ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್, ಕ್ವಾ.-2: ಕೋಲ್ಕತ್ತಾ vs ಡೆಲ್ಲಿ, ಸಂಭಾವ್ಯ ತಂಡ, ಪಿಚ್ ರಿಪೋರ್ಟ್

IPL 2021: Qualifier 2- DC vs KKR: Preview, Probable XIs, sharjah weather forecast and pitch report

ಶಾರ್ಜಾ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ (ಅಕ್ಟೋಬರ್‌ 13) ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಕ್ವಾಲಿಫೈಯರ್-2 ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸೆಣಸಾಡಲಿವೆ. ಎರಡು ತಂಡಗಳೂ ಬಲಿಷ್ಠವಾಗಿದ್ದು, ಯಾವ ತಂಡ ಫೈನಲ್‌ಗೆ ಪ್ರವೇಶಿಸಲಿದೆ ಅನ್ನೋದು ಕುತೂಹಲ ಮೂಡಿಸಿದೆ. ಇಂದಿನ ಪಂದ್ಯದಲ್ಲಿ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ.

ಟಿ20 ವಿಶ್ವಕಪ್‌: ಟೀಮ್ ಇಂಡಿಯಾ ಸೇರಿಕೊಳ್ಳಲಿದ್ದಾರೆ ಆವೇಶ್ ಖಾನ್ಟಿ20 ವಿಶ್ವಕಪ್‌: ಟೀಮ್ ಇಂಡಿಯಾ ಸೇರಿಕೊಳ್ಳಲಿದ್ದಾರೆ ಆವೇಶ್ ಖಾನ್

ಐಪಿಎಲ್ ದ್ವಿತೀಯ ಹಂತದ ಪಂದ್ಯಗಳು ಶುರುವಾಗುವುದಕ್ಕೂ ಮುನ್ನ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಆ ಬಳಿಕ ಪ್ಲೇ ಆಫ್ಸ್‌ಗೆ ಪ್ರವೇಶಿಸಿದ್ದು, ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆದ್ದು ಪ್ರಶಸ್ತಿ ಸುತ್ತಿನೆಡೆಗಿನ ದಾರಿ ಸುಲಭವಾಗಿಸಿಕೊಂಡಿದ್ದು ಎಲ್ಲವೂ ಅಚ್ಚರಿಯೇ.

ತಳ ಸೇರಿದ್ದ ಕೆಕೆಆರ್ ಮೇಲಕ್ಕೇರಿದ್ದೇ ಬೆರಗು

ತಳ ಸೇರಿದ್ದ ಕೆಕೆಆರ್ ಮೇಲಕ್ಕೇರಿದ್ದೇ ಬೆರಗು

ಅಂಕಪಟ್ಟಿಯಲ್ಲಿ ಕೆಳ ಸ್ಥಾನದಲ್ಲಿರುವ ತಂಡ ಆತ್ಮಸ್ಥೈರ್ಯ, ಪರಿಶ್ರಮವಿದ್ದರೆ ಮೇಲೇಳಬಹುದು ಅನ್ನೋದಕ್ಕೆ ಕೆಕೆಆರ್ ಸಾಕ್ಷಿ ಹೇಳಿದೆ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಕಳೆದೆರಡು ಸೀಸನ್‌ಗಳಿಂದ ಬಲಿಷ್ಠ ತಂಡಗಳ ಸಾಲಿನಲ್ಲಿ ಕಾಣಿಸಿಕೊಂಡಿದೆ. ಐಪಿಎಲ್ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದ ಡಿಸಿ ಕೂಡ ಅಪಾಯಕಾರಿ ತಂಡ ಅನ್ನೋದರಲ್ಲಿ ಅನುಮಾನವಿಲ್ಲ. ಇಯಾನ್ ಮಾರ್ಗನ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಎರಡು ಬಾರಿ ಚಾಂಪಿಯನ್ಸ್ ಪ್ರಶಸ್ತಿ ಗೆದ್ದಿದೆ. 2012 ಮತ್ತು 2014ರಲ್ಲಿ ಕೆಕೆಆರ್ ಐಪಿಎಲ್ ಟ್ರೋಫಿ ಗೆದ್ದಿತ್ತು. ಡೆಲ್ಲಿ ತಂಡ ಕಳೆದ ಸಾರಿ ಚೊಚ್ಚಲ ಬಾರಿಗೆ ಫೈನಲ್‌ಗೆ ಪ್ರವೇಶಿಸಿತ್ತು. ಆದರೆ ಫೈನಲ್‌ನಲ್ಲಿ ಮುಂಬೈ ವಿರುದ್ಧ ಸೋತಿತ್ತು. ಈ ಸೀಸನ್‌ನಲ್ಲಿ ಚೊಚ್ಚಲ ಟ್ರೋಫಿ ಗೆಲ್ಲುವತ್ತ ಡೆಲ್ಲಿ ಕಣ್ಣಿಟ್ಟಿದೆ.

