ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಫ್ರಾಂಚೈಸಿಗಳು ಹರಾಜಿಗೆ ಬಿಡುಗಡೆಗೊಳಿಸಬಹುದಾದ ಸ್ಟಾರ್ ಆಟಗಾರರು

IPL 2021: retention day, big players who could released

ಐಪಿಎಲ್‌ನ ಹರಾಜಿಗೆ ಸಂಬಂಧಿಸಿದ ಪ್ರಕ್ರಿಯೆಗಳು ಈಗಾಗಲೇ ಆರಂಭವಾಗಿದ್ದು ಬುಧವಾರ ಅಂದರೆ ಜನವರಿ 20ರ ಸಂಜೆಯ ಒಳಗೆ ಫ್ರಾಂಚೈಸಿಗಳು ತಂಡದಲ್ಲಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಬೇಕಿದೆ. ಹೀಗಾಗಿ ಫೆಬ್ರವರಿ 11ರಂದು ನಡೆಯುವ ಐಪಿಎಲ್ ಮಿನಿ ಹರಾಜಿನಲ್ಲಿ ಯಾರೆಲ್ಲಾ ಆಟಗಾರರು ಇರಬಹುದು ಎಂಬುದು ಕುತೂಹಲ ಮೂಡಿಸಿದೆ.

ಈ ಬಾರಿಯ ಮಿನಿ ಹರಾಜಿನಲ್ಲಿ ಕೆಲ ಪ್ರಮುಖ ಆಟಗಾರರನ್ನು ಆಯಾಯ ಫ್ರಾಂಚೈಸಿಗಳು ಬಿಡುಗಡೆಗೊಳಿಸುವ ಸಂಭವವಿದೆ. ಕಳೆದ ಬಾರಿಯ ಐಪಿಎಲ್ ಪ್ರದರ್ಶನ ಸೇರಿದಂತೆ ನಾನಾ ಕಾರಣಗಳಿಂದಾಗಿ ತಂಡಗಳಿಂದ ಹೊರಬೀಳಬಹುದಾದ ಸಾಧ್ಯತೆಯಿದೆ. ಹಾಗಾದರೆ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಳ್ಳಬಹುದಾದ ಕೆಲ ಪ್ರಮುಖ ಆಟಗಾರರು ಯಾರು? ಆ ಪಟ್ಟಿ ಪಟ್ಟಿ ಇಲ್ಲಿದೆ ಮುಂದೆ ಓದಿ..

ಭಾರತ vs ಆಸ್ಟ್ರೇಲಿಯಾ: ಗೆದ್ದಿದ್ದು ಭಾರತ, ಸದ್ದು ಮಾಡಿದ್ದು ಆರ್‌ಸಿಬಿ!ಭಾರತ vs ಆಸ್ಟ್ರೇಲಿಯಾ: ಗೆದ್ದಿದ್ದು ಭಾರತ, ಸದ್ದು ಮಾಡಿದ್ದು ಆರ್‌ಸಿಬಿ!

ಸುರೇಶ್ ರೈನಾ

ಸುರೇಶ್ ರೈನಾ

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉಪನಾಯಕನಾಗಿದ್ದ ಸುರೇಶ್ ರೈನಾ ಕಳೆದ ಐಪಿಎಲ್ ಆವೃತ್ತಿ ಆರಂಭಕ್ಕೆ ಕೆಲವೇ ದಿನಗಳ ಮುಂಚೆ ಅನಿರೀಕ್ಷಿತ ರೀತಿಯಲ್ಲಿ ತಂಡದಿಂದ ಹೊರನಡೆದರು. ಕೌಟುಂಬಿಕ ಕಾರಣಗಳನ್ನು ನೀಡಿದರಾದರೂ ಕೆಲ ಘಟನೆಗಳು ರೈನಾ ಹಾಗೂ ಫ್ರಾಂಚೈಸಿ ಮಧ್ಯೆ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಬೊಟ್ಟು ಮಾಡುವಂತಿತ್ತು. ಹೀಗಾಗಿ ಈ ಬಾರಿಯ ಹರಾಜಿನಲ್ಲಿ ಸುರೇಶ್ ರೈನಾ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.

ಕೇದಾರ್ ಜಾಧವ್

ಕೇದಾರ್ ಜಾಧವ್

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅನುಭವಿ ಆಲ್‌ರೌಮಡರ್ ಕೇದಾರ್ ಜಾಧವ್ ಈ ಬಾರಿ ಸಿಎಸ್‌ಕೆ ಪಾಳಯದಿಂದ ಹೊರಬೀಳುವುದು ಪಕ್ಕಾ. ಕಳೆದ ಆವೃತ್ತಿಯಲ್ಲಿ ಜಾಧವ್ ತೋರಿದ ಕಳಪೆ ಪ್ರದರ್ಶನ ತಂಡದ ಹಿನ್ನಡೆಗೆ ಕಾರಣಗಳಲ್ಲಿ ಒಂದಾಗಿತ್ತು. ಸದ್ಯ ನಡೆಯುತ್ತಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲೂ ಜಾಧವ್ ಪ್ರದರ್ಶನ ಗಮನಾರ್ಹವಾಗಿಲ್ಲ. ಹೀಗಾಗಿ ಪ್ರಮುಖ ಬದಲಾವಣೆ ಬಯಸಿರುವ ಸಿಎಸ್‌ಕೆ ಜಾಧವ್ ಅವರನ್ನು ಕೈಬಿಡುವುದು ಬಹುತೇಕ ನಿಶ್ಚಿತ.

