ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹರ್ಷಲ್ ಹ್ಯಾಟ್ರಿಕ್, ಯುಜಿ ಮ್ಯಾಜಿಕ್: ಮುಂಬೈ ವಿರುದ್ಧ ಆರ್‌ಸಿಬಿಗೆ ಸ್ಮರಣೀಯ ಗೆಲುವು

IPL 2021: RCB vs MI, match 39, Bangalore won the match by 54 runs

ಸೋಲಿನ ಮೇಲೆ ಸೋಲು ಕಂಡು ಆಘಾತ ಅನುಭವಿಸಿದ್ದ ಆರ್‌ಸಿಬಿ ತಂಡ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅಮೋಘ ಗೆಲುವು ಸಾಧಿಸಿದೆ. ಆರ್‌ಸಿಬಿ ತಂಡದ ವೇಗಿ ಹರ್ಷಲ್ ಪಟೇಲ್ ಹಾಗೂ ಯುಜುವೇಂದ್ರ ಚಾಹಲ್ ಅದ್ಭುತ ಸ್ಪೆಲ್‌ಗೆ ಮುಂಬೈ ದಾಂಡಿಗರು ಅಕ್ಷರಶಃ ನಲುಗಿ ಹೋಗಿದ್ದರು. ಹರ್ಷಲ್ ಪಟೇಲ್ ಅದ್ಭುತ ಹ್ಯಾಟ್ರಿಕ್ ಪಡೆಯುವ ಮೂಲಕ ಈ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಭರ್ಜರಿ 54 ರನ್‌ಗಳ ಅಂತರದಿಂದ ಈ ಪಂದ್ಯವನ್ನು ಆರ್‌ಸಿಬಿ ಗೆದ್ದುಕೊಂಡಿದೆ.

ಮೊದಲಿಗೆ ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 165 ರನ್‌ಗಳನ್ನು ಗಳಿಸಿತ್ತು. ನಾಯಕ ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್‌ನಲ್ಲಿ ಆರ್‌ಸಿಬಿ ಪರವಾಗಿ ಅದ್ಭುತ ಪ್ರದರ್ಶನ ನೀಡಿದ್ದರು. ಇದನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಉತ್ತಮ ಆರಂಭದ ಹೊರತಾಗಿಯೂ ಕೇವಲ 111 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ ವಿರಾಟ್ ಕೊಹ್ಲಿ ಪಡೆ ಈ ಪಂದ್ಯದಲ್ಲಿ 54 ರನ್‌ಗಳ ಬೃಹತ್ ಅಂತರದಿಂದ ಗೆಲುವು ಸಾಧಿಸಿದೆ.

ಮುಂಬೈ ಆರಂಭಿಕರ ಭರ್ಜರಿ ಪ್ರದರ್ಶನ: ಆರ್‌ಸಿಬಿ ನೀಡಿದ್ದ 166 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಅದ್ಭುತವಾದ ಆರಂಭ ದೊರೆಯಿತು. ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿಕಾಕ್ ಮೊದಲ ವಿಕೆಟ್‌ಗೆ 57 ರನ್‌ಗಳ ಜೊತೆಯಾಟ ನೀಡಿದರು. ಆರ್‌ಸಿಬಿ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಕ್ವಿಂಟನ್ ಡಿಕಾಕ್ ವಿಕೆಟ್ ಪಡೆಯುವ ಮೂಲಕ ಈ ಜೋಡಿಯನ್ನು ಬೇರ್ಪಡಿಸಿದ್ದರು. ಮತ್ತೊಂದೆಡೆ ರೋಹಿತ್ ಶರ್ಮಾ ಅಬ್ಬರದ ಬ್ಯಾಟಿಂಗ್ ನಡೆಸಿ 28 ಎಸೆತಗಳಲ್ಲಿ 48 ರನ್ ಸಿಡಿಸಿ ಔಟಾದರು. ಇಲ್ಲಿಂದ ಮುಂಬೈ ಇಂಡಿಯನ್ಸ್ ದಾಂಡಿಗರ ಫೆವಿಲಿಯನ್ ಪೆರೇಡ್ ಆರಂಭವಾಗಿತ್ತು.

ಉಳಿದ ಬ್ಯಾಟ್ಸ್‌ಮನ್‌ಗಳ ವೈಫಲ್ಯ: ಮುಂಬೈ ಇಂಡಿಯನ್ಸ್ ತಂಡದ ಆರಂಭಿಕರಿಬ್ಬರನ್ನು ಹೊರತುಪಡಿಸಿದರೆ ಉಳಿದೆಲ್ಲಾ ಆಟಗಾರರು ಕೂಡ ಎರಡಂಕಿ ತಲುಪಲು ಕೂಡ ವಿಫಲವಾಗಿದ್ದರು. ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕೃನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಕಿರಾನ್ ಪೊಲಾರ್ಡ್ ಯಾರಿಬ್ಬರೂ ಕ್ರೀಸ್‌ನಲ್ಲಿ ನೆಲೆಯೂರಲು ಸಾಧ್ಯವಾಗಲೇ ಇಲ್ಲ. ಆರ್‌ಸಿಬಿ ತಂಡದ ಬಿಗುವಿನ ಬೌಲಿಂಗ್ ದಾಳಿಯ ಮುಂದೆ ಎಲ್ಲಾ ಬ್ಯಾಟ್ಸ್‌ಮನ್‌ಗಳು ಕೂಡ ನಿರುತ್ತರರಾಗಿದ್ದರು.

