ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಇತಿಹಾಸದಲ್ಲಿ ಭಾರತೀಯ ಬೌಲರ್‌ಗಳಲ್ಲೇ ಶ್ರೇಷ್ಠ ದಾಖಲೆ ಬರೆದ ಹರ್ಷಲ್ ಪಟೇಲ್

IPL 2021: RCB pacer Harshal Patel sets new IPL record as Highest wicket taken in single season

ಆರ್‌ಸಿಬಿ ತಂಡದ ವೇಗದ ಬೌಲರ್ ಹರ್ಷಲ್ ಪಟೇಲ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 3 ವಿಕೆಟ್ ಪಡೆಯುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. 14 ಆವೃತ್ತಿಗಳ ಪೈಕಿ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ದಾಖಲೆಯನ್ನು ಹರ್ಷಲ್ ಪಟೇಲ್ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಜಸ್ಪ್ರೀತ್ ಬೂಮ್ರಾ ಹೆಸರಿನಲ್ಲಿತ್ತು.

ಬೂಮ್ರಾ 2020ರ ಐಪಿಎಲ್ ಆವೃತ್ತಿಯಲ್ಲಿ 27 ವಿಕೆಟ್ ಪಡೆಯುವ ಮೂಲಕ ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದರು. ಅದಕ್ಕಿಂತಲೂ ಮೊದಲು ಭುವನೇಶ್ವರ್ ಕುಮಾರ್ 2017ರ ಆವೃತ್ತಿಯಲ್ಲಿ 26 ವಿಕೆಟ್ ಪಡೆದು ಈ ದಾಖಲೆ ತಮ್ಮ ಹೆಸರಿಗೆ ಬರೆದುಕೊಂಡಿದ್ದರು. ಈ ಪಂದ್ಯದಲ್ಲಿ ಆಡಲು ಇಳಿಯುವ ಮುನ್ನ ಹರ್ಷಲ್ ಪಟೇಲ್‌ಗೆ ಬೂಮ್ರಾ ಹೆಸರಿನಲ್ಲಿದ್ದ ಈ ದಾಖಲೆ ಮುರಿಯಲು ಎರಡು ವಿಕೆಟ್ ಅಗತ್ಯವಿತ್ತು. ಆದರೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಹರ್ಷಲ್ ಪಟೇಲ್ 3 ವಿಕೆಟ್ ಪಡೆದಿದ್ದು ತಮ್ಮ ವಿಕೆಟ್ ಗಳಿಕೆಯನ್ನು 29ಕ್ಕೆ ಏರಿಸಿದ್ದಾರೆ.

ಐಪಿಎಲ್‌ನಿಂದ ನಿವೃತ್ತಿ ಹೊಂದಿದ ನಂತರ ಸಿನಿಮಾ ನಟನಾಗುತ್ತಾರಾ ಧೋನಿ?; ಧೋನಿ ಹೇಳಿದ್ದಿಷ್ಟುಐಪಿಎಲ್‌ನಿಂದ ನಿವೃತ್ತಿ ಹೊಂದಿದ ನಂತರ ಸಿನಿಮಾ ನಟನಾಗುತ್ತಾರಾ ಧೋನಿ?; ಧೋನಿ ಹೇಳಿದ್ದಿಷ್ಟು

ಆರ್‌ಸಿಬಿ ತಂಡದ ವೇಗಿಯ ಮುಂದೆ ಈಗ ಮತ್ತೊಂದು ಅತ್ಯುತ್ತಮ ಅವಕಾಶವಿದೆ. ಒಟ್ಟಾರೆಯಾಗಿ ಐಪಿಎಲ್‌ನ ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಕೂಡ ತಮ್ಮ ಹೆಸರಿಗೆ ಬರೆಯುವ ಅವಕಾಶ ಹರ್ಷಲ್ ಪಟೇಲ್‌ಗೆ ಇದೆ.

ಬ್ರಾವೋ ದಾಖಲೆ ಮುರಿಯುತ್ತಾರಾ ಹರ್ಷಲ್: ಒಟ್ಟಾರೆಯಾಗಿ ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್‌ರೌಂಡರ್ ಡ್ವೇಯ್ನ್ ಬ್ರಾವೋ ಹೆಸರಿನಲ್ಲಿದ್ದು ಬ್ರಾವೋ 2013ರ ಆವೃತ್ತಿಯಲ್ಲಿ 32 ವಿಕೆಟ್ ಕಬಳಿಸಿದ್ದರು. ಇನ್ನು ಕೇವಲ ನಾಲ್ಕು ವಿಕೆಟ್ ಪಡೆದರೆ ಹರ್ಷಲ್ ಈ ಐತಿಹಾಸಿಕ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಲಿದ್ದಾರೆ ಹರ್ಷಲ್ ಪಟೇಲ್.