ಸ್ಟೀವ್ ಸ್ಮಿತ್

ಸ್ಟೀವ್ ಸ್ಮಿತ್

ರಾಜಸ್ಥಾನ್ ರಾಯಲ್ಸ್ ತಂಡ ಈ ಬಾರಿಯ ಐಪಿಎಲ್ ಆವೃತ್ತಿಗೂ ಮುನ್ನ ಸ್ಟೀವ್ ಸ್ಮಿತ್ ಅವರನ್ನು ಕೈಬಿಡುವ ಮೂಲಕ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. 12.5 ಕೋಟಿಗೆ ಹರಾಜಾಗಿದ್ದ ಸ್ಟೀವ್ ಸ್ಮಿತ್ ಕಳೆದ ಆವೃತ್ತಿಯಲ್ಲಿ ರಾಜಸ್ಥಾನ್ ತಂಡವನ್ನು ಮುನ್ನಡೆಸಿದ್ದರಾದರೂ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಮೇಲೇಳಿಸಲು ಸಾಧ್ಯವಾಗಿರಲಿಲ್ಲ. ಆಡಿದ 14 ಪಂದ್ಯಗಳಲ್ಲಿ 3 ಅರ್ಧ ಶತಕಗಳ ಸಹಿತ 311 ರನ್ ಬಾರಿಸಿದ್ದರು.

ಗ್ಲೆನ್ ಮ್ಯಾಕ್ಸ್‌ವೆಲ್

ಗ್ಲೆನ್ ಮ್ಯಾಕ್ಸ್‌ವೆಲ್

ಕಿಂಗ್ಸ್ ಇಲೆವೆನ್ ಪಂಜಾಬ್ ಫ್ರಾಂಚೈಸಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಉಳಿಸಿಕೊಳ್ಳಬೇಕೋ ಅಥವಾ ಬಿಡುಗಡೆಗೊಡಿಸಬೇಕೋ ಎಂಬ ಬಗ್ಗೆ ಸಾಕಷ್ಟು ಗೊಂದಲದಲ್ಲಿದೆ. 10.75 ಕೋಟಿಗೆ ಪಂಜಾಬ್ ಪಾಲಾಗಿದ್ದ ಮ್ಯಾಕ್ಸ್‌ವೆಲ್ ಕಳೆದ ಆವೃತ್ತಿಯಲ್ಲಿ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಆದರೆ ಅದಾದ ಬಳಿಕ ಭಾರತದ ವಿರುದ್ಧ ನಡೆದ ಸೀಮಿತ ಓವರ್‌ಗಳ ಸರಣಿಯ ಶ್ರೇಷ್ಠ ಪ್ರದರ್ಶನ ನಿಡಿ ಮಿಂಚಿದ್ದರು. ಹೀಗಾಗಿ ಮ್ಯಾಕ್ಸ್‌ವೆಕ್ ಬಗ್ಗೆ ಪಂಜಾಬ್ ಯಾವ ನಿಲುವು ತೆಗೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ಕ್ರಿಸ್ ಮೋರಿಸ್

ಕ್ರಿಸ್ ಮೋರಿಸ್

ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾದ ಅನುಭವಿ ಆಲ್‌ರೌಂಡರ್ ಕ್ರಿಸ್ ಮೋರಿಸ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕೋ ಬೇಡವೋ ಎಂಬ ಬಗ್ಗೆ ನಿರ್ಧಾರವನ್ನು ತೆಗದುಕೊಳ್ಳಲಿದ್ದಾರೆ. ಕಳೆದ ಆವೃತ್ತಿಯ 9 ಪಂದ್ಯಗಳಲ್ಲಿ ಮಾರಿಸ್ 34 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. 19.09ರ ಸರಾಸರಿಯಲ್ಲಿ 11 ವಿಕೆಟ್ ಪಡೆದುಕೊಂಡಿದ್ದರು. ಆದರೆ ಮಾರಿಸ್ ಅವರಿಗಾಗಿ ಆರ್‌ಸಿಬಿ 10 ಕೋಟಿಯಷ್ಟು ಹಣವನ್ನು ವ್ಯಯಿಸಿದ್ದು ಈ ಬಾರಿಯ ಆವೃತ್ತಿಗೆ ಅವರನ್ನು ಉಳಸಿಕೊಳ್ಳುವ ಬಗ್ಗೆ ಅನುಮಾನ ಮೂಡಿಸಿದೆ.

Story first published: Wednesday, January 20, 2021, 16:29 [IST]
Other articles published on Jan 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X