ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ 2021: ಡೆಲ್ಲಿ ಕ್ಯಾಪಿಟಲ್ಸ್ ಸೇರಿದ ಮಾಜಿ ಕ್ರಿಕೆಟರ್ ಪ್ರವೀಣ್ ಆಮ್ರೆ

IPL 2021: Pravin Amre joins Delhi Capitals as assistant coach

ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಪ್ರವೀಣ್ ಆಮ್ರೆ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸಹ ಕೋಚ್ ಆಗಿ ಸೇರಿಕೊಂಡಿದ್ದಾರೆ. ಬುಧವಾರ (ಜನವರಿ 6) ಡೆಲ್ಲಿ ಸಹಾಯಕ ಕೋಚ್ ಆಗಿ ಆಮ್ರೆ ಆಯ್ಕೆಯಾಗಿದ್ದು, ಮುಂದಿನ ಎರಡು ಐಪಿಎಲ್ ಸೀಸನ್‌ಗಳಲ್ಲಿ ತಂಡದಲ್ಲಿರಲಿದ್ದಾರೆ.

ಭಾರತ vs ಆಸಿಸ್, 3ನೇ ಟೆಸ್ಟ್: ಸಮಯ, ದಿನಾಂಕ, ಆಡುವ ಬಳಗ ಮತ್ತು ನೇರಪ್ರಸಾರಭಾರತ vs ಆಸಿಸ್, 3ನೇ ಟೆಸ್ಟ್: ಸಮಯ, ದಿನಾಂಕ, ಆಡುವ ಬಳಗ ಮತ್ತು ನೇರಪ್ರಸಾರ

52ರ ಹರೆಯದ ಪ್ರವೀಣ್ ಆಮ್ರೆ, ಈ ಮೊದಲು 2014ರಿಂದ 2019ರ ವರೆಗೆ ಡೆಲ್ಲಿ ಕ್ಯಾಪಿಟಲ್ಸ್‌ನ ಟ್ಯಾಲೆಂಟ್ ಸ್ಕೌಟ್‌ ಆಗಿದ್ದರು. ಸದ್ಯ ತಂಡದ ಕೋಚಿಂಗ್ ವಿಭಾಗಕ್ಕೆ ಸೇರ್ಪಡೆಗೊಂಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ಗೆ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್‌ ಮುಖ್ಯ ಕೋಚ್ ಆಗಿದ್ದಾರೆ.

'ಜವಾಬ್ದಾರಿ ನೀಡಿದ್ದಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿರ್ವಹಣಾ ಸಮಿತಿಗೆ ನಾನು ಆಭಾರಿಯಾಗಿದ್ದೇನೆ. ಐಪಿಎಲ್ 2020ರಲ್ಲಿ ಡೆಲ್ಲಿ ಚೊಚ್ಚಲ ಬಾರಿಗೆ ಫೈನಲ್‌ಗೆ ಪ್ರವೇಶಿಸಿದ್ದರ ಬೆನ್ನಲ್ಲೇ ಈ ಅವಕಾಶ ಲಭಿಸಿದ್ದು ಖುಷಿ ನೀಡಿದೆ. ರಿಕಿ ಪಾಂಟಿಂಗ್‌ ಮತ್ತು ತಂಡದ ಸದಸ್ಯರ ಜೊತೆಗಿದ್ದು ಮುನ್ನಡೆಯಲು ಬಯಸಿದ್ದೇನೆ,' ಎಂದು ಆಮ್ರೆ ಖುಷಿ ಹಂಚಿಕೊಂಡಿದ್ದಾರೆ.

ಪಂಜರದ ಸಿಂಹ ಎರಗಲು ಸಜ್ಜಾಗಿದೆ: ಸ್ಮಿತ್ ಬಗ್ಗೆ ಎಚ್ಚರಿಸಿದ ಮೂಡಿಪಂಜರದ ಸಿಂಹ ಎರಗಲು ಸಜ್ಜಾಗಿದೆ: ಸ್ಮಿತ್ ಬಗ್ಗೆ ಎಚ್ಚರಿಸಿದ ಮೂಡಿ

ಟೀಮ್ ಇಂಡಿಯಾ ಪರ ಆಮ್ರೆ 11 ಟೆಸ್ಟ್ ಪಂದ್ಯಗಳಲ್ಲಿ 42.5ರ ಸರಾಸರಿಯಲ್ಲಿ 425 ರನ್ ಗಳಿಸಿದ್ದಾರೆ. 37 ಏಕದಿನ ಪಂದ್ಯಗಳಲ್ಲಿ 20.52ರ ಸರಾಸರಿಯಲ್ಲಿ 513 ರನ್ ಗಳಿಸಿದ್ದಾರೆ. ಕಳೆದ ಸೀಸನ್‌ನಲ್ಲಿ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಾದಾಡಿದ್ದವು. ಇದರಲ್ಲಿ ಮುಂಬೈ 5ನೇ ಬಾರಿಗೆ ಚಾಂಪಿಯನ್ಸ್ ಪಟ್ಟ ಅಲಂಕರಿಸಿತ್ತು.

Story first published: Wednesday, January 6, 2021, 21:27 [IST]
Other articles published on Jan 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X