ಆರ್‌ಸಿಬಿ vs ಆರ್‌ಆರ್ ಪಂದ್ಯದಲ್ಲಿ ಆಗಲಿರುವ ಕುತೂಹಲಕಾರಿ ದಾಖಲೆಗಳಿವು!

ದುಬೈ: ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಬುಧವಾರ (ಸೆಪ್ಟೆಂಬರ್ 29) ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಕಾದಾಡಲಿವೆ. ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಆರ್‌ಸಿಬಿ ಮತ್ತು ಏಳನೇ ಸ್ಥಾನದಲ್ಲಿರುವ ಆರ್‌ಆರ್ ನಡುವಿನ ಕದನ ಕುತೂಹಲ ಮೂಡಿಸಿದೆ. ಬೆಂಗಳೂರು ಮತ್ತು ರಾಜಸ್ಥಾನ್ ಎರಡಕ್ಕೂ ಇನ್ನು ಲೀಗ್‌ ಹಂತದಲ್ಲಿ ನಾಲ್ಕು ಪಂದ್ಯಗಳಿವೆ. ಎರಡೂ ತಂಡಗಳು ತಲಾ 10 ಪಂದ್ಯಗಳನ್ನು ಆಡಿವೆ.

ಪಂಜಾಬ್ ಕಿಂಗ್ಸ್ ವಿರುದ್ಧ ಕ್ರೀಡಾಸ್ಫೂರ್ತಿ ಮೆರೆದ ಕೃನಾಲ್ ಪಾಂಡ್ಯ: ವಿಡಿಯೋಪಂಜಾಬ್ ಕಿಂಗ್ಸ್ ವಿರುದ್ಧ ಕ್ರೀಡಾಸ್ಫೂರ್ತಿ ಮೆರೆದ ಕೃನಾಲ್ ಪಾಂಡ್ಯ: ವಿಡಿಯೋ

ಆಡಿರುವ 10 ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 6 ಪಂದ್ಯಗಳನ್ನು ಗೆದ್ದು 12 ಪಾಯಿಂಟ್ಸ್‌, -0.359 ನೆಟ್‌ರನ್‌ ರೇಟ್‌ನೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದೆ. 10ರಲ್ಲಿ 4 ಪಂದ್ಯಗಳನ್ನು ಗೆದ್ದಿರುವ ರಾಜಸ್ಥಾನ್ ರಾಯಲ್ಸ್ 8 ಅಂಕ, -0.369 ರೇಟಿಂಗ್‌ ಪಾಯಿಂಟ್ಸ್‌ನೊಂದಿಗೆ 7ನೇ ಸ್ಥಾನದಲ್ಲಿದೆ.

ಐಪಿಎಲ್ 2021: ಮೊದಲ ವಾರದ ಅತ್ಯುತ್ತಮ ತಂಡ ಪ್ರಕಟ; ಅತ್ಯುತ್ತಮ ನಾಯಕ ಧೋನಿಯಲ್ಲ!ಐಪಿಎಲ್ 2021: ಮೊದಲ ವಾರದ ಅತ್ಯುತ್ತಮ ತಂಡ ಪ್ರಕಟ; ಅತ್ಯುತ್ತಮ ನಾಯಕ ಧೋನಿಯಲ್ಲ!

ರಾಜಸ್ಥಾನ್ ಮತ್ತು ರಾಯಲ್ ಚಾಲೆಂಜರ್ಸ್ ಮುಖಾಮುಖಿಯ ವೇಳೆ ಕಲವು ಪ್ರಮುಖ ದಾಖಲೆಗಳಾಗಲಿವೆ. ಆರ್‌ಸಿಬಿ vs ಆರ್ಆರ್ ಪಂದ್ಯದ ವೇಳೆ ಆಗಲಿರುವ ದಾಖಲೆಗಳು, ಕುತೂಹಲಕಾರಿ ಅಂಕಿ ಅಂಶಗಳ ಇಣುಕುನೋಟ ಇಲ್ಲಿದೆ.

