ಕೊಹ್ಲಿ, ಗೇಲ್, ಎಬಿಡಿಗಿಂತ ಈತ ಐಪಿಎಲ್‌ನಲ್ಲಿ ಡೇಂಜರಸ್ ಆಟಗಾರ ಎಂದ ಗೌತಮ್ ಗಂಭೀರ್

ಏಪ್ರಿಲ್ ತಿಂಗಳಿನಲ್ಲಿ ಭಾರತ ನೆಲದಲ್ಲಿ ಆರಂಭವಾಗಿ 29 ಪಂದ್ಯಗಳು ಮುಗಿದ ಬಳಿಕ ವಿವಿಧ ತಂಡಗಳ ಕೆಲ ಆಟಗಾರರು ಮತ್ತು ಸಿಬ್ಬಂದಿ ವರ್ಗದವರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ಕಾರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡು ಮುಂದೂಡಲ್ಪಟ್ಟಿದ್ದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಇದೇ ಸೆಪ್ಟೆಂಬರ್ 19ರ ಭಾನುವಾರದಿಂದ ಯುಎಇಯಲ್ಲಿ ಮುಂದುವರಿಯುತ್ತಿದೆ.

ಏಕದಿನ ನಾಯಕತ್ವವನ್ನೂ ಬಿಟ್ಟುಕೊಡುವಂತೆ ಕೇಳಿದ್ರು ಶಾಸ್ತ್ರಿ; ಕೋಚ್ ಮಾತಿಗೆ ಕೊಹ್ಲಿ ಹೇಳಿದ್ದಿಷ್ಟುಏಕದಿನ ನಾಯಕತ್ವವನ್ನೂ ಬಿಟ್ಟುಕೊಡುವಂತೆ ಕೇಳಿದ್ರು ಶಾಸ್ತ್ರಿ; ಕೋಚ್ ಮಾತಿಗೆ ಕೊಹ್ಲಿ ಹೇಳಿದ್ದಿಷ್ಟು

ಇನ್ನು ಈ ಬಾರಿಯ ಐಪಿಎಲ್ ಟೂರ್ನಿ ಭಾರತದಲ್ಲಿ ಸ್ಥಗಿತಗೊಂಡು ಮುಂದೂಡಲ್ಪಟ್ಟ ವೇಳೆಗೆ 7 ಪಂದ್ಯಗಳನ್ನಾಡಿದ್ದ ಮುಂಬೈ ಇಂಡಿಯನ್ಸ್ ತಂಡ 4 ಪಂದ್ಯಗಳಲ್ಲಿ ಗೆದ್ದು, 3 ಪಂದ್ಯಗಳಲ್ಲಿ ಸೋಲುಂಡು, 8 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿತ್ತು. ಹೀಗೆ ಭಾರತ ನೆಲದಲ್ಲಿ ಆರಂಭವಾಗಿದ್ದ ಈ ಬಾರಿಯ ಐಪಿಎಲ್ ಟೂರ್ನಿಯ ಮೊದಲ ಭಾಗದಲ್ಲಿ ತೀರಾ ಕಳಪೆ ಪ್ರದರ್ಶನವನ್ನೇನೂ ನೀಡದ ಮುಂಬೈ ಇಂಡಿಯನ್ಸ್ ತಂಡ ಸಾಧಾರಣ ಪ್ರದರ್ಶನವನ್ನು ನೀಡಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದು, ಮುಂದಿನ ಪಂದ್ಯಗಳಲ್ಲಿ ಗೆಲುವು ಸಾಧಿಸುವುದರ ಮೂಲಕ ಇನ್ನೂ ಉತ್ತಮ ಸ್ಥಾನಕ್ಕೇರುವ ಯೋಜನೆಯಲ್ಲಿತ್ತು.

 'ದಾಖಲೆ ಮಾಡಿಬಿಟ್ರೆ ಆಗಲ್ಲ, ಪಂದ್ಯದ ದಿನ ಚೆನ್ನಾಗಿ ಆಡಬೇಕು'; ದಾಖಲೆ ಎನ್ನುವವರಿಗೆ ಕುಟುಕಿದ ರೋಹಿತ್ 'ದಾಖಲೆ ಮಾಡಿಬಿಟ್ರೆ ಆಗಲ್ಲ, ಪಂದ್ಯದ ದಿನ ಚೆನ್ನಾಗಿ ಆಡಬೇಕು'; ದಾಖಲೆ ಎನ್ನುವವರಿಗೆ ಕುಟುಕಿದ ರೋಹಿತ್

