ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದ ಇಂಗ್ಲೆಂಡ್ ಕ್ರಿಕೆಟರ್ ಲಿಯಾಮ್ ಲಿವಿಂಗ್ಸ್ಟೋನ್ ಈ ಬಾರಿಯ ಐಪಿಎಲ್ನಿಂದ ಹಿಂದೆ ಸರಿದಿದ್ದಾರೆ. ಬಯೋ ಬಬಲ್ನ ಆಯಾಸದ ಕಾರಣ ತಾನು 14ನೇ ಆವೃತ್ತಿಯ ಐಪಿಎಲ್ನಿಂದ ಹಿಂದೆ ಸರಿಯುತ್ತಿರುವುದಾಗಿ ಲಿವಿಂಗ್ಸ್ಟೋನ್ ಹೇಳಿದ್ದಾರೆ.
ಅಮಿತ್ ಮಿಶ್ರಾ ಎದುರು ಕೆಟ್ಟ ದಾಖಲೆ ಬರೆದ ರೋಹಿತ್ ಶರ್ಮಾ!
ಬಯೋಬಬಲ್ ಆಯಾಸದ ಕಾರಣ ಲಿಯಾಮ್ ಲಿವಿಂಗ್ಸ್ಟೋನ್ ಸೋಮವಾರ (ಏಪ್ರಿಲ್ 19) ಇಂಗ್ಲೆಂಡ್ಗೆ ವಾಪಸ್ ತೆರಳಿದ್ದಾರೆ. ಕಳೆದ ಒಂದು ವರ್ಷದಿಂದಲೂ ಬಯೋಬಬಲ್ ಒಳಗಿದ್ದು ಬೇಜಾರಾಗಿರುವುದಾಗಿ ಲಿವಿಂಗ್ಸ್ಟೋನ್ ತಿಳಿಸಿದ್ದಾರೆ.
ಲಿವಿಂಗ್ಸ್ಟೋನ್ ತಂಡ ತೊರೆಯುತ್ತಿರುವ ವಿಚಾರ ತಿಳಿಸಿರುವ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ, ಕ್ರಿಕೆಟರ್ ನಿರ್ಧಾರವನ್ನು ಗೌರವಿಸುವುದಾಗಿ ಮತ್ತು ಅವರಿಗೆ ಬೇಕಾದ ಯಾವುದೇ ರೀತಿಯ ಬೆಂಬಲ ನೀಡುವುದಾಗಿ ಹೇಳಿದೆ.
ಮುಂಬೈ ಇಂಡಿಯನ್ಸ್ ವಿರುದ್ಧ ಅತಿ ಹೆಚ್ಚು ರನ್ ಬಾರಿಸಿರುವ ಆಟಗಾರ ಯಾರು?
ಈ ಐಪಿಎಲ್ ಸೀಸನ್ನಲ್ಲಿ ರಾಜಸ್ಥಾನ್ ರಾಯಲ್ಸ್ ಒಟ್ಟು 3 ಪಂದ್ಯಗಳನ್ನಾಡಿದೆ. ಇದರಲ್ಲಿ ಒಂದು ಗೆಲುವು ಕಂಡಿದೆ. ಆಡಿರುವ ಮೂರೂ ಪಂದ್ಯಗಳಲ್ಲಿ ಆರ್ಆರ್ ಪ್ಲೇಯಿಂಗ್ XIನಲ್ಲಿ ಲಿವಿಂಗ್ಸ್ಟೋನ್ಗೆ ಅವಕಾಶ ಸಿಕ್ಕಿರಲಿಲ್ಲ. ಈ ಕಾರಣಕ್ಕೆ ಸುಮ್ಮನೆ ಬಯೋ ಬಬಲ್ನಲ್ಲಿ ಬೇಜಾರಾಗಿ ಲಿವಿಂಗ್ಸ್ಟೋನ್ ಐಪಿಎಲ್ ತ್ಯಜಿಸುವ ನಿರ್ಧಾರ ತಾಳಿರಲೂಬಹುದು.