ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ವಿರಾಟ್ ಕೊಹ್ಲಿ ಪಡೆಗೆ ಇಂದು ರಾಜಸ್ಥಾನ್ ರಾಯಲ್ಸ್ ಸವಾಲು: ಪಿಚ್ ರಿಪೋರ್ಟ್, ಹವಾಮಾನ ವರದಿ

IPL 2021, RCB vs RR, match 43, pitch report and weather

ಐಪಿಎಲ್‌ನಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೆ ಕಣಕ್ಕಿಳಿಯಲಿದೆ., ಈ ಬಾರಿ ವಿರಾಟ್ ಕೊಹ್ಲಿ ಪಡೆಗೆ ಸವಾಲಾಗಿರುವುದು ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡ. ಒಂದೆಡೆ ವಿರಾಟ್ ಕೊಹ್ಲಿ ತಂಡ ಪ್ಲೇಆಫ್‌ಗೆ ಸ್ಥಾನ ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್ ತಾನೂ ಕೂಡ ಪ್ಲೇಆಫ್ ಸ್ಪರ್ಧೆಯಲ್ಲಿ ಮುಂದುವರಿಯಲು ಸತತ ಪ್ರಯತ್ನಗಳನ್ನು ನಡೆಸುತ್ತಿದೆ.

ಇನ್ನು ಈವರೆಗೆ ಆಡಿರುವ 10 ಪಂದ್ಯಗಳ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 12 ಅಂಕಗಳನ್ನು ಪಡೆದುಕೊಂಡಿದೆ. ಆರು ಪಂದ್ಯಗಳಲ್ಲಿ ವಿರಾಟ್ ಪಡೆ ಗೆದ್ದಿದ್ದರೆ ನಾಲ್ಕು ಸೋಲು ಕಂಡಿದೆ. ಇದರಲ್ಲಿ ಎರಡು ಪಂದ್ಯಗಳು ಯುಎಇ ಚರಣದಲ್ಲೇ ಸೋಲು ಕಂಡಿದೆ. ಆದರೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಮುಂದುವರಿದಿದೆ. ಅಂತಿಮ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ ಭರ್ಜರಿ ಗೆಲುವು ಸಾಧಿಸಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಆರ್‌ಆರ್ ವಿರುದ್ಧದ ಪಂದ್ಯವನ್ನು ಗೆದ್ದರೆ ಆರ್‌ಸಿಬಿ 14 ಅಂಕಗಳನ್ನು ಪಡೆದುಕೊಳ್ಳಲಿದೆ. ಈ ಮೂಲಕ ಆ ಪ್ಲೇಆಫ್‌ಗೆ ಮತ್ತಷ್ಟು ಹತ್ತಿರವಾಗಲಿದೆ. ಆರ್‌ಸಿಬಿ ಪ್ಲೇಆಫ್‌ ಹಂತಕ್ಕೇರಲು ಮುಂದಿನ ನಾಲ್ಕು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಗೆಲ್ಲಬೇಕಿದೆ.

ಮತ್ತೊಂದೆಡೆ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ಕೂಡ ಪ್ಲೇಆಫ್‌ಗೇರುವ ಸರ್ವ ಪ್ರಯತ್ನಗಳನ್ನು ಕೂಡ ನಡೆಸುತ್ತಿದೆ. ಆದರೆ ಮುಂದಿನ ಎಲ್ಲಾ ಪಂದ್ಯಗಳನ್ನು ಗೆದ್ದರೆ ಮಾತ್ರವೇ ಆರ್‌ಆರ್‌ಗೆ ಇದು ಸಾಧ್ಯವಾಗಲಿದೆ. ಹಾಗಾಗಿ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಗೆಲ್ಲಲು ರಾಜಸ್ಥಾನ್ ರಾಯಲ್ಸ್ ಸರ್ವ ಪ್ರಯತ್ನವನ್ನೂ ನಡೆಸಲಿದೆ. ಈಗಾಗಲೇ ಆಡಿದ 10 ಪಂದ್ಯಗಳ ಪೈಕಿ ರಾಯಲ್ಸ್ 4ರಲ್ಲಿ ಮಾತ್ರವೇ ಗೆಲುವು ಸಾಧಿಸಿದ್ದು 6ರಲ್ಲಿ ಸೋತಿದೆ. 8 ಅಂಕಗಳನ್ನು ಖಾತೆಯಲ್ಲಿ ಹೊಂದಿದ್ದು ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದಿದೆ.

