ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್ ಸ್ಫೋಟಕ ಬ್ಯಾಟ್ಸ್‌ಮನ್ ಫಿನ್ ಅಲೆನ್ ಆರ್‌ಸಿಬಿಗೆ ಸೇರ್ಪಡೆ!

IPL 2021: RCB ropes in New Zealand explosive batsman Finn Allen

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಎಬಿ ಡಿ ವಿಲಿಯರ್ಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಜೊತೆಗೆ ಮತ್ತೊಬ್ಬ ಸ್ಫೋಟಕ ಬ್ಯಾಟ್ಸ್‌ಮನ್‌ ಸೇರ್ಪಡೆಗೊಂಡಿದ್ದಾರೆ. ನ್ಯೂಜಿಲೆಂಡ್‌ನ ಆಕ್ರಮಣಕಾರಿ ಬ್ಯಾಟ್ಸ್‌ಮನ್‌ ಕಮ್ ವಿಕೆಟ್ ಕೀಪರ್ ಫಿನ್ ಅಲೆನ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ರಾಯಲ್ ಚಾಲೆಂಜರ್ಸ್ ಪರ ಕಣಕ್ಕಿಳಿಯಲಿದ್ದಾರೆ.

ಭಾರತ-ಇಂಗ್ಲೆಂಡ್ ಟಿ20ಐಗೆ ಭಾರತ ಪ್ಲೇಯಿಂಗ್ XI ಪ್ರಕಟಿಸಿದ ಲಕ್ಷ್ಮಣ್ಭಾರತ-ಇಂಗ್ಲೆಂಡ್ ಟಿ20ಐಗೆ ಭಾರತ ಪ್ಲೇಯಿಂಗ್ XI ಪ್ರಕಟಿಸಿದ ಲಕ್ಷ್ಮಣ್

ಆರ್‌ಸಿಬಿ ತಂಡದಲ್ಲಿದ್ದ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ ಕಮ್ ವಿಕೆಟ್ ಕೀಪರ್ ಜೋಶ್ ಫಿಲಿಪ್ 2021ರ ಐಪಿಎಲ್ ಸೀಸನ್‌ನಲ್ಲಿ ಆಡುತ್ತಿಲ್ಲ. ಹೀಗಾಗಿ ಕಿವೀಸ್ ಬ್ಯಾಟ್ಸ್‌ಮನ್ ಫಿನ್ ಅಲೆನ್ ಜೊತೆಗೆ ಆರ್‌ಸಿಬಿ ಒಪ್ಪಂದ ಮಾಡಿಕೊಂಡಿದೆ. ಅಲೆನ್ ಆರ್‌ಸಿಬಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದನ್ನು ಆರ್‌ಸಿಬಿ ಅಧಿಕೃತವಾಗಿ ಘೋಷಿಸಿದೆ.

ಆರ್‌ಸಿಬಿ ಅಧಿಕೃತ ಘೋಷಣೆ

ಆರ್‌ಸಿಬಿ ಅಧಿಕೃತ ಘೋಷಣೆ

'ಜೋಶ್ ಫಿಲಿಪ್ ಬದಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ, ನ್ಯೂಜಿಲೆಂಡ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಫಿನ್ ಅಲೆನ್ ಅವರ ಜೊತೆ ಒಪ್ಪಂದ ಮಾಡಿಕೊಂಡಿದೆ, ಫಿಲಿಪ್ ಈ ಬಾರಿಯ ಇಡೀ ಸೀಸನ್‌ನಲ್ಲಿ ಲಭ್ಯರಿರುವುದಿಲ್ಲ,' ಎಂದು ಐಪಿಎಲ್ ಹೇಳಿದೆ. 2020ರಲ್ಲಿ 5 ಪಂದ್ಯಗಳಲ್ಲಿ ಆಡಿದ್ದ ಜೋಶ್ 78 ರನ್ ಗಳಿಸಿದ್ದರು.

ಫಿನ್ ಸಾಧನೆ, ಮೂಲಬೆಲೆ

ಫಿನ್ ಸಾಧನೆ, ಮೂಲಬೆಲೆ

ನ್ಯೂಜಿಲೆಂಡ್‌ನ ಆಕ್ಲೆಂಡ್‌ನವರಾದ ಫಿನ್ ಅಲೆನ್ ಪೂರ್ಣ ಹೆಸರು ಫಿನ್ಲೆ ಹಗ್ ಅಲೆನ್. 1999ರಲ್ಲಿ ಜನಿಸಿರುವ ಫಿನ್‌ಗೀಗ 21ರ ಹರೆಯ. ಬಲಗೈ ಬ್ಯಾಟ್ಸ್‌ಮನ್‌ ಆಗಿರುವ ಫಿನ್ 12 ಪ್ರಥಮರ್ಜೆ ಕ್ರಿಕೆಟ್‌ ಪಂದ್ಯಗಳಲ್ಲಿ 19.05ರ ಸರಾಸರಿಯಂತೆ 343 ರನ್ ಗಳಿಸಿದ್ದಾರೆ. ಇದರಲ್ಲಿ 3 ಅರ್ಧ ಶತಕಗಳು ಸೇರಿವೆ. ಇನ್ನು ಲಿಸ್ಟ್ 'ಎ' 20 ಇನ್ನಿಂಗ್ಸ್‌ಗಳಲ್ಲಿ 501 ರನ್, 13 ಟಿ20 ಇನ್ನಿಂಗ್ಸ್‌ಗಳಲ್ಲಿ 537 ರನ್ ಗಳಿಸಿದ್ದಾರೆ. ಜೋಶ್ ಅವರಂತೆ ಫಿನ್ ಮೂಲಬೆಲೆ ಕೂಡ 20 ಲಕ್ಷ ರೂ. ಆಗಿತ್ತು.

ಬೆಂಗಳೂರು-ಮುಂಬೈ ಮುಖಾಮುಖಿ

14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್‌ ಏಪ್ರಿಲ್ 9ರಿಂದ ಮೇ 30ರ ವರೆಗೆ ಮುಂಬೈ, ಕೋಲ್ಕತ್ತ, ದೆಹಲಿ, ಚೆನ್ನೈ, ಬೆಂಗಳೂರು ಮತ್ತು ಅಹ್ಮದಾಬಾದ್ ತಾಣಗಳಲ್ಲಿ ನಡೆಯಲಿದೆ. ಚೆನ್ನೈನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ. ಲೀಗ್ ಹಂತದಲ್ಲಿ ಒಟ್ಟು 56 ಪಂದ್ಯಗಳಿದ್ದು, ಒಟ್ಟಾರೆ ಟೂರ್ನಿ 52 ದಿನಗಳ ಕಾಲ ನಡೆಯಲಿದೆ.

Story first published: Thursday, March 11, 2021, 12:52 [IST]
Other articles published on Mar 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X