ಸಂಜು ಸ್ಯಾಮ್ಸನ್, ಗ್ಲೆನ್ ಮ್ಯಾಕ್ಸ್‌ವೆಲ್

ಸಂಜು ಸ್ಯಾಮ್ಸನ್, ಗ್ಲೆನ್ ಮ್ಯಾಕ್ಸ್‌ವೆಲ್

* ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ 2021ರ ಇಂಡಿಯನ್ ಪ್ರೀಮಿಯರ್ ಲೀಗ್‌ ನಲ್ಲಿ ಅತ್ಯಧಿಕ ರನ್ ಸರದಾರನಾಗಿ ಪರ್ಪಲ್ ಕ್ಯಾಪ್ ಧರಿಸುವುದರಲ್ಲಿದ್ದಾರೆ. ಇನ್ನು 21 ರನ್‌ಗಳನ್ನು ಬಾರಿಸಿದರೆ ಈ ಸೀಸನ್‌ನಲ್ಲಿ ಅತೀ ಹೆಚ್ಚು ರನ್ ಬಾರಿಸಿದವರ ರೇಸ್‌ನಲ್ಲಿ ಸ್ಯಾಮ್ಸನ್ ಮುಂಚೂಣಿ ಓಟಗಾರನಾಗಲಿದ್ದಾರೆ. ಸ್ಯಾಮ್ಸನ್ ಈಗ 10 ಪಂದ್ಯಗಳಲ್ಲಿ 433 ರನ್ ಗಳಿಸಿದ್ದಾರೆ.

* ಐಪಿಎಲ್ ಸೀಸನ್ ಒಂದರಲ್ಲಿ ಅತೀ ಹೆಚ್ಚು ರನ್ ಗಳಿಸಿದ ದಾಖಲೆಗಾಗಿ ಸಂಜು ಸ್ಯಾಮ್ಸನ್ ತನ್ನ ದಾಖಲೆಯನ್ನು ತಾನೇ ಮೀರಿಸಲಿದ್ದಾರೆ. ಇನ್ನು 9 ರನ್ ಬಾರಿಸಿದರೆ ಸ್ಯಾಮ್ಸನ್ ಐಪಿಎಲ್ ಸೀಸನ್‌ನಲ್ಲಿ ತನ್ನ ಅತ್ಯಧಿಕ ರನ್ ದಾಖಲೆ ನಿರ್ಮಿಸಲಿದ್ದಾರೆ.

* ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟ್ಸ್‌ಮನ್‌ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ದಾಖಲೆ ಸನಿಹದಲ್ಲಿದ್ದಾರೆ. ಇನ್ನು 18 ರನ್ ಬಾರಿಸಿದರೆ ಮ್ಯಾಕ್ಸ್‌ವೆಲ್ ಟಿ20 ಕ್ರಿಕೆಟ್‌ ಮಾದರಿಯಲ್ಲಿ 7000 ರನ್ ದಾಖಲೆ ನಿರ್ಮಿಸಲಿದ್ದಾರೆ.

ಸ್ಯಾಮ್ಸನ್, ಡೇವಿಡ್ ಮಿಲ್ಲರ್, ಶ್ರೇಯಸ್ ಗೋಪಾಲ್

ಸ್ಯಾಮ್ಸನ್, ಡೇವಿಡ್ ಮಿಲ್ಲರ್, ಶ್ರೇಯಸ್ ಗೋಪಾಲ್

* ಸಂಜು ಸ್ಯಾಮ್ಸನ್ vs ಯುಜುವೇಂದ್ರ ಚಾಹಲ್: ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅವರು ಆರ್‌ಆರ್ ನಾಯಕ ಸಂಜು ಸ್ಯಾಮ್ಸನ್ ಅವರನ್ನು 5 ಬಾರಿ ಔಟ್ ಮಾಡಿದ್ದಾರೆ. ಈ ಬಾರಿ ಮತ್ತೆ ಸ್ಯಾಮ್ಸನ್ ಚಾಹಲ್ ಓವರ್‌ನಲ್ಲಿ ಔಟ್ ಆದರೆ ಸ್ಯಾಮ್ಸನ್ ಹೆಸರಿನಲ್ಲಿ ಕೆಟ್ಟ ದಾಖಲೆ ಮುಂದುವರೆಯಲಿದೆ.

* ರಾಜಸ್ಥಾನ್ ರಾಯಲ್ಸ್‌ನ ಡೇವಿಡ್ ಮಿಲ್ಲರ್ ದಾಖಲೆ ಸನಿಹದಲ್ಲಿದ್ದಾರೆ. ಮಿಲ್ಲರ್ ಇನ್ನು 41 ರನ್ ಬಾರಿಸಿದರೆ, ಐಪಿಎಲ್‌ನಲ್ಲಿ 2000 ರನ್ ಮೈಲಿಗಲ್ಲು ಸ್ಥಾಪಿಸಿದಂತಾಗುತ್ತದೆ.

