ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಹೈದರಾಬಾದನ್ನು 134 ರನ್‌ಗೆ ಕಟ್ಟಿ ಹಾಕಿದ ಡೆಲ್ಲಿ

IPL 2021: Rabada, Nortje restrict Hyderabad to 134

ಈ ಬಾರಿಯ ಐಪಿಎಲ್‌ನ ಮೊದಲ ಚರಣದ ಪಂದ್ಯಗಳಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ ಎರಡನೇ ಚರಣದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಟೂರ್ನಿಯಲ್ಲಿ ಜೀವಂತವಾಗಿರುವ ಗುರಿ ಹೊಂದಿದೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಹೈದರಾಬಾದ್ ತಂಡದ ಬ್ಯಾಟಿಂಗ್ ವಿಭಾಗ ಮತ್ತೆ ಮುಗ್ಗರಿಸಿದೆ. ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್‌ಗೆ 135 ರನ್‌ಗಳ ಸಾಧಾರಣ ಗುರಿಯನ್ನು ನೀಡಿದೆ. ಹೀಗಾಗಿ ಈ ಪಂದ್ಯವನ್ನು ಗೆಲ್ಲಬೇಕಾದರೆ ಹೈದರಾಬಾದ್ ತಂಡದ ಬೌಲಿಂಗ್ ವಿಭಾಗ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲೇಬೇಕಿದೆ.

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪಂತ್ ಹುಡುಗರ ಗೆಲುವಿನ ಓಟ ಮುಂದುವರಿದಿದೆ. ಮತ್ತೊಂದೆಡೆ ಸೋಲಿನ ಮೇಲೆ ಸೋಲು ಕಂಡಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ಪ್ಲೇಆಫ್ ಹಂತಕ್ಕೇರುವ ಅವಕಾಶವನ್ನು ಬಹುತೇಕ ಮುಚ್ಚಿಕೊಂಡಿದೆ.

ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರೆ ನೀರಸ ಆರಂಭ ಕಂಡ ಹೈದರಾಬಾದ್‌ಗೆ ಯಾವ ಬ್ಯಾಟ್ಸ್‌ಮನ್‌ನಿಂದ ಕೂಡ ಉತ್ತಮ ಕೊಡುಗೆ ಲಭ್ಯವಾಗಲಿಲ್ಲ. ಅಂತಿಮವಾಗಿ 9 ವಿಕೆಟ್ ಕಳೆದುಕೊಂಡು 134 ರನ್‌ಗಳಿಸಲು ಶಕ್ತವಾಯಿತು. ಅಬ್ದುಲ್ ಸಮದ್ ಹಾಗೂ ರಶೀದ್ ಖಾನ್ ಕೊನೆಯ ಹಂತದಲಲ್ಇ ನಿಡಿದ ಪ್ರದರ್ಶನದಿಂದಾಗಿ ಹೈದರಾಬಾದ್ ಈ ಮೊತ್ತವನ್ನು ಎದುರಾಳಿಗೆ ಗುರಿಯಾಗಿ ನೀಡಲು ಶಕ್ತವಾಯಿತು.

ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಬೌಲಿಂಗ್‌ನಲ್ಲಿ ಕಗಿಸೋ ರಬಡಾ ಹಾಗೂ ಅನ್ರಿಕ್ ನಾರ್ಕಿಯಾ ಮಿಂಚಿದರು. ರಬಡಾ 3 ವಿಕೆಟ್ ಪಡೆದು ಮಿಂಚಿದರೆ ನಾರ್ಕಿಯಾ 4 ಓವರ್‌ಗಳಲ್ಲಿ ಕೇವಲ 12 ರನ್‌ ನೀಡಿ 2 ವಿಕೆಟ್ ಪಡೆದು ಮಿಂಚಿದರು. ಅಕ್ಷರ್ ಪಟೇಲ್ ಕೂಡ 2 ವಿಕೆಟ್ ಕಬಳಿಸಿದ್ದಾರೆ. ಇನ್ನು ಡೆಲ್ಲಿ ಬೌಲಿಂಗ್ ವೇಳೆ ವೇಗಿ ಮಾರ್ಕಸ್ ಸ್ಟೋಯ್ನಿಸ್ ಸ್ನಾಯುಸೆಳೆತಕ್ಕೆ ಒಳಗಾಗಿ ಮೈದಾನದಿಂದ ಹೊರನಡೆದಿರುವುದು ಡೆಲ್ಲಿ ತಂಡಕ್ಕೆ ಗಾಯದ ಆತಂಕ ಮೂಡಿಸಿದೆ.

ಟೀಮ್ ಇಂಡಿಯಾದಲ್ಲಿ ರಿಷಬ್ ಪಂತ್ ಜವಾಬ್ದಾರಿ ಬಗ್ಗೆ ಹೇಳಿದ ರಿಕಿ ಪಾಂಟಿಂಗ್ | Oneindia Kannada

ಇನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡ ನೀಡಿದ 135 ರನ್‌ಗಳ ಗುರಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಸುಲಭವಾಗಿ ಬೆನ್ನಟ್ಟಿದೆ. ತಂಡದ ಮೊತ್ತ 20 ರನ್‌ಗಳಾಗುವಷ್ಟರಲ್ಲಿ ಆರಂಭೀಕ ಆಟಗಾರ ಪೃಥ್ವಿ ಶಾ ಔಟಾಗಿ ಫೆವಿಲಿಯನ್ ಸೇರಿದ್ದರು. ಆದರೆ ನಂತರ ಡೆಲ್ಲಿ ಬ್ಯಾಟ್ಸ್‌ಮನ್‌ಗಳ ವಿರುದ್ಧ ಮೇಲುಗೈ ಸಾಧಿಸಲು ಹೈದರಾಬಾದ್ ತಂಡ ಸಂಪೂರ್ಣ ವಿಫಲವಾಯಿತು. ಡೆಲ್ಲಿ ತಂಡದ ಸ್ಕೋರ್ 72 ರನ್‌ಗಳಾಗುವಷ್ಟರಲ್ಲಿ ಆರಂಭಿಕ ಆಟಗಾರ ಶಿಖರ್ ಧವನ್ ರಶೀದ್ ಖಾನ್‌ಗೆ ವಿಕೆಟ್ ಒಪ್ಪಿಸಿದ್ದರು. ಬಳಿಕ ಜೊತೆಯಾದ ಶ್ರೇಯಸ್ ಐಯ್ಯರ್ ಹಾಗೂ ರಿಷಭ್ ಪಂತ್ ಜೋಡಿ ತಂಡಕ್ಕೆ ಯಾವುದೇ ಹಿನ್ನಡೆಯಾಗದಂತೆ ನೋಡಿಕೊಂಡರು.

Story first published: Thursday, September 23, 2021, 0:15 [IST]
Other articles published on Sep 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X