ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಮತ್ತೊಂದು ವೈಫಲ್ಯ ಅನುಭವಿಸಿದ ಸಂಜು ಸ್ಯಾಮ್ಸನ್

ipl 2021, Rajasthan skipper Sanju Samson failed again

ನಾಯಕತ್ವ ವಹಿಸಿಕೊಂಡ ಮೊದಲ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅಮೋಘ ಆಟವನ್ನು ಪ್ರದರ್ಶಿಸಿ ಅದ್ಭುತ ಆರಂಭವನ್ನು ಪಡೆದರು. ಆದರೆ ನಂತರ ಸಂಜು ಸ್ಯಾಮ್ಸನ್ ಸತತ ವೈಫಲ್ಯವನ್ನು ಅನುಭವಿಸಿದ್ದಾರೆ. ಆರ್‌ಸಿಬಿ ವಿರುದ್ಧದ ನಾಲ್ಕನೇ ಪಂದ್ಯದಲ್ಲಿಯೂ ಸಂಜು ತಂಡವನ್ನು ಮೇಲಕ್ಕೆತ್ತುವಲ್ಲಿ ವಿಫಲರಾಗಿದ್ದಾರೆ.

ಆರಂಭದಲ್ಲಿಯೇ ತಂಡ ವಿಕೆಟ್ ಕಳೆದುಕೊಳ್ಳಲು ಆರಂಭಿಸಿದ ಕಾರಣ ಸಂಜು ಎಚ್ಚರಿಕೆಯಿಂದ ಇನ್ನಿಂಗ್ಸ್ ಆರಂಭಿಸಿದರು. ವಾಶಿಂಗ್ಟನ್ ಸುಂದರ್ ಅವರ ಎಸೆತವೊಂದನ್ನು ಭರ್ಜರಿಯಾಗಿ ಸಿಕ್ಸರ್‌ಗೆ ಅಟ್ಟುವ ಮೂಲಕ ತಮ್ಮ ಎಂದಿನ ಅಬ್ಬರದ ಆಟಕ್ಕೆ ಮರಳುವ ಮುನ್ಸೂಚನೆ ನೀಡಿದರು.

 ಸಂಜು ಸ್ಯಾಮ್ಸನ್ ಆಟದಲ್ಲಿರುವ ಒಂದೇ ಕೊರತೆ 'ಸ್ಥಿರತೆ': ಅಂಜುಂ ಚೋಪ್ರ ಸಂಜು ಸ್ಯಾಮ್ಸನ್ ಆಟದಲ್ಲಿರುವ ಒಂದೇ ಕೊರತೆ 'ಸ್ಥಿರತೆ': ಅಂಜುಂ ಚೋಪ್ರ

ಆದರೆ ಆರ್‌ಸಿಬಿ ಸ್ಪಿನ್ನರ್ ಸುಂದರ್ ಅದಕ್ಕೆ ಅವಕಾಶವನ್ನು ನೀಡಲೇ ಇಲ್ಲ. ಸಿಕ್ಸರ್ ಅಟ್ಟಿದ ಮುಂದಿನ ಎಸೆತದಲ್ಲಿಯೇ ಸುಂದರ್ ಸ್ಯಾಮ್ಸನ್ ಅವರನ್ನು ಬಲೆಗೆ ಕೆಡವುವಲ್ಲಿಯಶಸ್ವಿಯಾದರು. ಮ್ಯಾಕ್ಸ್‌ವೆಲ್‌ಗೆ ಕ್ಯಾಚ್ ನೀಡಿದ ಸಂಜು ಫೆವಿಲಿಯನ್‌ಗೆ ಸಾಗಿದರು. ಈ ಮೂಲಕ 18 ಎಸೆತಗಳನ್ನು ಎದುರಿಸಿ 21 ರನ್‌ಗಳಿಸಲಷ್ಟೇ ಶಕ್ತರಾದರು.

ಈ ಬಾರಿಯ ಐಪಿಎಲ್‌ನ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 63 ಎಸೆತ ಎದುರಿಸಿ 119 ರನ್‌ಗಳಿಸಿದ್ದ ಸಂಜು ಸ್ಯಾಮ್ಸನ್ ನಂತರ ಮೂರು ಪಂದ್ಯಗಳಲ್ಲಿಯೂ ಉತ್ತಮ ಮೊತ್ತಗಳಿಸುವಲ್ಲಿ ಸಫಲವಾಗಿಲ್ಲ.

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಕಳಪೆ ಆರಂಭವನ್ನು ಪಡೆದಿದೆ. 45 ರನ್‌ಗಳಿಗೆ ಆರಂಭಿಕ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

Story first published: Thursday, April 22, 2021, 20:41 [IST]
Other articles published on Apr 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X