ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭರ್ಜರಿ ಸಿಕ್ಸರ್‌ಗಳಿಗಾಗಿ ಅಪರೂಪದ ದಾಖಲೆ ಬರೆದ ಎಬಿ ಡಿ ವಿಲಿಯರ್ಸ್

IPL 2021: RCBs AB de Villiers completes 250 sixes in IPL

ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಮುಖ ಬ್ಯಾಟ್ಸ್‌ಮನ್‌ ಎಬಿ ಡಿ ವಿಲಿಯರ್ಸ್ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಐಪಿಎಲ್‌ನಲ್ಲಿ 250 ಸಿಕ್ಸರ್‌ಗಳ ದಾಖಲೆ ಪಟ್ಟಿಗೆ ಎಬಿಡಿ ಸೇರ್ಪಡೆಯಾಗಿದ್ದಾರೆ. ಬುಧವಾರದ (ಅಕ್ಟೋಬರ್ 6) ಪಂದ್ಯದಲ್ಲಿ ಮಿಸ್ಟರ್ 360 ಡಿಗ್ರೀ ಖ್ಯಾತಿಯ ಎಬಿಡಿ ಈ ಸಾಧನೆ ಮಾಡಿದ್ದಾರೆ.

'ನಾನು ಮೂರ್ಖನಲ್ಲ': ಪಾಕ್ ತಂಡಕ್ಕೆ ಕೋಚ್ ಆಗಲು ನಿರಾಕರಿಸಿದ ಕಾರಣ ವಿವರಿಸಿದ ವಾಸಿಮ್ ಅಕ್ರಂ'ನಾನು ಮೂರ್ಖನಲ್ಲ': ಪಾಕ್ ತಂಡಕ್ಕೆ ಕೋಚ್ ಆಗಲು ನಿರಾಕರಿಸಿದ ಕಾರಣ ವಿವರಿಸಿದ ವಾಸಿಮ್ ಅಕ್ರಂ

ಬುಧವಾರ ಐಪಿಎಲ್ 52ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ 13 ಎಸೆತಗಳಲ್ಲಿ 19 ರನ್ ಬಾರಿಸಿದ್ದರು. ಇದರಲ್ಲಿ 1 ಫೋರ್, 1 ಸಿಕ್ಸರ್ ಸೇರಿತ್ತು. ಇದರೊಂದಿಗೆ ಎಬಿಡಿ ಐಪಿಎಲ್‌ನಲ್ಲಿ 250 ಸಿಕ್ಸರ್ ದಾಖಲೆ ಪೂರೈಸಿದ್ದಾರೆ.

ಐಪಿಎಲ್ 2021: ಆರ್‌ಸಿಬಿ vs ಎಸ್‌ಆರ್‌ಎಚ್, Live ಸ್ಕೋರ್‌

1
50857

6ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಎಬಿಡಿ 19 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದರು. ಪಂದ್ಯ ಗೆಲ್ಲಿಸಲು ಆರ್‌ಸಿಬಿ ಪ್ರಯತ್ನಿಸಿತಾದರೂ ರೋಚಕ 4 ರನ್‌ನಿಂದ ಹೈದರಾಬಾದ್ ತಂಡ ಪಂದ್ಯ ಗೆದ್ದಿದೆ. ಇದು ಹೈದರಾಬಾದ್‌ಗೆ ಈ ಸೀಸನ್‌ನಲ್ಲಿ ಲಭಿಸುತ್ತಿರುವ ಮೂರನೇ ಗೆಲುವು.

ಐಪಿಎಲ್ 2021: ಮುಂದಿನ ಐಪಿಎಲ್‌ನಲ್ಲಿ ಎಂಎಸ್ ಧೋನಿ ಆಡ್ತಾರಾ, ಇಲ್ವಾ?ಐಪಿಎಲ್ 2021: ಮುಂದಿನ ಐಪಿಎಲ್‌ನಲ್ಲಿ ಎಂಎಸ್ ಧೋನಿ ಆಡ್ತಾರಾ, ಇಲ್ವಾ?

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಸನ್ ರೈಸರ್ಸ್ ಹೈದರಾಬಾದ್, ಜೇಸನ್ ರಾಯ್ 44, ವೃದ್ಧಿಮಾನ್ ಸಹಾ 13, ಕೇನ್ ವಿಲಿಯಮ್ಸನ್ 31, ಪ್ರಿಯಂ ಗರ್ಗ್ 15, ಅಬ್ದುಲ್ ಸಮದ್ 1, ಅಭಿಷೇಕ್ ಶರ್ಮಾ 13, ಜೇಸನ್ ಹೋಲ್ಡರ್ 16, ರಶೀದ್ ಖಾನ್ 7 ರನ್‌ನೊಂದಿಗೆ 20 ಓವರ್‌ಗೆ 7 ವಿಕೆಟ್‌ ಕಳೆದು 141 ರನ್ ಗಳಿಸಿತ್ತು.

ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ವಿರಾಟ್ ಕೊಹ್ಲಿ 5, ದೇವದತ್ ಪಡಿಕ್ಕಲ್ 41, ಶ್ರೀಕರ್ ಭಾರತ್ 12, ಗ್ಲೆನ್ ಮ್ಯಾಕ್ಸ್‌ವೆಲ್ 40, ಎಬಿ ಡಿವಿಲಿಯರ್ಸ್ 19, ಡೇನಿಯಲ್ ಕ್ರಿಶ್ಚಿಯನ್ 1, ಶಹಬಾಜ್ ಅಹ್ಮದ್ 14, ಜಾರ್ಜ್ ಗಾರ್ಟನ್ 2 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 137 ರನ್‌ ಗಳಿಸಿತು.

ಐಪಿಎಲ್ ಇತಿಹಾಸದಲ್ಲಿ ಭಾರತೀಯ ಬೌಲರ್‌ಗಳಲ್ಲೇ ಶ್ರೇಷ್ಠ ದಾಖಲೆ ಬರೆದ ಹರ್ಷಲ್ ಪಟೇಲ್ಐಪಿಎಲ್ ಇತಿಹಾಸದಲ್ಲಿ ಭಾರತೀಯ ಬೌಲರ್‌ಗಳಲ್ಲೇ ಶ್ರೇಷ್ಠ ದಾಖಲೆ ಬರೆದ ಹರ್ಷಲ್ ಪಟೇಲ್

ಸನ್ ರೈಸರ್ಸ್ ಹೈದರಾಬಾದ್ ಇನ್ನಿಂಗ್ಸ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಜಾರ್ಜ್ ಗಾರ್ಟನ್ 1, ಹರ್ಷಲ್ ಪಟೇಲ್ 3, ಯುಜುವೇಂದ್ರ ಚಾಹಲ್ 1, ಡ್ಯಾನ್ ಕ್ರಿಸ್ಚಿಯನ್ 1 ವಿಕೆಟ್ ಪಡೆದರೆ, ಬೆಂಗಳೂರು ಇನ್ನಿಂಗ್ಸ್‌ನಲ್ಲಿ ಹೈದರಾಬಾದ್‌ನ ಭುವನೇಶ್ವರ್ ಕುಮಾರ್ 1, ಜೇಸನ್ ಹೋಲ್ಡರ್ 1, ಸಿದ್ಧಾರ್ಥ್ ಕೌಲ್ 1, ಉಮ್ರನ್ ಮಲಿಕ್ 1, ರಶೀದ್ ಖಾನ್ 1 ವಿಕೆಟ್‌ನಿಂದ ಗಮನ ಸೆಳೆದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ XI
ವಿರಾಟ್ ಕೊಹ್ಲಿ (ಸಿ), ದೇವದತ್ ಪಡಿಕ್ಕಲ್, ಶ್ರೀಕರ್ ಭಾರತ್ (ಡಬ್ಲ್ಯೂ), ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿವಿಲಿಯರ್ಸ್, ಡೇನಿಯಲ್ ಕ್ರಿಶ್ಚಿಯನ್, ಶಹಬಾಜ್ ಅಹ್ಮದ್, ಜಾರ್ಜ್ ಗಾರ್ಟನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್.
ಬೆಂಚ್: ದುಷ್ಮಂತ ಚಮೀರಾ, ಸಚಿನ್ ಬೇಬಿ, ಕೈಲ್ ಜೇಮೀಸನ್, ನವದೀಪ್ ಸೈನಿ, ಪವನ್ ದೇಶಪಾಂಡೆ, ರಜತ್ ಪಾಟಿದಾರ್, ಮೊಹಮ್ಮದ್ ಅಜರುದ್ದೀನ್, ವಾನಿಂದು ಹಸರಂಗ, ಸುಯಾಶ್ ಪ್ರಭುದೇಸಾಯಿ, ಟಿಮ್ ಡೇವಿಡ್, ಆಕಾಶ್ ದೀಪ್.

Maxwell ಔಟ್ ಆದ ರೀತಿ ಅಭಿಮಾನಿಗಳಿಗೆ ಬೇಸರ ತಂದಿದೆ | Oneindia Kannada

ಸನ್ ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ XI
ಜೇಸನ್ ರಾಯ್, ವೃದ್ಧಿಮಾನ್ ಸಹಾ (w), ಕೇನ್ ವಿಲಿಯಮ್ಸನ್ (c), ಪ್ರಿಯಂ ಗರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ದಾರ್ಥ್ ಕೌಲ್, ಉಮ್ರಾನ್ ಮಲಿಕ್.
ಬೆಂಚ್: ಸಂದೀಪ್ ಶರ್ಮಾ, ಮನೀಶ್ ಪಾಂಡೆ, ಖಲೀಲ್ ಅಹ್ಮದ್, ಮುಜೀಬ್ ಉರ್ ರೆಹಮಾನ್, ಶೆರ್ಫೇನ್ ರುದರ್‌ಫೋರ್ಡ್, ಜಗದೀಶ ಸುಚಿತ್, ಮೊಹಮ್ಮದ್ ನಬಿ, ಬೆಸಿಲ್ ಥಂಪಿ, ವಿರಾಟ್ ಸಿಂಗ್, ಶಹಬಾಜ್ ನದೀಮ್, ಡೇವಿಡ್ ವಾರ್ನರ್, ಶ್ರೀವತ್ ಗೋಸ್ವಾಮಿ, ಕೇದಾರ್ ಜಾಧವ್.

Story first published: Thursday, October 7, 2021, 10:00 [IST]
Other articles published on Oct 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X