರು, ಕೋಚ್‌ಗಳು, ಬೆಂಬಲ ಸಿಬ್ಬಂದಿ ಕೋವಿಡ್ ಸೋಂಕಿಗೆ ತುತ್ತಾಗಿದ್ದರು. ಹೀಗಾಗಿ ಆರಂಭಗೊಂಡಿದ್ದ ಟೂರ್ನಿಯನ್ನು ಅರ್ಧಕ್ಕೆ ನಿಲ್ಲಿಸುವ ನಿರ್ಧಾರ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ತಾಳಿತ್ತು.

ಒಬ್ಬ ಆಟಗಾರನಿಗೆ ಕೊರೊನಾ ಸೋಂಕು

ಒಬ್ಬ ಆಟಗಾರನಿಗೆ ಕೊರೊನಾ ಸೋಂಕು

ಈಗ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯುತ್ತಿರುವ ದ್ವಿತೀಯ ಹಂತದ ಟೂರ್ನಿಯಲ್ಲೂ ಒಬ್ಬ ಆಟಗಾರನಿಗೆ ಕೋವಿಡ್-19 ಸೋಂಕು ತಗುಲಿರುವುದಾಗಿ ಹೇಳಲಾಗುತ್ತಿದೆ. ಹೀಗಾಗಿ ಸೆಪ್ಟೆಂಬರ್ 22ರಂದು ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ನಡುವಿನ ಪಂದ್ಯಕ್ಕೆ ತೊಡಕಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಐಪಿಎಲ್ ಆಟಗಾರರಲ್ಲಿ ಒಬ್ಬ ಆಟಗಾರನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಇಂದು (ಸೆಪ್ಟೆಂಬರ್ 22) ನಡೆಯಬೇಕಿರುವ ಡಿಸಿ vs ಎಸ್‌ಆರ್‌ಎಚ್ ನಡುವಿನ ಪಂದ್ಯ ಆಟಗಾರರಿಗೆ ನಡೆಸಲಾಗಿರುವ ಎರಡನೇ ಕೋವಿಡ್ ಟೆಸ್ಟ್‌ನ ಫಲಿತಾಂಶವನ್ನು ಅವಲಂಭಿಸಿದೆ ಎನ್ನಲಾಗಿದೆ. ಒಂದು ವೇಳೆ ಆಗ ಆಟಗಾರರ ಫಲಿತಾಂಶ ಪಾಸಿಟಿವ್ ಬಂದರೆ ಪಂದ್ಯ ಮುಂದೂಡಲ್ಪಡಲೂಬಹುದು. ಒಬ್ಬ ಆಟಗಾರನಿಗೆ ಸೋಂಕು ಪಾಸಿಟಿವ್ ಬಂದ ಬೆನ್ನಲ್ಲೇ ಇನ್ನೊಂದಿಷ್ಟು ಆಟಗಾರರು ಎರಡನೇ ಬಾರಿಗೆ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದಾರೆ.

