ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಂಐ ಪ್ಲೇ ಆಫ್ಸ್‌ ಅವಕಾಶ ಮುಗಿದ ಬಳಿಕ ಭಾವನಾತ್ಮಕ ಪೋಸ್ಟ್ ಹಾಕಿದ ರೋಹಿತ್

IPL 2021: Rohit Sharma posts emotional message after Mumbai Indians fails to qualify for playoffs

ಅಬುಧಾಬಿ: ಐದು ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಈ ಸೀಸನ್‌ನಲ್ಲಿ ಮಂಕಾಗಿದೆ. ಪ್ಲೇ ಆಫ್ಸ್‌ಗೆ ಸುಲಭವಾಗಿ ಪ್ರವೇಶ ಪಡೆದುಕೊಳ್ಳಲು ಶಕ್ತವಾಗಿದ್ದ ಬಲಿಷ್ಠ ತಂಡ ಮುಂಬೈ ಈ ಬಾರಿ ಪ್ಲೇ ಆಫ್ಸ್‌ ಅವಕಾಶವನ್ನೇ ಕಳೆದುಕೊಂಡಿದೆ.

ಭಾವನಾತ್ಮಕ ಸಂದೇಶ ಬರೆದು ಐಪಿಎಲ್‌ಗೆ ಗುಡ್‌ಬೈ ಹೇಳಿದ ಡೇವಿಡ್ ವಾರ್ನರ್ಭಾವನಾತ್ಮಕ ಸಂದೇಶ ಬರೆದು ಐಪಿಎಲ್‌ಗೆ ಗುಡ್‌ಬೈ ಹೇಳಿದ ಡೇವಿಡ್ ವಾರ್ನರ್

ಶುಕ್ರವಾರ (ಅಕ್ಟೋಬರ್‌ 8) ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದಿದ್ದ ಐಪಿಎಲ್ 55ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖೀಯಾಗಿದ್ದವು. ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ 42 ರನ್ ಜಯ ದಾಖಲಿಸಿತ್ತು. ಈ ಪಂದ್ಯದ ಬಳಿಕ ಎಂಐ ನಾಯಕ ಭಾವನಾತ್ಮಕ ಮೆಸೇಜ್ ಬರೆದುಕೊಂಡಿದ್ದಾರೆ.

ಟೂರ್ನಿ ಆರಂಭಿಕ ಹಂತದಲ್ಲಿ ಪ್ರಮುಖ ಪಂದ್ಯಗಳನ್ನು ಸೋತಿದ್ದ ಎಂಐ ಪ್ಲೇ ಆಫ್ಸ್‌ ವಿಚಾರದಲ್ಲಿ ಸಂಕಷ್ಟದಲ್ಲಿತ್ತು. ಶುