ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಓರ್ವ ಆಟಗಾರ ನಮ್ಮನ್ನು ಸೋಲಿಸಿಬಿಟ್ಟ: ಸೋಲಿನ ಬಳಿಕ ಕೊಹ್ಲಿ ಪ್ರತಿಕ್ರಿಯೆ

IPL 2021: RCB skipper Virat Kohli Praises allrounder Ravindra Jadeja

ಸತತ ನಾಲ್ಕು ಗೆಲುವುಗಳಿಂದ ಮುನ್ನುಗ್ಗುತ್ತಿದ್ದ ವಿರಾಟ್ ಕೋಹ್ಲಿ ಪಡೆಗೆ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಡೆಯೊಡ್ಡಿದೆ. ಐನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗ ಈ ಆವೃತ್ತಿಯ ಮೊದಲ ಸೋಲನ್ನು ಅನುಭವಿಸಿದೆ. ಈ ಪಂದ್ಯದ ಬಳಿಕ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದು ಈ ಸೋಲನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡು ಬೃಹತ್ ಮೊತ್ತವನ್ನು ಕಲೆಹಾಕಿತು. ರವೀಂದ್ರ ಜಡೇಜಾ ಅವರ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನದ ಕಾರಣದಿಂದಾಗಿ ಚೆನ್ನೈ 191 ರನ್‌ಗಳನ್ನು ಗಳಿಸಿತು. ಆದರೆ ಈ ಮೊತ್ತವನ್ನು ಬೆನ್ನಟ್ಟಲು ಸಾಧ್ಯವಾಗದ ವಿರಾಟ್ ಕೊಹ್ಲಿ ಪಡೆ 121 ರನ್‌ಗಳನ್ನಷ್ಟೇ ಗಳಿಸಿ ಸೋಲು ಕಂಡಿದೆ. ಈ ಪಂದ್ಯದ ಬಳಿಕ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದರು.

ಐಪಿಎಲ್ 2021: ವಾಂಖೆಡೆಯಲ್ಲಿ ರವೀಂದ್ರ ಜಡೇಜಾ ರೌದ್ರಾವತಾರ, ಆರ್‌ಸಿಬಿಗೆ ಸೋಲುಐಪಿಎಲ್ 2021: ವಾಂಖೆಡೆಯಲ್ಲಿ ರವೀಂದ್ರ ಜಡೇಜಾ ರೌದ್ರಾವತಾರ, ಆರ್‌ಸಿಬಿಗೆ ಸೋಲು

ಸಕಾರಾತ್ಮಕವಾಗಿ ನೋಡುತ್ತೇವೆ

ಸಕಾರಾತ್ಮಕವಾಗಿ ನೋಡುತ್ತೇವೆ

"ನಾವು ಇದನ್ನು ಸರಿಯಾದ ರೀತಿಯಲ್ಲಿ ನೋಡಬೇಕಿದೆ. ಈ ಸೋಲು ನಮಗೆ ಸರಿಯಾದ ಸಮಯದಲ್ಲಿ ಬಂದಿದೆ. ಎಡವಬಹುದಾದ ವಿಚಾರಗಳ ಬಗ್ಗೆ ನಾವು ಅರ್ಥ ಮಾಡಿಕೊಳ್ಳಬೇಕು. ನನ್ನ ಪ್ರಕಾರ ಇದೊಂದು ಸಕಾರಾತ್ಮಕವಾದ ಪ್ರತಿಕ್ರಿಯೆಯಾಗಿದೆ. ಟೂರ್ನಿಯ ಆರಂಭದಲ್ಲಿ ಈ ರೀತಿ ಪ್ರದರ್ಶನ ಪಡೆಯುವುದು ಒಳ್ಳೆಯದು. ಪಂದ್ಯ ಹೆಚ್ಚಿನ ಕಾಲ ನಮ್ಮ ಕೈಯ್ಯಲ್ಲಿಯೇ ಇತ್ತು. ಆದರೆ ಪ್ರಮುಖ ಅಂಶವನ್ನು ನಾವು ಕಳೆದುಕೊಂಡೆವು" ಎಂದು ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.