ಆರು ಮಂದಿ ಐಸೊಲೇಶನ್

ಆರು ಮಂದಿ ಐಸೊಲೇಶನ್

ಸನ್ ರೈಸರ್ಸ್ ಹೈದರಾಬಾದ್ ವೇಗಿ ಟಿ ನಟರಾಜನ್‌ಗೆ ಕೋವಿಡ್ 19 ಸೋಂಕು ಪಾಸಿಟಿವ್ ಬಂದಿರುವುದಾಗಿ ವರದಿಯಾಗಿದೆ. ಅವರು ಈಗ ತಂಡದಿಂದ ಪ್ರತ್ಯೇಕವಿದ್ದಾರೆ. ನಟರಾಜನ್‌ಗೆ ಕೋವಿಡ್ ಪಾಸಿಟಿವ್ ಬಂದಿದೆಯಾದರೂ ಅವರಿಗೆ ಯಾವುದೇ ರೋಗ ಗುಣಲಕ್ಷಣಗಳು ಕಂಡುಬಂದಿಲ್ಲ. ಆದರೆ ನಟರಾಜ್ ಅವರನ್ನು ಹತ್ತಿರದಲ್ಲಿ ಸಂಪರ್ಕಿಸಿದ್ದ ಸನ್ ರೈಸರ್ಸ್ ಹೈದರಾಬಾದ್‌ನ ಆಟಗಾರ ವಿಜಯ್ ಶಂಕರ್, ಟೀಮ್ ಮ್ಯಾನೇಜರ್ ವಿಜಯ್ ಕುಮಾರ್, ಫಿಸಿಯೋ ಥೆರಪಿಸ್ಟ್ ಶ್ಯಾಮ್ ಸುಂದರ್ ಜೆ, ವೈದ್ಯ ಅಂಜನ ವನನ್, ಲಾಜಿಸ್ಟಿಕ್ಸ್ ಮ್ಯಾನೇಜರ್ ತುಷಾರ್ ಖೆಡ್ಕರ್, ನೆಟ್ ಬೌಲರ್ ಪೆರಿಯಸಾಮಿ ಗಣೇಶನ್ ಮೊದಲಾದವರು ಮುನ್ನೆಚ್ಚರಿಕೆಯಾಗಿ ಐಸೋಲೇಶನ್‌ನಲ್ಲಿದ್ದು ಎರಡನೇ ಬಾರಿಗೆ ಪರೀಕ್ಷೆ ನಡೆಸಿಕೊಂಡಿದ್ದಾರೆ. ನೆಮ್ಮದಿಯ ಸಂಗತಿಯೆಂದರೆ ಅವರೆಲ್ಲರಿಗೂ ಕೋವಿಡ್ ನೆಗೆಟಿವ್ ಬಂದಿರುವುದಾಗಿ ತಿಳಿದು ಬಂದಿದೆ.

ಡೆಲ್ಲಿ-ಹೈದರಾಬಾದ್ ಪಂದ್ಯ ನಡೆಯುತ್ತಾ?

ಡೆಲ್ಲಿ-ಹೈದರಾಬಾದ್ ಪಂದ್ಯ ನಡೆಯುತ್ತಾ?

ಆಗಲೇ ಹೇಳಿದಂತೆ ಒಬ್ಬ ಆಟಗಾರನಿಗೆ ಕೋವಿಡ್ ಪಾಸಿಟಿವ್ ಬಂದು ಉಳಿದ ಅನುಮಾನಾಸ್ಪದ ಆಟಗಾರರನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರ ಕೋವಿಡ್ ವರದಿ ಕೂಡ ನೆಗೆಟಿವ್ ಬಂದಿದೆ. ಹೀಗಾಗಿ ಸೆಪ್ಟೆಂಬರ್ 19ರ ಬುಧವಾರ ನಡೆಯಬೇಕಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಇಂಡಿಯನ್ ಪ್ರೀಮಿಯರ್ ಲೀಗ್‌ 33ನೇ ಪಂದ್ಯ ವೇಳಾಪಟ್ಟಿಯಂತೆ ನಡೆಯಲಿದೆ ಎಂಬ ಮಾಹಿತಿ ಲಭಿಸಿದೆ. ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಈ ಪಂದ್ಯ 7.30 PMಗೆ ಆರುವಾಗಲಿದೆ. ಸೆಪ್ಟೆಂಬರ್‌ 19ರಿಂದ ಅಕ್ಟೋಬರ್‌ 15ರ ವರೆಗೆ ಐಪಿಎಲ್ ದ್ವಿತೀಯ ಹಂತದ ಪಂದ್ಯಗಳು ನಡೆಯಲಿವೆ. ಅದಾದ ಬಳಿಕ ಟಿ20 ವಿಶ್ವಕಪ್‌ ಟೂರ್ನಿ ಯುಎಇ ಮತ್ತು ಓಮನ್‌ನಲ್ಲಿ ನಡೆಯುವುದರಲ್ಲಿದೆ.ಮುಂದೆ ಐಪಿಎಲ್‌ನಲ್ಲೇನಾದರೂ ಹೆಚ್ಚಿನ ಕೋವಿಡ್ ಪ್ರಕರಣಗಳು ಕಾಣಿಸಿ ಪಂದ್ಯಗಳು ಮತ್ತೆ ನಿಲುಗಡೆಯಾಗುವಂತಾದರೆ ಟಿ20 ವಿಶ್ವಕಪ್ ಆಯೋಜನೆಯೂ ಸಮಸ್ಯೆಗೀಡಾಗಲಿದೆ.

Story first published: Wednesday, September 22, 2021, 16:32 [IST]
Other articles published on Sep 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X