ಹವಾಮಾನ ವರದಿ, ಪಿಚ್ ವರದಿ

ಹವಾಮಾನ ವರದಿ, ಪಿಚ್ ವರದಿ

ಡೆಲ್ಲ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಕ್ವಾಲಿಫೈಯರ್-2ನೇ ಪಂದ್ಯ ಅಕ್ಟೋಬರ್ 13ರಂದು ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತೀಯ ಕಾಲಮಾನ 7:30 PMಕ್ಕೆ ಆರಂಭಗೊಳ್ಳಲಿದೆ. ಈ ಪಂದ್ಯ ನಡೆಯುವ ದಿನ ಶಾರ್ಜಾದಲ್ಲಿ 34 ಡಿಗ್ರೀ ಸೆಲ್ಶಿಯಸ್ ತಾಪಮಾನ ಇರಲಿದೆ. ಅಂದರೆ ಬಿಸಿಲು, ಸಾಧಾರಣ ತಾಪಮಾನ ಇರಲಿದೆ. ಸಂಜೆಯ ಹೊತ್ತು ಸ್ವಚ್ಛಂದ ಆಕಾಶವಿರಲಿದೆ. ಶಾರ್ಜಾ ಫ್ಲ್ಯಾಟ್ ಪಿಚ್. ಆರ್‌ಸಿಬಿ-ಕೆಕೆಆರ್ ಪಂದ್ಯ ನಡೆದಿದ್ದು ಇದೇ ಸ್ಟೇಡಿಯಂನಲ್ಲಿ. ವೇಗಿಗಳಿಗೆ ಕೊಂಚ ಪಿಚ್ ಅನುಕೂಲ ಮಾಡಲಿದೆ. ಸ್ಪಿನ್ನರ್‌ಗಳೂ ಕೂಡ ಪ್ರಭಾವ ಬೀರಬಹುದು. ಈ ಪಿಚ್‌ನಲ್ಲಿ ಬ್ಯಾಟಿಂಗ್ ಅಷ್ಟೇನು ಸುಲಭವಿಲ್ಲ. ಈಗ ಈ ಪಿಚ್ ಬ್ಯಾಟಿಂಗ್‌ಗೆ ಕೊಂಚ ಸವಾಲಿನ ಪಿಚ್ ಎನಿಸಿದೆ. ಮೊದಲು ಬ್ಯಾಟಿಂಗ್ ಮಾಡುವ ತಂಡ 160+ ಸ್ಕೋರ್‌ ಮಾಡಿದರೆ ಡಿಫೆಂಡ್ ಮಾಡಬಹುದು.

ABD ಮುಂದಿನ IPL ನಲ್ಲಿ RCB ಯಲ್ಲಿ ಇರ್ತಾರಾ? ಇಲ್ವಾ? | Oneindia Kannada
ಸಂಭಾವ್ಯ ಪ್ಲೇಯಿಂಗ್ XI

ಸಂಭಾವ್ಯ ಪ್ಲೇಯಿಂಗ್ XI

ಕೋಲ್ಕತ್ತಾ ನೈಟ್ ರೈಡರ್ಸ್ ಸಂಭಾವ್ಯ ಪ್ಲೇಯಿಂಗ್ XI: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (C/ WK), ಶಿಮ್ರಾನ್ ಹೆಟ್ಮೈರ್, ಮಾರ್ಕಸ್ ಸ್ಟೊಯಿನಿಸ್/ ಟಾಮ್ ಕರನ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಾಗಿಸೊ ರಬಾಡಾ, ಅನ್ರಿಚ್ ನಾರ್ಟ್ಜೆ, ಆವೇಶ್ ಖಾನ್.
ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ಪ್ಲೇಯಿಂಗ್ XI: ಶುಭ್ಮನ್ ಗಿಲ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ಇಯಾನ್ ಮಾರ್ಗನ್ (ಸಿ), ದಿನೇಶ್ ಕಾರ್ತಿಕ್ (ಡಬ್ಲ್ಯೂಕೆ), ಶಕೀಬ್ ಅಲ್ ಹಸನ್/ಆಂಡ್ರೆ ರಸೆಲ್, ಸುನಿಲ್ ನರೈನ್, ಲಾಕಿ ಫರ್ಗುಸನ್, ವರುಣ್ ಚಕ್ರವರ್ತಿ, ಮತ್ತು ಶಿವಂ ಮಾವಿ.

Story first published: Wednesday, October 13, 2021, 13:36 [IST]
Other articles published on Oct 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X