ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಔಟಾದ ಸಿಟ್ಟಿಗೆ ವಿರಾಟ್ ಕೊಹ್ಲಿ ಮಾಡಿದ್ದೇನು ನೋಡಿ! ವಿಡಿಯೋ

IPL 2021: RCB skipper virat kohli slams chair in frustration

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ 33 ರನ್‌ಗಳಿಸಿ ಔಟಾದರು. ಉತ್ತಮ ಇನ್ನಿಂಗ್ಸ್ ಕಟ್ಟುವ ನಿರೀಕ್ಷೆಯಲ್ಲಿದ್ದ ವಿರಾಟ್‌ಗೆ ಅನುಭವಿ ಹೋಲ್ಡರ್ ಅಡ್ಡಿಯಾದರು. ಈ ಮೂಲಕ ಸನ್‌ರೈಸರ್ಸ್ ವಿರುದ್ಧ ಕೊಹ್ಲಿ ವೈಫಲ್ಯ ಈ ಪಂದ್ಯದಲ್ಲೂ ಮುಂದುವರಿದಿದೆ.

ಈ ಮೂಲಕ ವಿರಾಟ್ ಕೊಹ್ಲಿ ಕಳೆದ ನಾಲ್ಕು ಆವೃತ್ತಿಯಿಂದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಒಂದು ಅರ್ಧ ಶತಕ ಬಾರಿಸಲು ಸಾಧ್ಯವಾಗಿಲ್ಲ. 2016ರ ಐಪಿಎಲ್‌ನ ಫೈನಲ್‌ನಲ್ಲಿ ಡೇವಿಡ್ ವಾರ್ನರ್ ಪಡೆಯ ವಿರುದ್ಧ ಕೊಹ್ಲಿ ತಮ್ಮ ಕೊನೆಯ ಅರ್ಧ ಶತಕ ಬಾರಿಸಿದ್ದರು. ಈ ಪಂದ್ಯದಲ್ಲಿ ವಾರ್ನರ್ ಪಡೆ ಗೆದ್ದು ಟ್ರೋಫಿಗೆ ಮುತ್ತಿಕ್ಕಿತ್ತು.

ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಮಂಕಾದ್ರಾ ವಿರಾಟ್ ಕೊಹ್ಲಿ?ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಮಂಕಾದ್ರಾ ವಿರಾಟ್ ಕೊಹ್ಲಿ?

ವಿರಾಟ್ ಕೊಹ್ಲಿಯ ಅರ್ಧ ಶತಕವನ್ನು ಸೈನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗಳಿಸಿದ ನಂತರ ಇಂದಿನ ಪಂದ್ಯವನ್ನು ಹೊರತು ಪಡಿಸಿ 6 ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಇದರಲ್ಲಿ ಕೊಹ್ಲಿ ಒಟ್ಟು ಗಳಿಸಿದ್ದು 58 ರನ್‌. ಅಂದರೆ ಸರಾಸರಿ 10ಕ್ಕೂ ಕಡಿಮೆ ರನ್‌ ಗಳಿಸಿದ್ದಾರೆ. 12, 3, 16, 14, 7, 6 ಇದು ಕೊಹ್ಲಿ ಗಳಿಸಿದ ರನ್.

ಆದರೆ ಬುಧವಾರ ವಿರಾಟ್ ಕೊಹ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಉತ್ತಮ ಆರಂಭವನ್ನು ಪಡೆದರು. ಹೆಚ್ಚು ಅಪಾಯವನ್ನು ತಂದುಕೊಳ್ಳದೆ ಎಚ್ಚರಿಕೆಯಿಂದ ಆಡುತ್ತಾ ಸಾಗಿದ್ದರು. ಈ ವೇಳೆ ಆರಂಭಿಕ ಆಟಗಾರ ಪಡಿಕ್ಕಲ್ ತಂಡದ ಮೊತ್ತ 19 ರನ್‌ ಆಗುವಷ್ಟರಲ್ಲಿ ವಿಕೆಟ್ ಕಳೆದುಕೊಂಡರೆ ಮೂರನೇ ಕ್ರಮಾಂಕದಲ್ಲಿ ಬಂದ ಶಹ್ಬಾಜ್ ಅಜಂ 14 ರನ್‌ಗಳ ಕೊಡುಗೆ ನೀಡಿ ಫೆವಿಲಿಯನ್ ಸೇರಿದರು.

ಐಪಿಎಲ್‌ನಲ್ಲಿ ಯಶಸ್ವಿ ನಾಯಕ ದಾಖಲೆ ಯಾರ ಹೆಸರಲ್ಲಿದೆ ಗೊತ್ತಾ?!ಐಪಿಎಲ್‌ನಲ್ಲಿ ಯಶಸ್ವಿ ನಾಯಕ ದಾಖಲೆ ಯಾರ ಹೆಸರಲ್ಲಿದೆ ಗೊತ್ತಾ?!

ನಂತರ 13ನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ ಕೂಡ ಜೇಸನ್ ಹೋಲ್ಡರ್ ಎಸೆತದಲ್ಲಿ ವಿಜಯ್ ಶಂಕರ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಚೆನ್ನೈ ಅಂಗಳದಲ್ಲಿ ದೊಡ್ಡ ಇನ್ನಿಂಗ್ಸ್ ಕಟ್ಟುವ ನಿರೀಕ್ಷೆಯಲ್ಲಿದ್ದ ವಿರಾಟ್‌ಗೆ ಇದು ನಿರಾಶೆ ಮೂಡಿಸಿತು. ಈ ಸಿಟ್ಟನ್ನು ವಿರಾಟ್ ಕೊಹ್ಲಿ ಫೆವಿಲಿಯನ್‌ಗೆ ತೆರಳುವ ಹಾದಿಯಲ್ಲಿ ಬೌಂಡರಿ ಲೈನ್ ಸಮೀಪ ತಂಡದ ಡಗೌಟ್‌ನಲ್ಲಿದ್ದ ಕುರ್ಚಿಗೆ ಬ್ಯಾಟ್‌ನಿಂದ ಬಾರಿಸುವ ಮೂಲಕ ವ್ಯಕ್ತಡಿಸಿದ್ದಾರೆ.

Story first published: Thursday, April 15, 2021, 10:18 [IST]
Other articles published on Apr 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X