ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ರಾಜಸ್ಥಾನ್ vs ಪಂಜಾಬ್‌, ಹೈವೋಲ್ಟೇಜ್ ಪಂದ್ಯದ ಹೈಲೈಟ್ಸ್

IPL 2021: Punjab Kings vs Rajasthan Royals, Match 4, Highlights

ಮುಂಬೈ: ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಸೋಮವಾರ (ಏಪ್ರಿಲ್ 12) ರೋಚಕ ಪಂದ್ಯಕ್ಕೆ ಸಾಕ್ಷಿಯಾಗಿತ್ತು. ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 4ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ರೋಚಕ 4 ರನ್ ಜಯ ಗಳಿಸಿತಾದರೂ ಆರ್‌ಆರ್ ನಾಯಕ ಸಂಜು ಸ್ಯಾಮ್ಸನ್ ವೀರೋಚಿತ ಹೋರಾಟ ನಡೆಸಿದ್ದು ಕಾಣಸಿಕ್ಕಿತು.

ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟ

ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್‌ನ ನೂತನ ನಾಯಕರಾಗಿ ಮೈದಾನಕ್ಕಿಳಿದಿದ್ದ ಸಂಜು ಸ್ಯಾಮ್ಸನ್ ನಾಯಕನ ಆಟ ಪ್ರದರ್ಶಿಸಿದರಲ್ಲದೆ, ಹಲವಾರು ದಾಖಲೆಗಳನ್ನೂ ನಿರ್ಮಿಸಿದರು. ಶತಕ ಬಾರಿಸಿದ ಸ್ಯಾಮ್ಸನ್ ನಾಯಕನಾಗಿ ಆಡಿದ ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಸೆಂಚುರಿ ಬಾರಿಸಿದ ಮೈಲಿಗಲ್ಲು ಸ್ಥಾಪಿಸಿದರು.

ರಾಜಸ್ಥಾನ್ ರಾಯಲ್ಸ್ vs ಪಂಜಾಬ್ ಕಿಂಗ್ಸ್ ಪಂದ್ಯದ ಸ್ಕೋರ್‌ಕಾರ್ಡ್

1
50812

ಐಪಿಎಲ್ ಪಂದ್ಯದ ವೇಳೆ ನಿತೀಶ್ ರಾಣಾ 3 ಬೆರಳು ತೋರಿಸಿದ್ಯಾಕೆ?!ಐಪಿಎಲ್ ಪಂದ್ಯದ ವೇಳೆ ನಿತೀಶ್ ರಾಣಾ 3 ಬೆರಳು ತೋರಿಸಿದ್ಯಾಕೆ?!

ರಾಜಸ್ಥಾನ್ ರಾಯಲ್ಸ್ vs ಪಂಜಾಬ್ ಕಿಂಗ್ಸ್ ಹೈವೋಲ್ಟೇಜ್ ಪಂದ್ಯದ ಹೈಲೈಟ್ಸ್ ಇಲ್ಲಿದೆ
* ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್ ಕಿಂಗ್ಸ್ ತಂಡದ ಸ್ಕೋರ್‌ 221-6 (20 Ov)
* ಪಂಜಾಬ್‌ ಪರ ರನ್ ಸೇರಿಸಿದವರು: ನಾಯಕ ಕೆಎಲ್ ರಾಹುಲ್ 91 (50), ಕ್ರಿಸ್ ಗೇಲ್ 40 (28), ದೀಪಕ್ ಹೂಡಾ 64 (28), ಮಯಾಂಕ್ ಅಗರ್ವಾಲ್ 14 ರನ್
* ಪಂಜಾಬ್ ನೀಡಿದ್ದ 222 ರನ್ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್‌ ಸ್ಕೋರ್‌-217-7 (20 Ov)
* ರಾಜಸ್ಥಾನ್ ಪರ ಬ್ಯಾಟ್ ಬೀಸಿದವರು: ಮನ್ ವೊಹ್ರ 12, ಸಂಜು ಸ್ಯಾಮ್ಸನ್ 119 (63), ಜೋಸ್ ಬಟ್ಲರ್ 25, ಶಿವಂ ದೂಬೆ 23, ರಿಯನ್ ಪರಾಗ್ 25 ರನ್
* ಐಪಿಎಲ್ ನಾಯಕನಾಗಿ ಸಂಜು ಸ್ಯಾಮ್ಸನ್ ಚೊಚ್ಚಲ ಶತಕ, 2021ರ ಸೀಸನ್‌ನಲ್ಲಿ ದಾಖಲಾದ ಮೊದಲ ಶತಕವೂ ಇದು ಹೌದು. ಪಂದ್ಯಶ್ರೇಷ್ಠ ಪ್ರಶಸ್ತಿ ಸ್ಯಾಮ್ಸನ್ ಪಾಲಾಯಿತು.
* ರಾಜಸ್ಥಾನ್ ರಾಯಲ್ಸ್‌ನಿಂದ ಬೆಸ್ಟ್ ಬೌಲಿಂಗ್: ಚೇತನ್ ಸಕರಿಯಾ 31 ರನ್‌ಗೆ 3, ಕ್ರಿಸ್ ಮೋರಿಸ್ 41 ರನ್‌ಗೆ 2, ರಿಯನ್ ಪರಾಗ್ 7 ರನ್‌ಗೆ 1 ವಿಕೆಟ್
* ಪಂಜಾಬ್‌ ಕಿಂಗ್ಸ್‌ನ ಬೌಲರ್ಸ್ ಕೊಡುಗೆ: ಮೊಹಮ್ಮದ್ ಶಮಿ 33 ರನ್‌ಗೆ 2, ಜಾಯೆ ರಿಚರ್ಡ್ಸನ್ 55 ರನ್‌ಗೆ 1, ಅರ್ಷ್‌ದೀಪ್ ಸಿಂಗ್ 35 ರನ್‌ಗೆ 3, ರಿಲೆ ಮೆರಿಡಿತ್ 49 ರನ್‌ಗೆ 1 ವಿಕೆಟ್.
* ಕ್ರಿಕೆಟ್ ಪ್ರೇಮಿಗಳನ್ನು ಕುತೂಹಲದ ತುದಿಗಾಲಲ್ಲಿ ನಿಲ್ಲಿಸಿದ್ದ ಪಂದ್ಯದಲ್ಲಿ ಕಡೆಗೂ ಪಂಜಾಬ್ ಮೇಲುಗೈ ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ.

Story first published: Tuesday, April 13, 2021, 0:44 [IST]
Other articles published on Apr 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X