ಐಪಿಎಲ್‌ನ ಈ ಪ್ರಮುಖ ನಿಯಮವನ್ನು ಬದಲಾಯಿಸಲು ಒತ್ತಾಯಿಸಿದ ಆಕಾಶ ಚೋಪ್ರಐಪಿಎಲ್‌ನ ಈ ಪ್ರಮುಖ ನಿಯಮವನ್ನು ಬದಲಾಯಿಸಲು ಒತ್ತಾಯಿಸಿದ ಆಕಾಶ ಚೋಪ್ರ

ಮತ್ತೆ ದ್ವಿತಿಯಾರ್ಧದಲ್ಲಿ ತಿರುಗಿ ಬಿದ್ದ ಆರ್‌ಸಿಬಿ ಬೌಲರ್‌ಗಳು: ಈ ಬಾರಿಯ ಐಪಿಎಲ್‌ನ ಎರಡನೇ ಚರಣದಲ್ಲಿ ಆರ್‌ಸಿಬಿ ಪ್ರತಿ ಪಂದ್ಯದಲ್ಲಿಯೂ ಮೊದಲಾರ್ಧದಲ್ಲಿ ಅನುಭವಿಸಿದ ವೈಫಲ್ಯವನ್ನು ಹೈದರಾಬಾದ್ ವಿರುದ್ಧಧ ಪಂದ್ಯದಲ್ಲಿಯೂ ಅನುಭವಿಸಿತು. ಆದರೆ ಪವರ್‌ಪ್ಲೇನಲ್ಲಿ ಮೊದಲ ವಿಕೆಟ್ ಪಡೆಯಲು ಯಶಸ್ವಿಯಾಯಿತು. ಆದರೆ ಎರಡನೇ ವಿಕೆಟ್‌ಗೆ ಆರಂಭಿಕ ಆಟಗಾರ ಜೇಸನ್ ರಾಯ್ ಹಾಗೂ ಕೇನ್ ವಿಲಿಯಮ್ಸನ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು. 11.2 ಓವರ್‌ಗಳಲ್ಲಿ 84 ರನ್‌ಗಳಿಗೆ 1 ವಿಕೆಟ್ ಕಳೆದುಕೊಂಡು ಹೈದರಾಬಾದ್ ಒಂದು ಹಂತಕ್ಕೆ ಸುಸ್ಥಿತಿಯಲ್ಲಿತ್ತು. ಆದರೆ ಬಳಿಕ ಆರ್‌ಸಿಬಿ ಬೌಲರ್‌ಗಳು ಹೈದರಾಬಾದ್ ದಾಂಡಿಗರ ಮೇಲೆ ಸವಾರಿ ಮಾಡಲು ಆರಂಭಿಸಿದರು.

ಕ್ರಿಶ್ಚಿಯನ್, ಪಟೇಲ್ ಆರ್ಭಟ: ಆರ್‌ಸಿಬಿ ಬೌಲರ್‌ಗಳು ಮೊದಲ ಇನ್ನಿಂಗ್ಸ್‌ನ ದ್ವಿತಿಯಾರ್ಧದ ವೇಳೆ ತಮ್ಮ ಎಂದಿನ ಲಯಕ್ಕೆ ಮರಳುವಲ್ಲಿ ಯಶಸ್ವಿಯಾದರು. ಈ ಹಿಮದಿನ ಪಂದ್ಯಗಳಲ್ಲಿ ಕಳೆಗುಂದಿದ್ದ ಡೇನಿಯಲ್ ಕ್ರಿಶ್ಚಿಯನ್ ಈ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದರು. ಮೂರು ಓವರ್‌ಗಳಲ್ಲಿ ಕೇವಲ 14 ರನ್‌ ನೀಡಿ ಎಸ್‌ಆರ್‌ಹೆಚ್‌ನ ಎರಡು ವಿಕೆಟ್ ಪಡೆದರು. ಎಸ್‌ಆರ್ಹೆಚ್ ನಾಯಕ ಕೇನ್ ವಿಲಿಯಮ್ಸನ್ ಸೇರಿದಂತೆ ಮೂರು ವಿಕೆಟ್‌ಗಳು ಹರ್ಷಲ್ ಪಟೇಲ್ ಪಾಲಾದವು. ಜಾರ್ಜ್ ಗಾರ್ಟನ್ ಹಾಗೂ ಚಾಹಲ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

ಟಿ20 ವಿಶ್ವಕಪ್‌: ಆತಂಕಕ್ಕೆ ಕಾರಣವಾಗಿದೆ ಟೀಮ್ ಇಂಡಿಯಾದ ಈ 5 ಆಟಗಾರರ ಪ್ರದರ್ಶನ!ಟಿ20 ವಿಶ್ವಕಪ್‌: ಆತಂಕಕ್ಕೆ ಕಾರಣವಾಗಿದೆ ಟೀಮ್ ಇಂಡಿಯಾದ ಈ 5 ಆಟಗಾರರ ಪ್ರದರ್ಶನ!