ಜಡ್ಡು ನಮ್ಮಿಂದ ಪಂದ್ಯವವನ್ನು ಕಸಿದರು

ಜಡ್ಡು ನಮ್ಮಿಂದ ಪಂದ್ಯವವನ್ನು ಕಸಿದರು

"ಇಂದಿನ ಆಟದಲ್ಲಿ ರವೀಂದ್ರ ಜಡೇಜಾ ತಮ್ಮ ಅತ್ಯುತ್ತಮ ಕೌಶಲ್ಯವನ್ನು ಪ್ರದರ್ಶಿಸಿದರು. ಕೇವಲ ಓರ್ವ ಆಟಗಾರ ನಮ್ಮನ್ನು ಸೋಲಿಸಿದ ಎಂದು ಬಹುಶಃ ನೀವು ಹೇಳಬಹುದು" ಎಂದು ಆರ್‌ಸಿಬಿ ನಾತಕ ವಿರಾಟ್ ಕೊಹ್ಲಿ ರವೀಂದ್ರ ಜಡೇಜಾ ಪ್ರದರ್ಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು.

ಹರ್ಷಲ್ ಬೆನ್ನಿಗೆ ನಿಂತ ನಾಯಕ

ಹರ್ಷಲ್ ಬೆನ್ನಿಗೆ ನಿಂತ ನಾಯಕ

ಇನ್ನಿ ಇದೇ ಸಂದರ್ಭದಲ್ಲಿ ನಾಯಕ ವಿರಾಟ್ ಕೊಹ್ಲಿ ಅಂತಿಮ ಓವರ್‌ನಲ್ಲಿ 37 ರನ್‌ಗಳನ್ನು ಬಿಟ್ಟುಕೊಟ್ಟ ಹರ್ಷಲ್ ಪಟೇಲ್ ಬಗ್ಗೆಯೂ ಮಾತನಾಡಿದರು. "ನಾವು ಆತನಿಗೆ ನೀಡುವ ಜವಾಬ್ಧಾರಿಯನ್ನು ಮುಂದುವರಿಸುತ್ತೇವೆ. ಆತ ಇಬ್ಬರು ಸೆಟ್ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ್ದ. ಅದೊಂದು ಓವರ್ ಎಲ್ಲವನ್ನೂ ಕಸಿದುಕೊಂಡಿತು. ಈ ವಿಚಾರವನ್ನು ಸೂಕ್ತವಾದ ಕೋನದಿಂದ ನೋಡಬೇಕಿದೆ. ಅದನ್ನು ಬದಿಗೆ ಸರಿಸಿ ಅದರಿಂದ ಪಾಠ ಕಲಿಯಬೇಕು" ಎಂದು ವಿರಾಟ್ ಕೊಹ್ಲಿ ಹೇಳಿಕೆಯನ್ನು ನೀಡಿದ್ದಾರೆ.

ಶ್ರೇಷ್ಠ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ

ಶ್ರೇಷ್ಠ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ರವೀಂದ್ರ ಜಡೇಜಾ ಸಂಪೂರ್ಣ ಆಲ್‌ರೌಂಡರ್ ಪ್ರದರ್ಶನ ನೀಡಿದ್ದಾರೆ. ಮೊದಲಿಗೆ ಬ್ಯಾಟ್‌ನಲ್ಲಿ ಒಂದೇ ಓವರ್‌ನಲ್ಲಿ ಐದು ಸಿಕ್ಸರ್ ಸಿಡಿಸಿ ಸ್ಪೋಟಕ ಅರ್ಧ ಶತಕ ಸಿಡಿಸಿದ ರವೀಂದ್ರ ಜಡೇಜಾ ಬಳಿಕ ಬೌಲಿಂಗ್‌ನಲ್ಲಿಯೂ ಆರ್‌ಸಿಬಿ ಕಂಟಕವಾದರು. ಪ್ರಮುಖ ಮೂರು ವಿಕೆಟ್‌ಗಳು ಜಡ್ಡು ಪಾಲಾಯಿತು. ಜೊತೆಗೆ ಒಂದು ರನ್ಔಟ್‌ಗೂ ರವೀಂದ್ರ ಜಡೇಜಾ ಕಾರಣರಾದರು.

Story first published: Monday, April 26, 2021, 9:38 [IST]
Other articles published on Apr 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X