ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈತನಲ್ಲಿ ಧೋನಿಯ ಹೋಲಿಕೆಯಿದೆ ಎಂದು ಉತ್ತಪ್ಪ ಹೇಳಿದ ಯುವ ಆಟಗಾರ ಯಾರು ಗೊತ್ತಾ!

IPL 2021: Robin Uthappa praises CSK youngster said He is much Like Dhoni

ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಕೆಲ ಆಟಗಾರರು ನೀಡುತ್ತಿರುವ ಅಮೋಘ ಪ್ರದರ್ಶನ ತಂಡವನ್ನು ಈ ಬಾರಿಯ ಟೂರ್ನಿಯಲ್ಲಿ ನಂಬರ್ ತಂಡವನ್ನಾಗಿಸಲು ಕಾರಣವಾಗಿದೆ. ಆದರೆ ಈ ಬಾರಿಯ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿದ್ದರೂ ಅನುಭವಿ ಆಟಗಾರ ರಾಬಿನ್ ಉತ್ತಪ್ಪ ಮಾತ್ರ ಆಡುವ ಅವಕಾಶವನ್ನು ಗಿಟ್ಟಿಸಿಕೊಂಡಿಲ್ಲ. ಆದರೆ ಮುಂಬರುವ ಪಂದ್ಯಗಳಲ್ಲಿ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸವನ್ನಿಟ್ಟುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ರಾಬಿನ್ ಉತ್ತಪ್ಪ ಪ್ರತಿಕ್ರಿಯೆ ನೀಡಿದ್ದಿ ತಂಡದ ಓರ್ವ ಯುವ ಆಟಗಾರನ ಬಗ್ಗೆ ಭಾರೀ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಮಾತ್ರವಲ್ಲದೆ ಈತನಲ್ಲಿ ತಂಡದ ನಾಯಕ ಧೋನಿಯ ಹೋಲಿಕೆಯಿದೆ ಎಂದು ಕೂಡ ಉತ್ತಪ್ಪ ಹೇಳಿದ್ದಾರೆ.

ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿದ್ದು ಹೇಗೆ: ಮೊದಲ ಬಾರಿಗೆ ಬಹಿರಂಗವಾಗಿ ಶ್ರೀಶಾಂತ್ ಹೇಳಿಕೆಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿದ್ದು ಹೇಗೆ: ಮೊದಲ ಬಾರಿಗೆ ಬಹಿರಂಗವಾಗಿ ಶ್ರೀಶಾಂತ್ ಹೇಳಿಕೆ

ರಾಬಿನ್ ಉತ್ತಪ್ಪ ಹೀಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದು ಬೇರೆ ಯಾರ ಬಗ್ಗೆಯೂ ಅಲ್ಲ. ಯುವ ಆಟಗಾರ ಋತುರಾಜ್ ಗಾಯಕ್ವಾಡ್ ಬಗ್ಗೆ. ಈ ಬಾರಿಯ ಆವೃತ್ತಿಯಲ್ಲಿ ಅಮೋಘ ಫಾರ್ಮ್‌ನಲ್ಲಿರುವ ಗಾಯಕ್ವಾಡ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ರಾಬಿನ್ ಉತ್ತಪ್ಪ ಮಾತನಾಡಿದ್ದು ಧೋನಿ ರೀತಿಯಲ್ಲೇ ಗಾಯಕ್ವಾಡ್ ಕೂಡ ಸಾಕಷ್ಟು ಶಾಂತ ಚಿತ್ತದ ಆಟಗಾರ ಎಂದಿದ್ದಾರೆ.

ಸನ್‌ರೈಸರ್ಸ್ ಜರ್ಸಿಯಲ್ಲಿ ವಾರ್ನರ್ ಇನ್ನು ಕಣಕ್ಕಿಳಿಯೋದು ಅನುಮಾನ: ಕೋಚ್ ನೀಡಿದ್ರು ಸುಳಿವುಸನ್‌ರೈಸರ್ಸ್ ಜರ್ಸಿಯಲ್ಲಿ ವಾರ್ನರ್ ಇನ್ನು ಕಣಕ್ಕಿಳಿಯೋದು ಅನುಮಾನ: ಕೋಚ್ ನೀಡಿದ್ರು ಸುಳಿವು

"ಋಥು ವ್ಯಕ್ತಪಡಿಸುತ್ತಿರುವ ವ್ಯಕ್ತಿತ್ವ ನಿಜಕ್ಕೂ ನಂಬಲಸಾಧ್ಯವಾಗಿದೆ. ಆತನೋರ್ವ ಅದ್ಭುತ ಪ್ರತಿಭೆಯನ್ನು ಹೊಂದಿರುವ ಆಟಗಾರ. ಆವನಂತಾ ಯುವ ಆಟಗಾರನನ್ನು ಹೊಂದಿರುವುದಕ್ಕೆ ನಾವು ಸಿಎಸ್‌ಕೆ ತಂಡ ನಿಜಕ್ಕೂ ಅದೃಷ್ಠಶಾಲಿಗಳು. ಆತನಲ್ಲಿರುವ ಗುಣಗಳು ಕೂಡ ಮಾಹಿಗೆ ತುಂಬಾ ಹೋಲಿಕೆಯಾಗುತ್ತದೆ" ಎಂದು ರಾಬಿನ್ ಉತ್ತಪ್ಪ ಋತುರಾಜ್ ಗಾಯಕ್ವಾಡ್ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ.