ಆದರೆ ಪ್ರಸ್ತುತ ಯುಎಇಯಲ್ಲಿ ಮುಂದುವರಿಯುತ್ತಿರುವ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇತ್ತೀಚಿಗಷ್ಟೇ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಚೆನ್ನೈ ವಿರುದ್ಧ ಮುಂಬೈ ಇಂಡಿಯನ್ಸ್ ಸೋಲುವುದರ ಮೂಲಕ ಪ್ರಸ್ತುತ ಐಪಿಎಲ್ ಟೂರ್ನಿಯ ದ್ವಿತೀಯ ಭಾಗದಲ್ಲಿ ನೀರಸ ಆರಂಭವನ್ನು ಮಾಡಿದೆ. ಹೀಗೆ ಈ ಬಾರಿಯ ಐಪಿಎಲ್ ಟೂರ್ನಿಯ ದ್ವಿತೀಯ ಭಾಗದ ತನ್ನ ಮೊದಲನೇ ಪಂದ್ಯವನ್ನು ಚೆನ್ನೈ ವಿರುದ್ಧ ಸೋತ ಮುಂಬೈ ಇಂಡಿಯನ್ಸ್ ಸೆಪ್ಟೆಂಬರ್ 23ರ ಗುರುವಾರದಂದು ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿಯೂ ಸೋಲುವುದರ ಮೂಲಕ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಕುಸಿದಿದೆ. ಹೀಗೆ ಈ ಪಂದ್ಯಕ್ಕೂ ಮುನ್ನ ಮಾತನಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಜಿ ನಾಯಕ ಗೌತಮ್ ಗಂಭೀರ್ ಐಪಿಎಲ್ ಇತಿಹಾಸದಲ್ಲಿ ತಮ್ಮ ಪಾಲಿನ ಅತಿ ಡೇಂಜರಸ್ ಬ್ಯಾಟ್ಸ್‌ಮನ್‌ ಯಾರೆಂಬುದನ್ನು ಈ ಕೆಳಕಂಡಂತೆ ವಿವರಿಸಿದ್ದಾರೆ.

ಕೊಹ್ಲಿ, ಗೇಲ್, ಎಬಿಡಿಗಿಂತ ಈತ ಅಪಾಯಕಾರಿ ಆಟಗಾರ

ಕೊಹ್ಲಿ, ಗೇಲ್, ಎಬಿಡಿಗಿಂತ ಈತ ಅಪಾಯಕಾರಿ ಆಟಗಾರ

ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯ ಆರಂಭವಾಗುವ ಮುನ್ನ ಮಾತನಾಡಿದ ಗೌತಮ್ ಗಂಭೀರ್ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಐಪಿಎಲ್ ಇತಿಹಾಸದಲ್ಲೇ ತಾನು ಕಂಡ ಅಪಾಯಕಾರಿ ಬ್ಯಾಟ್ಸ್‌ಮನ್‌ ಎಂದು ಬಣ್ಣಿಸಿದ್ದಾರೆ. ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್ ಹಾಗೂ ವಿರಾಟ್ ಕೊಹ್ಲಿಗಿಂತ ಅತಿ ಅಪಾಯಕಾರಿ ಬ್ಯಾಟ್ಸ್‌ಮನ್‌ ಎಂದರೆ ಅದು ರೋಹಿತ್ ಶರ್ಮಾ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