ಆರಂಭದಲ್ಲಿ ಆಘಾತ ನೀಡಿದ ಚಾಹಲ್: ಆರ್‌ಸಿಬಿ ತಂಡದ ಅನುಭವಿ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಮುಂಬೈ ಇಂಡಿಯನ್ಸ್‌ಗೆ ಆರಂಭದಲ್ಲಿ ಆಘಾತ ನೀಡಿದರು. ಕ್ವಿಂಟನ್ ಡಿಕಾಕ್ ವಿಕೆಟ್ ಪಡೆಯುವ ಮೂಲಕ ಆರಂಭಿಕ ಜೋಡಿಯನ್ನು ಬೇರ್ಪಡಿಸಿದ್ದ ಚಾಹಲ್ ನಂತರ ಇಶಾನ್ ಕಿಶನ್‌ಗೂ ಫೆವಿಲಿಯನ್ ಹಾದಿ ತೋರಿಸಿದ್ದರು. ಈ ಮದ್ಯೆ ನಾಯಕ ರೋಹಿತ್ ಶರ್ಮಾ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಬಲಿಯಾದರು. ಸೂರ್ಯಕುಮಾರ್ ಯಾದವ್‌ಗೆ ಸಿರಾಜ್ ಔಟ್ ಮಾಡಿದರು. ಕೃನಾಲ್ ಪಾಂಡ್ಯ ಕೂಡ ಮ್ಯಾಕ್ಸ್‌ವೆಲ್‌ಗೆ ಬಲಿಯಾದರು.

ಕೊನೆ ಕ್ಷಣದಲ್ಲಿ ಪಂದ್ಯಕ್ಕೆ ತಿರುವು ಕೊಟ್ಟ ಹರ್ಷಲ್ | Oneindia Kannada

ಹ್ಯಾಟ್ರಿಕ್ ಸಾಧನೆ ಮಾಡಿದ ಹರ್ಷಲ್: 97 ರನ್‌ಗಳಿಗೆ 5 ವಿಕೆಟ್ ಕಳೆದುಕೊಮಡು ಸಂಕಷ್ಟದಲ್ಲಿತ್ತು ಮುಂಬೈ ಇಂಡಿಯನ್ಸ್. ಕ್ರೀಸ್‌ನಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಅಪಾಯಕಾರಿ ಕಿರಾನ್ ಪೊಲಾರ್ಡ್ ಇದ್ದರು. 17ನೇ ಓವರ್ ಎಸೆತಲು ಹರ್ಷಲ್ ಪಟೇಲ್‌ಗೆ ಚೆಂಡನ್ನು ನಿಡಿದ್ದರು ನಾಯಕ ವಿರಾಟ್ ಕೊಹ್ಲಿ. ಈ ಸಂದರ್ಭದಲ್ಲಿ ಮುಂಬೈ ಸ್ಕೋರ್ 106 ರನ್‌ ಆಗಿತ್ತು. 3 ರನ್‌ಗಳಿಸಿದ್ದ ಹಾರ್ದಿಕ್ ಪಾಂಡ್ಯ ವಿರಾಟ್ ಕೊಹ್ಲಿಗೆ ಕ್ಯಾಚ್ಗ ನಿಡಿ ನಿರ್ಗಮಿಸಿದ್ದರು. ಈ ಮೂಲಕ ಹರ್ಷಲ್ ತಮ್ಮ ಮೊದಲ ವಿಕೆಟ್ ಪಡೆದುಕೊಂಡಿದ್ದರು. ನಂತರ ಮುಂದಿನ ಎಸೆತದಲ್ಲಿಯೇ ಕಿರಾನ್ ಪೊಲಾರ್ಡ್ ಹರ್ಷಲ್ ಪಟೇಲ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಸತತ ಎರಡನೇ ಎಸೆತದಲ್ಲಿ ಎರಡನೇ ವಿಕೆಟ್ ಪಡೆದಿದ್ದರು ಹರ್ಷಲ್. ಹ್ಯಾಟ್ರಿಕ್ ಎಸೆತವನ್ನು ಎದುರಿಸಲು ಬ್ಯಾಟ್ ಹಿಡಿದಿದ್ದವರು ರಾಹುಲ್ ಚಾಹರ್. ಸ್ಲೋ ಯಾರ್ಕರ್ ಎಸೆದ ಹರ್ಷಲ್ ಪಟೇಲ್ ಚಾಹರ್‌ರನ್ನು ಯಾಮಾರಿಸಲು ಯಶಸ್ವಿಯಾಗಿದ್ದರು. ಈ ಮೂಲಕ ಅಮೋಘ ಹ್ಯಾಟ್ರಿಕ್ ವಿಕೆಟ್ ಪಡೆಯುವಲ್ಲಿ ಹರ್ಷಲ್ ಪಟೇಲ್ ಯಶಸ್ವಿಯಾಗಿದ್ದಾರೆ.

Story first published: Monday, September 27, 2021, 10:28 [IST]
Other articles published on Sep 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X