ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪೃಥ್ವಿ ಶಾ ಅದ್ಬುತ ಆಟದ ಹಿಂದಿನ ಕಾರಣ ಅವರ ತಂದೆ ಆಡಿದ ಈ ಮಾತುಗಳು

IPL 2021 : Prithvi Shaw opens up on the advice he received from his father

ಪೃಥ್ವಿ ಶಾ ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ. ಟೂರ್ನಿಯಲ್ಲಿ ಒಟ್ಟು 7 ಪಂದ್ಯಗಳನ್ನಾಡಿರುವ ಪೃಥ್ವಿ ಶಾ 269 ರನ್ ಕಲೆಹಾಕುವುದರ ಮೂಲಕ ಪ್ರಸ್ತುತ ಟೂರ್ನಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ್ದಾರೆ. ಟೂರ್ನಿಯಲ್ಲಿ ಈಗಾಗಲೇ 3 ಅರ್ಧ ಶತಕಗಳನ್ನು ಬಾರಿಸಿ ಮಿಂಚಿರುವ ಪೃಥ್ವಿ ಶಾ ಗುರುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 41 ಎಸೆತಗಳಿಗೆ 82 ರನ್ ಬಾರಿಸಿ ಭಾರೀ ಚರ್ಚೆಗೆ ಕಾರಣರಾಗಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರನಾಗಿ ಮಿಂಚಿದ್ದ ಪೃಥ್ವಿ ಶಾ ತಮ್ಮ ಉತ್ತಮ ಆಟವನ್ನು ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿಯೂ ಸಹ ಮುಂದುವರೆಸಿದ್ದಾರೆ.

ಪೃಥ್ವಿ ಶಾ ಆಟದ ಮುಂದೆ ನಾವೇನು ಮಾಡಲಾಗಲಿಲ್ಲ ಎಂದ ಮಾರ್ಗನ್ ಪೃಥ್ವಿ ಶಾ ಆಟದ ಮುಂದೆ ನಾವೇನು ಮಾಡಲಾಗಲಿಲ್ಲ ಎಂದ ಮಾರ್ಗನ್

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಅದ್ಬುತ ಪ್ರದರ್ಶನದ ನಂತರ ಮಾತನಾಡಿದ ಪೃಥ್ವಿ ಶಾ ಕಳೆದ ವರ್ಷ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ತಾವು ಅನುಭವಿಸಿದ ನೋವಿನ ಕುರಿತು ಹಂಚಿಕೊಂಡಿದ್ದಾರೆ. ಕಳೆದ ವರ್ಷ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಪೃಥ್ವಿ ಶಾ ಕೇವಲ 4 ರನ್ ಗಳಿಸಿ ನಿರಾಸೆ ಮೂಡಿಸಿದ್ದರು. ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯ ಸುತ್ತಿದ್ದ ಪೃಥ್ವಿ ಶಾ ಎರಡನೇ ಇನ್ನಿಂಗ್ಸ್‌ನಲ್ಲಿ 4 ರನ್ ಗಳಿಸಿ ಪೆವಿಲಿಯನ್ ಸೇರಿದ್ದರು. ಪೃಥ್ವಿ ಶಾ ಅವರ ಈ ಕಳಪೆ ಪ್ರದರ್ಶನದ ನಂತರ ಸಾಮಾಜಿಕ ಜಾಲತಾಣದಲ್ಲಿ ಸಾಲುಸಾಲು ಟೀಕೆಗಳು ಎದುರಾದವು.

ಈ ಅನುಭವವನ್ನು ಪೃಥ್ವಿ ಶಾ ಇದೀಗ ಹಂಚಿಕೊಂಡಿದ್ದು ಆಸ್ಟ್ರೇಲಿಯಾದಿಂದ ಬಂದ ನಂತರ ತೀವ್ರವಾಗಿ ನೊಂದಿದ್ದ ಅವರು ತಮ್ಮ ತಂದೆ ಜೊತೆ ಮಾತನಾಡಿದ್ದರಂತೆ. ಈ ಸಂದರ್ಭದಲ್ಲಿ ಪೃಥ್ವಿ ಶಾಗೆ ನೀನು ನಿನ್ನ ಸ್ವಾಭಾವಿಕ ಆಟವನ್ನು ಆಡು ಎಂದು ಅವರ ತಂದೆ ಎಚ್ಚರಿಸಿದ್ದರಂತೆ. ಅಂದು ಪೃಥ್ವಿ ಶಾ ಅವರ ತಂದೆ ನೀಡಿದ ಆ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಪೃಥ್ವಿ ಶಾ ಕಠಿಣ ಅಭ್ಯಾಸವನ್ನು ನಡೆಸುವುದರ

Story first published: Friday, April 30, 2021, 15:46 [IST]
Other articles published on Apr 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X