ರೋಹಿತ್ ಶರ್ಮಾ ನಮಗೆ ದುಸ್ವಪ್ನರಾಗಿದ್ದರು

ರೋಹಿತ್ ಶರ್ಮಾ ನಮಗೆ ದುಸ್ವಪ್ನರಾಗಿದ್ದರು

ಹೀಗೆ ರೋಹಿತ್ ಶರ್ಮಾ ಐಪಿಎಲ್ ಇತಿಹಾಸದಲ್ಲಿಯೇ ತಾನು ಕಂಡ ಅತಿ ಅಪಾಯಕಾರಿ ಆಟಗಾರ ಎಂದು ಬಣ್ಣಿಸಿರುವ ಗೌತಮ್ ಗಂಭೀರ್ ತಾನು 7 ವರ್ಷ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕನಾಗಿದ್ದಾಗ ರೋಹಿತ್ ಶರ್ಮಾ ತಮ್ಮ ತಂಡಕ್ಕೆ ದುಸ್ವಪ್ನರಾಗಿದ್ದರು ಎಂದು ಹೇಳಿದ್ದಾರೆ. ರೋಹಿತ್ ಶರ್ಮಾ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಹೆಚ್ಚು ರನ್ ಸಿಡಿಸಿದ್ದಾರೆ, ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿಯೂ ರೋಹಿತ್ ಶರ್ಮಾ ಅಬ್ಬರಿಸಿದ್ದು ಶತಕವನ್ನು ಸಿಡಿಸಿದ್ದರು. ನಮ್ಮ ತಂಡದ ಸ್ಪಿನ್ ಮತ್ತು ವೇಗದ ಬೌಲರ್‌ಗಳಿಗೆಲ್ಲಾ ರೋಹಿತ್ ಶರ್ಮಾ ಅಬ್ಬರದ ಬ್ಯಾಟಿಂಗ್ ನಡೆಸುತ್ತಿದ್ದರು. ಹೀಗಾಗಿ ನಾನು ಕೆಕೆಆರ್ ತಂಡದ ನಾಯಕನಾಗಿದ್ದಾಗ ಯಾವುದೇ ಆಟಗಾರರಿಗೂ ಕೂಡ ಯೋಜನೆಯನ್ನು ಹಾಕಿಕೊಳ್ಳುತ್ತಿರಲಿಲ್ಲ ಆದರೆ ರೋಹಿತ್ ಶರ್ಮಾ ವಿಚಾರ ಬಂದಾಗ ಮಾತ್ರ ಯಾವ ರೀತಿಯ ಬೌಲಿಂಗ್ ಅಸ್ತ್ರವನ್ನು ಬಳಸಬೇಕೆಂದು ತುಂಬ ಯೋಚಿಸುತ್ತಿದ್ದೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

CSK ವಿರುದ್ಧ ಗೆಲ್ಲಲು ಮಾಸ್ಟರ್ ಪ್ಲಾನ್ ಮಾಡಿದ ವಿರಾಟ್! ಏನದು? | Oneindia Kannada
ಕೊಲ್ಕತ್ತಾ ವಿರುದ್ಧ ಸೋತ ಮುಂಬೈ ಇಂಡಿಯನ್ಸ್

ಕೊಲ್ಕತ್ತಾ ವಿರುದ್ಧ ಸೋತ ಮುಂಬೈ ಇಂಡಿಯನ್ಸ್

ಸೆಪ್ಟೆಂಬರ್ 23ರಂದು ನಡೆದ ಪಂದ್ಯಕ್ಕೂ ಮುನ್ನ ಐಪಿಎಲ್ ಇತಿಹಾಸದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಒಟ್ಟು 28 ಬಾರಿ ಮುಖಾಮುಖಿಯಾಗಿದ್ದವು. ಈ ಪಂದ್ಯಗಳ ಪೈಕಿ ಮುಂಬೈ ಇಂಡಿಯನ್ಸ್ ತಂಡ 22 ಪಂದ್ಯಗಳಲ್ಲಿ ಜಯ ಗಳಿಸಿದ್ದರೆ, ಕೆಕೆಆರ್ ಕೇವಲ 6 ಪಂದ್ಯಗಳಲ್ಲಿ ಮಾತ್ರ ಜಯಗಳಿಸಿತ್ತು. ಹೀಗೆ ಐಪಿಎಲ್ ಇತಿಹಾಸದಲ್ಲಿ ಕೆಕೆಆರ್ ವಿರುದ್ಧ ದೊಡ್ಡಮಟ್ಟದ ಮೇಲುಗೈ ಸಾಧಿಸಿದ್ದ ಮುಂಬೈ ಇಂಡಿಯನ್ಸ್ ತಂಡ ಗುರುವಾರ ನಡೆದ ಪಂದ್ಯದಲ್ಲಿಯೂ ಕೂಡ ಗೆಲುವು ಸಾಧಿಸಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ಯಾಟ್ಸ್‌ಮನ್‌ಗಳ ಅಬ್ಬರದ ಎದುರು ಮಂಕಾದ ಮುಂಬೈ ಇಂಡಿಯನ್ಸ್ ತಂಡ ಸೋಲುವುದರ ಮೂಲಕ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಕುಸಿತ ಕಂಡಿದೆ. ಮುಂಬೈ ಇಂಡಿಯನ್ಸ್ ತಂಡ ನೀಡಿದ 156 ರನ್‌ಗಳ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 15.1 ಓವರ್‌ಗಳಲ್ಲಿ 159 ರನ್ ಬಾರಿಸಿ 7 ವಿಕೆಟ್‍ಗಳ ಭರ್ಜರಿ ಜಯವನ್ನು ಸಾಧಿಸಿದೆ ಹಾಗೂ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 5 - October 19 2021, 03:30 PM
ಸ್ಕಾಟ್ಲೆಂಡ್
ಪಪುವಾ ನ್ಯೂ ಗಿನಿವಾ
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, September 24, 2021, 8:27 [IST]
Other articles published on Sep 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X