ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವದಿಂದ ರಿಷಭ್ ಪಂತ್ ಲಾಭ ಪಡೆದುಕೊಳ್ಳಲಿದ್ದಾರೆ: ರಿಕಿ ಪಾಂಟಿಂಗ್

IPL 2021: Rishabh Pant will benefit from captaincy of Delhi Capitals says Ricky Ponting

ಶ್ರೇಯಸ್ ಐಯ್ಯರ್ ಈ ಬಾರಿಯ ಐಪಿಎಲ್ ಲೀಗ್‌ಗೆ ಅಲಭ್ಯ ಎಂಬುದು ಖಚಿತವಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಈ ಬಾರಿ ಮುನ್ನಡೆಸುವವರು ಯಾರು ಎಂಬ ಪ್ರಶ್ನೆಗೆ ಉತ್ತರ ದೊರೆತಿದೆ. ಯುವ ಆಟಗಾರ ರಿಷಭ್ ಪಂತ್ ಹೆಗಲಿಗೆ ನಾಯಕತ್ವದ ಹೊಣೆ ಲಭಿಸಿದೆ. ಈ ಜವಾಬ್ಧಾರಿಯಿಂದ ರಿಷಭ್ ಪಂತ್‌ ಪ್ರದರ್ಶನದಲ್ಲಿ ಮತ್ತಷ್ಟು ಸಕಾರಾತ್ಮಕ ಬದಲಾವಣೆಯಾಗಲಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಮಡದ ಕೋಚ್ ರಿಕಿ ಪಾಂಟಿಂಗ್ ಹೇಳಿದ್ದಾರೆ.

"ದುರದೃಷ್ಟವಶಾತ್ ಶ್ರೇಯಸ್ ಐಯ್ಯರ್ ಈ ಬಾರಿಯ ಐಪಿಎಲ್ ಆವೃತ್ತಿಯಿಂದ ಹೊರಗುಳಿಯಬೇಕಿದೆ. ಆದರೆ ಈ ಅವಕಾಶವನ್ನು ರಿಷಭ್ ಪಂತ್ ಬಾಚಿಕೊಳ್ಳುವುದನ್ನು ನೋಡಲು ಎದುರುನೋಡುತ್ತಿದ್ದೇನೆ. ಆತನ ಇತ್ತೀಚಿನ ಪ್ರದರ್ಶನದಿಂದಾಗ ಈ ಸ್ಥಾನಕ್ಕೆ ಆತ ಅರ್ಹನಾಗಿದ್ದಾನೆ. ಆರ ಈಗ ಸಾಕಷ್ಟು ಆತ್ಮವಿಶ್ವಾಸದೊಂದಿಗೆ ಬಂದಿದ್ದಾನೆ. ನಾಯಕತ್ವ ಆತನನ್ನು ಮತ್ತಷ್ಟು ಉತ್ತಮ ಕ್ರಿಕೆಟಿಗನನ್ನಾಗಿ ಮಾಡುತ್ತದೆ ಎಂಬ ಭರವಸೆ ನನ್ನಲ್ಲಿದೆ" ಎಂದು ಪಾಂಟಿಂಗ್ ವಿಶ್ವಾಸದ ಮಾತುಗಳನ್ನು ಆಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ವಹಿಸಿಕೊಳ್ಳುತ್ತಲೇ ಪಂತ್ ಹೆಸರಿಗೆ ದಾಖಲೆಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ವಹಿಸಿಕೊಳ್ಳುತ್ತಲೇ ಪಂತ್ ಹೆಸರಿಗೆ ದಾಖಲೆ

ಡೆಲ್ಲಿ ನತಂಡದ ನಾಯಕನಾಗಿದ್ದ ಶ್ರೇಯಸ್ ಐಯ್ಯರ್ ಇತ್ತೀಚೆಗೆ ಮುಕ್ತಾಯವಾದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭುಜದ ನೋವಿಗೆ ತುತ್ತಾಗಿ ಐಪಿಎಲ್‌ನಿಂದ ಹೊರಬಿದ್ದರು. ಹೀಗಾಗಿ ಶ್ರೇಯಸ್ ಐಯ್ಯರ್ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ.

"ಕಳೆದ ಎರಡು ಆವೃತ್ತಿಯಲ್ಲಿ ಶ್ರೇಯಸ್ ಐಯ್ಯರ್ ನೇತೃತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರದರ್ಶನ ಅತ್ಯುತ್ತಮವಾಗಿತ್ತು. ಫಲಿತಾಂಶವೇ ಇದನ್ನು ಹೇಳುತ್ತದೆ. ಈಗ ಈ ಅವಕಾಶ ಆಸ್ಟ್ರೇಲಿಯಾ ಸರಣಿ ಹಾಘೂ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅದ್ಣುತವಾದ ಪ್ರದರ್ಶನವನ್ನು ನೀಡಿದ ಯುವ ಆಟಗಾರ ರಿಷಭ್ ಒಂತ್‌ಗೆ ದೊರೆತಿದೆ" ಎಂದು ಪಾಂಟಿಂಗ್ ವಿಶ್ವಾಸದ ಮಾತುಗಳನ್ನು ಆಡಿದ್ದಾರೆ.

ರೋಹಿತ್, ಕೊಹ್ಲಿಯನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ರಿಷಭ್ ಪಂತ್!ರೋಹಿತ್, ಕೊಹ್ಲಿಯನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ರಿಷಭ್ ಪಂತ್!

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವಕ್ಕೆ ಅನುಭವಿಗಳಾದ ಅಜಿಂಕ್ಯ ರಹಾನೆ, ಆರ್ ಅಶ್ವಿನ್ ಕೂಡ ಸಾಕಷ್ಟು ಪೈಪೋಟಿಯನ್ನು ನೀಡಿದ್ದಾರೆ. ನಾಯಕತ್ವ ಹಾಗೂ ಪಂದ್ಯಗಳ ಅನುಭವದಲ್ಲಿ ಈ ಇಬ್ಬರು ಕೂಡ ಅತ್ಯಂತ ಸಮರ್ಥರೇ ಆಗಿದ್ದಾರೆ. ಆದರೆ ಡೆಲ್ಲಿ ಫ್ರಾಂಚೈಸಿ ಮಾತ್ರ ಯುವ ಆಟಗಾರನ್ನು ನಾಯಕನ್ನಾಗಿ ನೇಮಿಸಲು ಒಲವು ವ್ಯಕ್ತಪಡಿಸಿದೆ

Story first published: Wednesday, March 31, 2021, 12:53 [IST]
Other articles published on Mar 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X