ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹರ್ಷಲ್ ಪಟೇಲ್‌ಗೆ ಹ್ಯಾಟ್ರಿಕ್: ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ 3ನೇ ಆರ್‌ಸಿಬಿ ಬೌಲರ್

IPL 2021: RCB pacer Harshal Patel take hat-trick against Mumbai Indians

ಈ ಬಾರಿಯ ಐಪಿಎಲ್‌ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡುತ್ತಿರುವ ಹರ್ಷಲ್ ಪಟೇಲ್ ಈಗಾಗಲೇ ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದಾರೆ. ಈಗ ಹ್ಯಾಟ್ರಿಕ್ ಸಾಧನೆಯ ಗರಿಯೂ ಹರ್ಷಲ್ ಮುಡಿಗೇರಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಹರ್ಷಲ್ ಪಟೇಲ್ ಈ ಅದ್ಭುತ ಸಾಧನೆ ಮಾಡಿದ್ದಾರೆ. ಈ ಮೂಲಕ ಐಪಿಎಲ್‌ನಲ್ಲಿ ಹ್ಯಾಟ್ರಿಕ್ ಸಾಧಿಸಿದ ಮೂರನೇ ಆರ್‌ಸಿಬಿ ಬೌಲರ್ ಎನಿಸಿದ್ದಾರೆ ಹರ್ಷಲ್ ಪಟೇಲ್.

166 ರನ್‌ಗಳ ಗುರಿ ಪಡೆದಿದ್ದ ಮುಂಬೈ ಇಂಡಿಯನ್ಸ್ 97 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಕ್ರೀಸ್‌ನಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಅಪಾಯಕಾರಿ ಕಿರಾನ್ ಪೊಲಾರ್ಡ್ ಇದ್ದರು. 17ನೇ ಓವರ್ ಎಸೆತಲು ಹರ್ಷಲ್ ಪಟೇಲ್‌ಗೆ ಚೆಂಡನ್ನು ನಿಡಿದ್ದರು ನಾಯಕ ವಿರಾಟ್ ಕೊಹ್ಲಿ. ಈ ಸಂದರ್ಭದಲ್ಲಿ ಮುಂಬೈ ಸ್ಕೋರ್ 106 ರನ್‌ ಆಗಿತ್ತು. 3 ರನ್‌ಗಳಿಸಿದ್ದ ಹಾರ್ದಿಕ್ ಪಾಂಡ್ಯ ವಿರಾಟ್ ಕೊಹ್ಲಿಗೆ ಕ್ಯಾಚ್ಗ ನೀಡಿ ನಿರ್ಗಮಿಸಿದ್ದರು. ಈ ಮೂಲಕ ಹರ್ಷಲ್ ತಮ್ಮ ಮೊದಲ ವಿಕೆಟ್ ಪಡೆದುಕೊಂಡಿದ್ದರು.

ನಂತರ ಮುಂದಿನ ಎಸೆತದಲ್ಲಿಯೇ ಕಿರಾನ್ ಪೊಲಾರ್ಡ್ ಹರ್ಷಲ್ ಪಟೇಲ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಸತತ ಎರಡನೇ ಎಸೆತದಲ್ಲಿ ಎರಡನೇ ವಿಕೆಟ್ ಪಡೆದಿದ್ದರು ಹರ್ಷಲ್. ಹ್ಯಾಟ್ರಿಕ್ ಎಸೆತವನ್ನು ಎದುರಿಸಲು ಬ್ಯಾಟ್ ಹಿಡಿದಿದ್ದವರು ರಾಹುಲ್ ಚಾಹರ್. ಸ್ಲೋ ಯಾರ್ಕರ್ ಎಸೆದ ಹರ್ಷಲ್ ಪಟೇಲ್ ಚಾಹರ್‌ರನ್ನು ಯಾಮಾರಿಸಲು ಯಶಸ್ವಿಯಾಗಿದ್ದರು. ಈ ಮೂಲಕ ಅಮೋಘ ಹ್ಯಾಟ್ರಿಕ್ ವಿಕೆಟ್ ಪಡೆಯುವಲ್ಲಿ ಹರ್ಷಲ್ ಪಟೇಲ್ ಯಶಸ್ವಿಯಾಗಿದ್ದಾರೆ. ಅಂತಿಮವಾಗಿ ಆಡಂ ಮಿಲ್ನೆಯನ್ನು ಕೂಡ ಬೌಲ್ಡ್ ಮಾಡುವ ಮೂಲಕ ಪಂದ್ಯದಲ್ಲಿ ನಾಲ್ಕನೇ ವಿಕೆಟ್ ಪಡೆದುಕೊಂಡಿದ್ದಾರೆ.

ಐಪಿಎಲ್‌ನಲ್ಲಿ ಹ್ಯಾಟ್ರಿಕ್ ಸಾಧಿಸಿದ ಮೂರನೇ ಆರ್‌ಸಿಬಿ ಬೌಲರ್: ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಹ್ಯಾಟ್ರಿಕ್ ಪಡೆದ ಹರ್ಷಲ್ ಈ ಸಾಧನೆ ಮಾಡಿದ ಆರ್‌ಸಿಬಿ ತಮಡದ ಮೂರಬೇ ಬೌಲರ್ ಎನಿಸಿದ್ದಾರೆ. ಇದಕ್ಕೂ ಮುನ್ನ 2010ರ ಆವೃತ್ತಿಯಲ್ಲಿ ಪ್ರವೀಣ್ ಕುಮಾರ್ ಮೊದಲ ಬಾರಿಗೆ ಆರ್‌ಸಿಬಿ ಪರವಾಗಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು.

ಇನ್ನು ಆರ್‌ಸಿಬಿ ಪರವಾಗಿ ಎರಡನೇ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದ ಬೌಲರ್ ಸ್ಯಾಮ್ಯುಯೆಲ್ ಬದ್ರಿ. 2017ರಲ್ಲಿ ನಡೆದಿದ್ದ ಈ ಪಂದ್ಯದಲ್ಲಿಯೂ ಆರ್‌ಸಿಬಿಗೆ ಎದುರಾಳಿಯಾಗಿದ್ದ ತಂಡ ಮುಂಬೈ ಇಂಡಿಯನ್ಸ್. ಮೊದಲ ಎರಡು ಹ್ಯಾಟ್ರಿಕ್ ಕೂಡ ಬೆಂಗಳೂರಿನ ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿಯೇ ನಡೆದಿತ್ತು.

ABD ಔಟ್ ಆದಾಗ ಅತ್ಯಂತ ನೊಂದ ಅಭಿಮಾನಿ ಇವನೇ | Oneindia Kannada

ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಹರ್ಷಲ್ ಪಟೇಲ್ ಅದ್ಭುತ ಸಾಧನೆ ಮಾಡಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಐದು ವಿಕೆಟ್‌ಗಳ ಗೊಂಚಲು ಪಡೆದಿದ್ದರು ಹರ್ಷಲ್. ಇದೀಗ ಹ್ಯಾಟ್ರಿಕ್ ಸಾಧನೆ ಕೂಡ ಮಾಡುವ ಮೂಲಕ ವಿಶೇಷ ಹಾಗೂ ಅಪರೂಪದ ಸಾಧನೆ ಮಾಡಿದ್ದಾರೆ.

Story first published: Monday, September 27, 2021, 11:35 [IST]
Other articles published on Sep 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X