ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಎಂಐಯ ಕ್ವಿಂಟನ್ ಡಿ ಕಾಕ್ ಹೆಸರಿಗೆ ವಿಶಿಷ್ಠ ದಾಖಲೆ

IPL 2021: Quinton de Kock completes 7000 runs in t20 Cricket

ಅಬುಧಾಬಿ: ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಮಂಗಳವಾರ (ಸೆಪ್ಟೆಂಬರ್ 28) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 42ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧ ಡಿ ಕಾಕ್ ಈ ಸಾಧನೆ ಮೆರೆದಿದ್ದಾರೆ.

ದಿನೇಶ್ ಕಾರ್ತಿಕ್ ಮುಖಕ್ಕೆ ಬ್ಯಾಟ್ ಬೀಸಿದ ರಿಷಭ್ ಪಂತ್: ವಿಡಿಯೋದಿನೇಶ್ ಕಾರ್ತಿಕ್ ಮುಖಕ್ಕೆ ಬ್ಯಾಟ್ ಬೀಸಿದ ರಿಷಭ್ ಪಂತ್: ವಿಡಿಯೋ

ಪಂಜಾಬ್ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಕ್ವಿಂಟನ್ ಡಿ ಕಾಕ್ ಟಿ20 ಕ್ರಿಕೆಟ್‌ನಲ್ಲಿ 7000 ರನ್ ಪೂರೈಸಿದ್ದಾರೆ. ಮಂಗಳವಾರದ ಪಂದ್ಯಕ್ಕೂ ಮುನ್ನ ಡಿ ಕಾಕ್‌ಗೆ ಈ ದಾಖಲೆ ಬರೆಯಲು ಕೇವಲ 2 ರನ್‌ ಬೇಕಿತ್ತು. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಡಿ ಕಾಕ್ ಈ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಮುಂಬೈ ಇಂಡಿಯನ್ಸ್ vs ಪಂಜಾಬ್ ಕಿಂಗ್ಸ್, Live ಸ್ಕೋರ್‌

1
50864

ಪಂದ್ಯದಲ್ಲಿ 27 ರನ್ ಬಾರಿಸಿದ ಡಿ ಕಾಕ್ ಆ ಬಳಿಕ ಮೊಹಮ್ಮದ್ ಶಮಿ ಅವರ 9.5ನೇ ಓವರ್‌ನಲ್ಲಿ ಬೌಲ್ಡ್ ಆಗಿ ನಿರ್ಮಿಸಿದರು. 28ರ ಹರೆಯದ ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟ್ಸ್‌ಮನ್‌ ಕ್ವಿಂಟನ್ ಡಿ ಕಾಕ್ 53 ಟೆಸ್ಟ್‌ ಪಂದ್ಯಗಳಲ್ಲಿ 3245 ರನ್, 124 ಏಕದಿನ ಪಂದ್ಯಗಳಲ್ಲಿ 5355 ರನ್, 57 ಟಿ20ಐ ಪಂದ್ಯಗಳಲ್ಲಿ 1758 ರನ್, 76 ಐಪಿಎಲ್ ಪಂದ್ಯಗಳಲ್ಲಿ 2237 ರನ್‌ ದಾಖಲೆ ಹೊಂದಿದ್ದಾರೆ.

ಐಪಿಎಲ್ 2021: ಸೌಥೀ, ಮಾರ್ಗನ್ ಜೊತೆಗೆ ಅಶ್ವಿನ್ ಮಾತಿನ ಚಕಮಕಿ; ಡಿಕೆ ಮಧ್ಯ ಪ್ರವೇಶ: ವಿಡಿಯೋಐಪಿಎಲ್ 2021: ಸೌಥೀ, ಮಾರ್ಗನ್ ಜೊತೆಗೆ ಅಶ್ವಿನ್ ಮಾತಿನ ಚಕಮಕಿ; ಡಿಕೆ ಮಧ್ಯ ಪ್ರವೇಶ: ವಿಡಿಯೋ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್ ಕಿಂಗ್ಸ್‌ ಕೆಎಲ್ ರಾಹುಲ್ 21, ಮನ್‌ದೀಪ್ ಸಿಂಗ್ 15, ಕ್ರಿಸ್ ಗೇಲ್ 1, ಐಡೆನ್ ಮಾರ್ಕ್ರಮ್ 1, ನಿಕೋಲಸ್ ಪೂರನ್ 2, ದೀಪಕ್ ಹೂಡ 28, ಹರ್ಪ್ರೀತ್‌ ಬ್ರಾರ್ 14, ನೇತನ್ ಎಲ್ಲಿಸ್ 6 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 135 ರನ್ ಗಳಿಸಿತ್ತು.

ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ XI
ರೋಹಿತ್ ಶರ್ಮಾ (ಸಿ), ಕ್ವಿಂಟನ್ ಡಿ ಕಾಕ್ (ವಿಕೆ), ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಕೃನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಕೀರನ್ ಪೊಲ್ಲಾರ್ಡ್, ನಾಥನ್ ಕೌಲ್ಟರ್-ನೈಲ್, ರಾಹುಲ್ ಚಾಹರ್, ಜಸ್ಪ್ರೀತ್ ಬೂಮ್ರಾ, ಟ್ರೆಂಟ್ ಬೌಲ್ಟ್.

Ashwin ಹಾಗು Morgan ನಡುವೆ ಅಸಲಿಗೆ ನಡೆದಿದ್ದೇನು | Oneindia Kannada

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ XI
ಕೆಎಲ್ ರಾಹುಲ್ (c & wk), ಮನ್ ದೀಪ್ ಸಿಂಗ್, ಕ್ರಿಸ್ ಗೇಲ್, ಐಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್, ದೀಪಕ್ ಹೂಡಾ, ಹರಪ್ರೀತ್ ಬ್ರಾರ್, ನಾಥನ್ ಎಲ್ಲಿಸ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್.

Story first published: Wednesday, September 29, 2021, 10:28 [IST]
Other articles published on Sep 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X