ಇನ್ಜಮಾಮ್ ಉಲ್ ಹಕ್‌ಗೆ ಲಘು ಹೃದಯಾಘಾತ, ಆಸ್ಪತ್ರೆಯಲ್ಲಿ ಚೇತರಿಕೆಇನ್ಜಮಾಮ್ ಉಲ್ ಹಕ್‌ಗೆ ಲಘು ಹೃದಯಾಘಾತ, ಆಸ್ಪತ್ರೆಯಲ್ಲಿ ಚೇತರಿಕೆ

ಋತುರಾಜ್ ಗಾಯಕ್ವಾಡ್ ಈ ಬಾರಿಯ ಆವೃತ್ತಿಯ ಆರಂಭದಿಂದಲೂ ಅದ್ಭುತವಾದ ಪ್ರದರ್ಶನ ನಿಡಿಕೊಮಡು ಬಂದಿದ್ದಾರೆ. ಈ ಪ್ರದರ್ಶನವನ್ನು ಎರಡನೇ ಚರಣದಲ್ಲಿಯೂ ಮುಂದುವರಿಸಿಕೊಂಡು ಬಂದಿರುವುದು ಸಿಎಸ್‌ಕೆ ಪಾಲಿಗೆ ಬಲ ಹೆಚ್ಚಿಸಿದೆ. ಅದರಲ್ಲೂ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸಿಎಸ್‌ಕೆ 25 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗಲೂ ಎದೆಗುಂದದೆ ನೀಡಿದ ಅಮೋಘ ಪ್ರದರ್ಶನದಿಂದಾಗಿ ತಂಡ ಗೆಲ್ಲುವುದಕ್ಕೆ ಸಾಧ್ಯವಾಗಿತ್ತು.

ಐಪಿಎಲ್‌ನಲ್ಲಿ ಇಂದು ಡಬಲ್ ಹೆಡ್ಡರ್: ಕೊಲ್ಕತ್ತಾಗೆ ಡೆಲ್ಲಿ ಸವಾಲು, ಮುಂಬೈ ವಿರುದ್ಧ ಪಂಜಾಬ್ ಸೆಣೆಸಾಟಐಪಿಎಲ್‌ನಲ್ಲಿ ಇಂದು ಡಬಲ್ ಹೆಡ್ಡರ್: ಕೊಲ್ಕತ್ತಾಗೆ ಡೆಲ್ಲಿ ಸವಾಲು, ಮುಂಬೈ ವಿರುದ್ಧ ಪಂಜಾಬ್ ಸೆಣೆಸಾಟ

ಯುಎಇನಲ್ಲಿ ನಡೆಯುತ್ತಿರುವ ಎರಡನೇ ಚರಣದಲ್ಲಿ ಪಂದ್ಯಗಳಲ್ಲಿ ಋತುರಾಜ್ ಗಾಯಕ್ವಾಡ್ ಪ್ರತಿಬಾರಿಯೂ ಮಿಂಚುವಲ್ಲಿ ಯಶಸ್ವಿಯಾಗಿದ್ದಾರೆ. ಯುಎಇನಲ್ಲಿ ಈವರೆಗೆ ಆಡಿದ ಮೂರು ಪಂದ್ಯಗಳಲ್ಲಿ ಋತುರಾಜ್ 88, 38, 40 ರನ್‌ಗಳನ್ನು ಗಳಿಸಿದ್ದಾರೆ. ಇನ್ನು ಕಳೆದ ಜುಲೈ ತಿಂಗಳಿನಲ್ಲಿ ಶ್ರೀಲಂಕಾದಲ್ಲಿ ನಡೆದ ಸೀಮಿತ ಓವರ್‌ಗಳ ಸರಣಿಗೂ ಋತುರಾಜ್ ಆಯ್ಕೆಯಾಗಿದ್ದರು. ಐಪಿಎಲ್‌ನಲ್ಲಿ ಈವರೆಗೆ ಆಡಿರುವ 10 ಪಂದ್ಯಗಳಲ್ಲಿ 40ರ ಸರಾಸರಿಯಂತೆ 362 ರನ್‌ಗಳಿಸಿದ್ದಾರೆ. ಈಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಅಸ್ತ್ರವಾಗಿ ಗುರುತಿಸಲ್ಪಟ್ಟಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಸ್ಕ್ವಾಡ್
ಋತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಅಂಬಟಿ ರಾಯುಡು, ಸುರೇಶ್ ರೈನಾ, ಎಂಎಸ್ ಧೋನಿ (ನಾಯಕ & ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಸ್ಯಾಮ್ ಕುರ್ರನ್, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಜೋಶ್ ಹಜಲ್‌ವುಡ್, ಡ್ವೇನ್ ಬ್ರಾವೊ, ರಾಬಿನ್ ಉತ್ತಪ್ಪ, ಚೇತೇಶ್ವರ ಪೂಜಾರ, ಕರ್ನ್ ಶರ್ಮಾ, ಇಮ್ರಾನ್ ತಾಹಿರ್, ಜೇಸನ್ ಬೆಹ್ರೆಂಡಾರ್ಫ್, ಕೃಷ್ಣಪ್ಪ ಗೌತಮ್, ಲುಂಗಿ ಎನ್ಗಿಡಿ, ಮಿಚೆಲ್ ಸ್ಯಾಂಟ್ನರ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಹರಿ ನಿಶಾಂತ್, ಎನ್ ಜಗದೀಶನ್, ಕೆಎಂ ಆಸಿಫ್, ಹರಿಶಂಕರ ರೆಡ್ಡಿ, ಭಗತ್ ವರ್ಮ

Story first published: Tuesday, September 28, 2021, 17:44 [IST]
Other articles published on Sep 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X