ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಟಿ20 ಕ್ರಿಕೆಟ್‌ನಲ್ಲಿ ಮಹತ್ವದ ಮೈಲಿಗಲ್ಲು ದಾಟಲು ಅಶ್ವಿನ್ ಸಜ್ಜು

IPL 2021: R Ashwin one wicket away from 250 T20 wickets

ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಟಿ20 ಕ್ರಿಕೆಟ್‌ನಲ್ಲಿ ಮಹತ್ವದ ಸಾಧನೆಯೊಂದನ್ನು ಮಾಡುವ ಸನಿಹದಲ್ಲಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್ ಅಶ್ವಿನ್ ಟಿ20 ಕ್ರಿಕೆಟ್‌ನಲ್ಲಿ 250ನೇ ವಿಕೆಟ್ ಪಡೆಯುವ ಸಾಧನೆ ಮಾಡುವ ಸಾಧ್ಯತೆಯಿದೆ.

ಈ ಮಹತ್ವದ ಮೈಲಿಗಲ್ಲು ತಲುಪಲು ಅಶ್ವಿನ್‌ಗೆ ಬೇಕಿರುವುದು ಕೇವಲ 1 ವಿಕೆಟ್ ಮಾತ್ರ. ಹೀಗಾಗಿ ಇಂದಿನ ಪಂದ್ಯದಲ್ಲಿ ಅಶ್ವಿನ್ ಈ ಸಾಧನೆ ಮಾಡುವ ಸಾಧ್ಯತೆಯಿದೆ. 34ರ ಹರೆಯದ ಅನುಭವಿ ಸ್ಪಿನ್ನರ್ ಐಪಿಎಲ್‌ನಲ್ಲಿ 139 ವಿಕೆಟ್ ಕಬಳಿಸಿದ್ದಾರೆ. 56 ವಿಕೆಟ್‌ಗಳನ್ನು ಟೀಮ್ ಇಂಡಿಯಾ ಪರವಾಗಿ ಪಡೆದಿದ್ದರೆ ಉಳಿದ ವಿಕೆಟ್‌ಗಳು ದೇಶೀಯ ಟಿ20 ಕ್ರಿಕೆಟ್‌ನಿಂದ ಸಂಪಾದಿಸಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಆರ್‌ಸಿಬಿ!ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಆರ್‌ಸಿಬಿ!

ಐಪಿಎಲ್‌ನಲ್ಲಿ ಆರ್ ಅಶ್ವಿನ್ 6ನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ. ಈ ಪಟ್ಟಿಯಲ್ಲಿ ಲಸಿತ್ ಮಲಿಂಗ ಮೊದಲ ಸ್ಥಾನದಲ್ಲಿದ್ದು 170 ವಿಕೆಟ್ ಪಡೆದುಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿ 160 ವಿಕಟ್ ಪಡೆದಿರುವ ಅಮಿತ್ ಮಿಶ್ರಾ ಇದ್ದಾರೆ. ಪೀಯೂಷ್ ಚಾವ್ಲಾ(156), ಡ್ವೇಯ್ನ್ ಬ್ರಾವೋ (154) ಹರ್ಭಜನ್ ಸಿಂಗ್ (150) ನಂತರದ ಸ್ಥಾನದಲ್ಲಿದ್ದಾರೆ.

ಮಲಿಂಗ ಅವರನ್ನು ಹೊರತು ಪಡಿಸಿದರೆ ಈ ಪಟ್ಟಿಯಲ್ಲಿರುವ ಉಳಿದ ಎಲ್ಲಾ ಟಾಪ್ 5 ಆಟಗಾರರು ಕೂಡ ಐಪಿಎಲ್‌ನಲ್ಲಿ ಸಕ್ರಿಯರಾಗಿದ್ದಾರೆ. ಕಳೆದ ಬಾರಿಯ ಆವೃತ್ತಿಯಲ್ಲಿ ವೈಯಕ್ತಿಕ ಕಾರಣಗಳಿಂದ ಐಪಿಎಲ್‌ನಿಂದ ದೂರುಳಿದಿದ್ದ ಮಲಿಂಗ 14ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ಮುನ್ನ ತಮ್ಮ ನಿವೃತ್ತಿಯನ್ನು ಘೋಷಿಸಿದರು.

ಐಪಿಎಲ್ 2021: ಹೈದರಾಬಾದ್ ವಿರುದ್ಧ ಬೆಂಗಳೂರಿಗೆ ರೋಚಕ ಜಯಐಪಿಎಲ್ 2021: ಹೈದರಾಬಾದ್ ವಿರುದ್ಧ ಬೆಂಗಳೂರಿಗೆ ರೋಚಕ ಜಯ

ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಬಾರಿಯ ಐಪಿಎಲ್‌ನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದು ಸಾಕಷ್ಟು ಉತ್ಸಾಹದಲ್ಲಿದೆ. ಆದರೆ ರಾಜಸ್ಥಾನ್ ರಾಯಲ್ಸ್ ತನ್ನ ಆರಂಭಿಕ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದರು ಹೊರತಾಗಿಯೂ ಸೋಲು ಕಂಡಿತ್ತು. ಹೀಗಾಗಿ ಮೊದಲ ಗೆಲುವು ದಾಖಲಿಸಲು ಅದು ಕಾತರಿಸುತ್ತಿದೆ.

Story first published: Thursday, April 15, 2021, 15:34 [IST]
Other articles published on Apr 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X