ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಿಕೊಳ್ಳಲು ರವೀಂದ್ರ ಜಡೇಜಾಗೆ ಗ್ರೀನ್ ಸಿಗ್ನಲ್

IPL 2021: Ravindra Jadeja get clearence from NCA to join CSK for IPL 2021

ಕಳೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಬೆರಳಿನ ಗಾಯಕ್ಕೆ ತುತ್ತಾಗಿದ್ದ ರವೀಂದ್ರ ಜಡೇಜಾ ಈ ಬಾರಿಯ ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಾರಾ ಎಂಬುದು ಪ್ರಶ್ನೆಯಾಗಿತ್ತು. ಕಳೆದ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಅನುಭವಿ ಆಲ್‌ರೌಂಡರ್ ಸೇವೆ ಅಲಭ್ಯವಾಗುವ ಆತಂಕವುಂಟಾಗಿತ್ತು. ಆದರೆ ಈ ಎಲ್ಲಾ ಅನುಮಾನ ಆತಂkಗಳಿಗೆ ಈಗ ತೆರೆ ಬಿದ್ದಿದೆ. ಮುಂದಿನ ಐಪಿಎಲ್‌ನಲ್ಲಿ ರವೀಂದ್ರ ಜಡೇಜಾ ಪಾಲ್ಗೊಳ್ಳುವುದು ಖಚಿತವಾಗಿದೆ.

ಗಾಯದಿಂದ ಸಂಪೂರ್ಣವಾಗಿ ಚೇತರಿಕೆ ಕಂಡಿರುವ ರವೀಂದ್ರ ಜಡೇಜಾ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯಿಂದ ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದಾರೆ. ಈ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಸಿಇಒ ಕಾಶಿ ವಿಶ್ವನಾಥನ್ ಖಚಿತಪಡಿಸಿದ್ದಾರೆ.

ಭಾರತ vs ಇಂಗ್ಲೆಂಡ್, 2ನೇ ಏಕದಿನ, Live ಸ್ಕೋರ್, ಪ್ಲೇಯಿಂಗ್ XIಭಾರತ vs ಇಂಗ್ಲೆಂಡ್, 2ನೇ ಏಕದಿನ, Live ಸ್ಕೋರ್, ಪ್ಲೇಯಿಂಗ್ XI

ಆಸಿಸ್ ವಿರುದ್ಧದ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಕೈ ಬೆರಳಿಗೆ ಗಾಯಮಾಡಿಕೊಂಡು ಜಡೇಜಾ ತವರಿಗೆ ಮರಳಿದ್ದರು. ಬಳಿಕ ಅವರು ಬೆಂಗಳೂರಿನ ಎನ್‌ಸಿಎನಲ್ಲಿ ಕಳೆದ ಎರಡು ತಿಂಗಳಿನಿಂದ ಚೇತರಿಸಿಕೊಳ್ಳುತ್ತಿದ್ದರು. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಮೂರು ಮಾದರಿಯ ಸರಣಿಯಿಂದಲೂ ಹೊರಗುಳಿದಿದ್ದರು.

ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ಹೊರ ಬಿದ್ದ ಬಳಿಕ ಜಡೇಜಾ ಐಪಿಎಲ್‌ನಲ್ಲಿ ಪಾಲ್ಗೊಳ್ಳುವುದು ಅನುಮಾನ ಎಂಬ ಮಾತುಗಳು ಕೇಳಿ ಬಂದಿತ್ತು. ಒಂದೆಡೆ ಚೆನ್ನೈನ ಆಟಗಾರರೆಲ್ಲರೂ ಚೆನ್ನೈನಲ್ಲಿ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಂಡಿದ್ದರೆ ಜಡೇಜಾ ಬಗ್ಗೆ ಯಾವುದೇ ಮಾಹಿತಿಗಳು ದೊರೆತಿರಲಿಲ್ಲ. ಆದರೆ ಈಗ ಜಡೇಜಾ ಐಪಿಎಲ್‌ಗೆ ಸಂಪೂರ್ಣವಾಗಿ ಫಿಟ್ ಆಗಿರುವುದು ಖಚಿತವಾಗಿದೆ.

ಭಾರತ vs ಇಂಗ್ಲೆಂಡ್: ಏಕದಿನ ಸರಣಿ ಗೆಲುವಿನತ್ತ ಭಾರತದ ಚಿತ್ತಭಾರತ vs ಇಂಗ್ಲೆಂಡ್: ಏಕದಿನ ಸರಣಿ ಗೆಲುವಿನತ್ತ ಭಾರತದ ಚಿತ್ತ

ಸದ್ಯ ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿ ಅಂತಿಮ ಹಂತಕ್ಕೆ ಬಂದಿದ್ದು ಒಂದು ಏಕದಿನ ಪಂದ್ಯ ಮಾತ್ರವೇ ಬಾಕಿಯಿದೆ. ಭಾನುವಾರ ಮುಂದಿನ ಪಂದ್ಯ ನಡೆಯಲಿದ್ದು ಬಳಿಕ ಎಲ್ಲಾ ಆಟಗಾರರು ಐಪಿಎಲ್‌ಗೆ ಸಿದ್ಧರಾಗಲಿದ್ದಾರೆ. ಏಪ್ರಿಲ್ 9ರಿಂದ ಐಪಿಎಲ್ ಚಾಲನೆ ಪಡೆದುಕೊಳ್ಳಲಿದ್ದು ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಉದ್ಘಾಟನಾ ಪಂದ್ಯದಲ್ಲಿ ಸೆಣೆಸಾಡಲಿದೆ.

Story first published: Friday, March 26, 2021, 15:33 [IST]
Other articles published on Mar 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X