ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ವಿಭಿನ್ನ ರೀತಿಯಲ್ಲಿ ಹೊಸ ಜರ್ಸಿ ಅನಾವರಣಗೊಳಿಸಿದ ರಾಜಸ್ಥಾನ್ ರಾಯಲ್ಸ್

IPL 2021: Rajasthan Royals launch new jersey for IPL 2021

ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಧರಿಸುವ ಜರ್ಸಿಯನ್ನು ವಿಶೇಷವಾಗಿ ಬಿಡುಗಡೆಗೊಳಿಸಲಾಗಿದೆ. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡ ಮುಂಬರುವ ಕದನಕ್ಕೆ ಸಕಲ ರೀತಿಯಲ್ಲಿಯೂ ಸಜ್ಜಾಗಿದೆ.

ಜೈಪುರದ ಸವಾಲ್‌ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ವರ್ಣ ರಂಚಿತವಾಗಿ ವಿಶೇಷ ರೀತಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಜರ್ಸಿಯನ್ನು ಅನಾವರಣಗೊಳಿಸಲಾಗಿದೆ. ತ್ರಿD ಪ್ರೊಜೆಕ್ಷನ್ ಹಾಗೂ ಬೆಳಕಿನ ಚಿತ್ತಾರಗಳ ಮೂಲಕ ಜರ್ಸಿಯನ್ನು ಅನಾವರಣಗೊಳಿಸಲಾಯಿತು.

ಮುಂಬೈ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿ ಪ್ಲೇಯಿಂಗ್ XI ಹೆಸರಿಸಿದ ಚೋಪ್ರಾಮುಂಬೈ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿ ಪ್ಲೇಯಿಂಗ್ XI ಹೆಸರಿಸಿದ ಚೋಪ್ರಾ

ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಧರಿಸುವ ಈ ಜರ್ಸಿಯ ಅನಾವರಣವನ್ನು ನೇರಪ್ರಸಾರದ ಮೂಲಕ ವಿಶ್ವಾದ್ಯಂತ ಇರುವ ರಾಜಸ್ಥಾನ್ ರಾಯಲ್ಸ್ ಅಭಿಮಾನಿಗಳಿಗೆ ತಲುಪಿಸಲಾಗಿದೆ. ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರರು ಈಗ ಮುಂಬೈನಲ್ಲಿ ತಂಡದ ಬಯೋಬಬಲ್‌ನಲ್ಲಿ ಇದ್ದಾರೆ.

"ಈ ಪ್ರದರ್ಶನವು ರಾಯಲ್ಸ್ ಅಭಿಮಾನಿಗಳು ತಮ್ಮ ಹೃದಯಕ್ಕೆ ಪ್ರಿಯವಾದ ಎಲ್ಲವನ್ನೂ ಒಳಗೊಂಡ ಆಚರಣೆಯಾಗಿದೆ. ಕ್ರೀಡಾಂಗಣ, ಜೈಪುರ ನಗರ, ರಾಜಸ್ಥಾನಿ ಸಂಸ್ಕೃತಿ ಮತ್ತು ಭೂದೃಶ್ಯ - ಹಾಗೆಯೇ ರೆಡ್ ಬುಲ್‌ನೊಂದಿಗಿನ ಫ್ರ್ಯಾಂಚೈಸ್‌ನ ಒಡನಾಟವು ತಂಡದ ಬೆಳವಣಿಗೆಗೆ ಹೇಗೆ ಸಹಾಯ ಮಾಡುತ್ತದೆ ಎಂಬುದರ ಪ್ರತಿಬಿಂಬವಾಗಿದೆ. ತ್ವರಿತಗತಿಯಲ್ಲಿ, ಹೊಸ ಆಲೋಚನೆಗಳನ್ನು ಹೊರತರುವುದು ಮತ್ತು ತಂಡದ ಬೆಳವಣಿಗೆಗೆ ಇದು ಸಹಾಯವಾಗಿದೆ" ಎಂದು ಆರ್‌ಆರ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೊಂಡಿದೆ.

ಐಪಿಎಲ್‌ನಿಂದ ಹೊರಗುಳಿದರೂ ಶ್ರೇಯಸ್ ಐಯ್ಯರ್‌ಗೆ ದೊರೆಯಲಿದೆ ಸಂಪೂರ್ಣ 7 ಕೋಟಿ ಸಂಬಳಐಪಿಎಲ್‌ನಿಂದ ಹೊರಗುಳಿದರೂ ಶ್ರೇಯಸ್ ಐಯ್ಯರ್‌ಗೆ ದೊರೆಯಲಿದೆ ಸಂಪೂರ್ಣ 7 ಕೋಟಿ ಸಂಬಳ

ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್‌ನ ಚೊಚ್ಚಲ ಆವೃತ್ತಿಯ ವಿಜೇತ ತಂಡವಾಗಿದೆ. ಆದರೆ ಆ ಬಳಿಕ ಮತ್ತೊಮ್ಮೆ ಪ್ರಶಸ್ತಿ ಗೆಲ್ಲಲು ಆರ್‌ಆರ್ ತಂಡಕ್ಕೆ ಸಾಧ್ಯವಾಗಿಲ್ಲ. ಕಳೆದ ಬಾರಿಯ ಆವೃತ್ತಿಯಲ್ಲಿ ಕೊನೆಯ ಸ್ಥಾನಿಯಾಗಿ ಟೂರ್ನಿಯನ್ನು ಅಂತ್ಯಗೊಳಿಸಿದ್ದ ಆರ್‌ಆರ್ ಈ ಬಾರಿ ಉತ್ತಮ ಪ್ರದರ್ಶನ ನೀಡುವ ಗುರಿಯನ್ನು ಇಟ್ಟುಕೊಂಡಿದೆ. ಈ ಬಾರಿಯ ಆವೃತ್ತಿಯಲ್ಲಿ ಸಂಜು ಸ್ಯಾಮ್ಸನ್ ಆರ್‌ಆರ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

Story first published: Monday, April 5, 2021, 17:20 [IST]
Other articles published on Apr 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X