ಪಿಚ್ ರಿಪೋರ್ಟ್: ರಾಜಸ್ತಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಈ ಪಂದ್ಯ ದುಬೂ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದು ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರವಾಗಿದೆ. ಆದರೆ ಎರಡನೇ ಚರಣದಲ್ಲಿ ಬೌಲರ್‌ಗಳಿಗೂ ಅನುಕೂಲಕರವಾಗಿದೆ. ವೇಗಿಗಳು ಇದರ ಅಲ್ಪ ಲಾಭವನ್ನು ಪಡೆದುಕೊಂಡರೂ ಆರ್‌ಆರ್‌ ಹಾಗೂ ಆರ್‌ಸಿಬಿ ತಂಡದ ಸ್ಪಿನ್ನರ್‌ಗಳು ಇಲ್ಲಿ ಅದ್ಭುತವಾದ ಯಶಸ್ಸು ಸಾಧಿಸಲು ಕಾತರಿಸುತ್ತಿದ್ದಾರೆ. ಈ ಅಂಗಳದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ತಂಡದ ಸರಾಸರಿ ಸ್ಕೋರ್ 155-160 ಆಗಿದೆ. ಐಪಿಎಲ್ 2021 ಆವೃತ್ತಿಯಲ್ಲಿ ಈವರೆಗೆ ಈ ಮೈದಾನದಲ್ಲಿ 5 ಪಂದ್ಯಗಳನ್ನು ಆಡಿದ್ದು ಮೊದಲಿಗೆ ಬ್ಯಾಟಿಂಗ್ ನಡೆಸಿದ ತಂಡ 2 ಬಾರಿ ಗೆದ್ದಿದ್ದರೆ ರನ್ ಬೆನ್ನಟ್ಟಿದ ತಂಡ 3 ಬಾರಿ ಗೆದ್ದಿದೆ.

ಹವಾಮಾನ ವರದಿ: ಬುಧವಾರ ಕೂಡ ದುಬೈನಲ್ಲಿ ಬಿಸಿ ವಾತಾವರಣ ಮುಂದುವರಿಯಲಿದೆ. ಗರಿಷ್ಠ ಉಷ್ಣಾಂಶ 35-37 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದ್ದು ಸಂಜೆಯ ವೇಲೆಗೆ ಇದರ ಪ್ರಮಾಣ 28-30 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಲಿದೆ. 63 ಶೇಕಡಾದಷ್ಟು ಶುಷ್ಕತೆಯಿದ್ದು ಮಳೆಯಾಗುವ ಯಾವುದೇ ಸಾಧ್ಯತೆಯಿಲ್ಲ. ಹೀಗಾಗಿ ಯಾವುದೇ ಅಡ್ಡಿಯಿಲ್ಲದೆ ಪಂದ್ಯವನ್ನು ವೀಕ್ಷಕರು ವೀಕ್ಷಿಸಬಹುದಾಗಿದೆ. ಎರಡನೇ ಇನ್ನಿಂಗ್ಸ್‌ಗೆ ಇಬ್ಬನಿ ಪರಿಣಾಮ ಬೀರುವ ಸಾಧ್ಯತೆಯಿದೆ.

ದುಬೈ ಅಂಗಳದಲ್ಲಿ ಟಿ20 ದಾಖಲೆ
ಒಟ್ಟು ಆಡಿರುವ ಪಂದ್ಯಗಳು: 96
ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆದ್ದಿರುವ ಪಂದ್ಯ: 41
ರನ್ ಬೆನ್ನಟ್ಟಿದ ತಂಡ ಗೆದ್ದ ಪಂದ್ಯಗಳು: 54

IPLನಲ್ಲಿ ಉತ್ತಮ ಆಟವಾಡಿ T20 ವಲ್ಡ್ ಕಪ್ ಗೆ ಸ್ಥಾನ ಗಿಟ್ಟಿಸಿಕೊಂಡ ಮೂರು ಆಟಗಾರರು | Oneindia Kannada

ಈ ಮೈದಾನದಲ್ಲಿ 1ನೇ ಇನ್ನಿಂಗ್ಸ್‌ನ ಹೈಯೆಸ್ಟ್ ಸ್ಕೋರ್: 219/2
ಮೊದಲ ಇನಿಂಗ್ಸ್‌ನ ಕನಿಷ್ಠ ಸ್ಕೋರ್: 59
ಅತ್ಯಂತ ಯಶಸ್ವಿ ರನ್ ಚೇಸ್: 203/8
ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್: 155

Story first published: Wednesday, September 29, 2021, 10:26 [IST]
Other articles published on Sep 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X