* ರಾಜಸ್ಥಾನ್ ರಾಯಲ್ಸ್‌ನ ಆಟಗಾರ ಶ್ರೇಯಸ್ ಗೋಪಾಲ್ ದ್ವಿತೀಯ ಹಂತದ ಪಂದ್ಯಗಳಲ್ಲಿ ಆಡಿಲ್ಲ. ಆದರೆ ಬುಧವಾರದ ಪಂದ್ಯದಲ್ಲಿ ಆಡಿದರೆ ಗೋಪಾಲ್ ದಾಖಲೆ ನಿರ್ಮಿಸಲು ಅವಕಾಶವಿದೆ. ಗೋಪಾಲ್ ಇನ್ನು 2 ವಿಕೆಟ್‌ ಪಡೆದರೆ ಐಪಿಎಲ್ 50 ವಿಕೆಟ್‌ಗಳ ಪಟ್ಟಿ ಸೇರಲಿದ್ದಾರೆ.

ಮಾಡು ಇಲ್ಲವೇ ಮಡಿ ಪಂದ್ಯ ಇದು | Oneindia Kannada
ಮೊಹಮ್ಮದ್ ಸಿರಾಜ್, ಎಬಿ ಡಿ ವಿಲಿಯರ್ಸ್

ಮೊಹಮ್ಮದ್ ಸಿರಾಜ್, ಎಬಿ ಡಿ ವಿಲಿಯರ್ಸ್

* ರಾಯಲ್ ಚಾಲೆಂಜರ್ಸ್ ತಂಡದ ವೇಗಿ ಮೊಹಮ್ಮದ್ ಸಿರಾಜ್ ಕೂಡ ಈ ಐಪಿಎಲ್‌ನಲ್ಲಿ ದಾಖಲೆ ಬರೆಯಲಿದ್ದಾರೆ. ಆದರೆ ಬುಧವಾರದ ಪಂದ್ಯದಲ್ಲಿ ಸಿರಾಜ್‌ ಈ ದಾಖಲೆ ನಿರ್ಮಿಸಲು ಕಷ್ಟವಿದೆ. ಇನ್ನು 4 ವಿಕೆಟ್‌ ಲಭಿಸಿದರೆ ಸಿರಾಜ್ ಐಪಿಎಲ್‌ನಲ್ಲಿ 50 ವಿಕೆಟ್‌ಗಳ ದಾಖಲೆ ಬರೆದಂತಾಗುತ್ತದೆ.

* ಆರ್‌ಸಿಬಿಯ ಸ್ಫೋಟಕ ಬ್ಯಾಟ್ಸ್‌ಮನ್, ಮಿಸ್ಟರ್ 360 ಡಿಗ್ರೀ ಖ್ಯಾತಿಯ ಎಬಿ ಡಿ ವಿಲಿಯರ್ಸ್ ಐಪಿಎಲ್‌ನಲ್ಲಿ 250 ಸಿಕ್ಸರ್‌ಗಳ ದಾಖಲೆ ಬರೆಯಲಿದ್ದಾರೆ. ಇನ್ನು 3 ಸಿಕ್ಸರ್ ಬಾರಿಸಿದರೆ ಎಬಿಡಿ ಈ ದಾಖಲೆ ಪಟ್ಟಿ ಸೇರಿಕೊಳ್ಳಲಿದ್ದಾರೆ. ಐಪಿಎಲ್‌ನಲ್ಲಿ 250 ಸಿಕ್ಸರ್ ಬಾರಿಸಿದ ಮೊದಲ ಬ್ಯಾಟ್ಸ್‌ಮನ್‌ ದಾಖಲೆ ಈಗ ಪಂಜಾಬ್ ಕಿಂಗ್ಸ್ ತಂಡದಲ್ಲಿರುವ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಆ ದಾಖಲೆ ನಿರ್ಮಿಸಿದ ಎರಡನೇ ಬ್ಯಾಟ್ಸ್‌ಮನ್‌ ಆಗಿ ಎಬಿಡಿ ಗುರುತಿಸಿಕೊಳ್ಳಲಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Wednesday, September 29, 2021, 13:39 [IST]
Other articles published on Sep 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X