ಆರ್‌ಸಿಬಿಗೆ ಗೆಲ್ಲಲು 142 ರನ್ ಗುರಿ: ಆರಂಭಿಕ ಆಟಗಾರ ಜೇಸನ್ ರಾಯ್ ಹಾಗೂ ಕೇನ್ ವಿಲಿಯಮ್ಸನ್ ನೀಡಿದ ಉತ್ತಮ ಪ್ರದರ್ಶನದಿಂದ ಎಸ್‌ಆರ್‌ಹೆಚ್ ಉತ್ತಮ ಮೊತ್ತ ಗಳಿಸುವ ಮುನ್ಸೂಚನೆ ನೀಡಿತು. ಆದರೆ ನಂತರ ಆರ್‌ಸಿಬಿ ಬೌಲರ್‌ಗಳು ಮೇಲುಗೈ ಸಾಧಿಸಿದ ಕಾರಣ ದೊಡ್ಡ ಮೊತ್ತ ಗಳಿಸಲು ಹೈದರಾಬಾದ್ ವಿಫಲವಾಯಿತು. ಆದರೂ 142 ರನ್‌ಗಳ ಸವಾಲಿನ ಗುರಿಯನ್ನು ಹೈದರಾಬಾದ್ ಆರ್‌ಸಿಬಿಗೆ ನೀಡಿದೆ.

ಆರ್‌ಸಿಬಿ ಆಡುವ ಬಳಗ: ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಶ್ರೀಕರ್ ಭಾರತ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿವಿಲಿಯರ್ಸ್, ಡೇನಿಯಲ್ ಕ್ರಿಶ್ಚಿಯನ್, ಶಹಬಾಜ್ ಅಹ್ಮದ್, ಜಾರ್ಜ್ ಗಾರ್ಟನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್
ಬೆಂಚ್: ದುಷ್ಮಂತ ಚಮೀರಾ, ಸಚಿನ್ ಬೇಬಿ, ಕೈಲ್ ಜೇಮೀಸನ್, ನವದೀಪ್ ಸೈನಿ, ಪವನ್ ದೇಶಪಾಂಡೆ, ರಜತ್ ಪಾಟಿದಾರ್, ಮೊಹಮ್ಮದ್ ಅಜರುದ್ದೀನ್, ವಾನಿಂದು ಹಸರಂಗ, ಸುಯಶ್ ಪ್ರಭುದೇಸಾಯಿ, ಟಿಮ್ ಡೇವಿಡ್, ಆಕಾಶ್ ದೀಪ್

RCB ನಿನ್ನೆ ಸೋಲಲು Padikkal ಮುಖ್ಯ ಕಾರಣವೇ | Oneindia Kannada

ಜೇಸನ್ ರಾಯ್, ವೃದ್ಧಿಮಾನ್ ಸಾಹಾ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್ (ನಾಯಕ), ಪ್ರಿಯಂ ಗರ್ಗ್, ಅಬ್ದುಲ್ ಸಮದ್, ಅಭಿಷೇಕ್ ಶರ್ಮಾ, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ದಾರ್ಥ್ ಕೌಲ್, ಉಮ್ರಾನ್ ಮಲಿಕ್
ಬೆಂಚ್ ಸಂದೀಪ್ ಶರ್ಮಾ, ಮನೀಶ್ ಪಾಂಡೆ, ಖಲೀಲ್ ಅಹ್ಮದ್, ಮುಜೀಬ್ ಉರ್ ರೆಹಮಾನ್, ಶೆರ್ಫೇನ್ ರುದರ್ಫೋರ್ಡ್, ಜಗದೀಶ ಸುಚಿತ್, ಮೊಹಮ್ಮದ್ ನಬಿ, ಬೆಸಿಲ್ ತಂಪಿ, ವಿರಾಟ್ ಸಿಂಗ್, ಶಹಬಾಜ್ ನದೀಮ್, ಡೇವಿಡ್ ವಾರ್ನರ್, ಶ್ರೀವತ್ ಗೋಸ್ವಾಮಿ, ಕೇದಾರ್ ಜಾಧವ್

Story first published: Thursday, October 7, 2021, 10:01 [IST]
Other articles published on Oct 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X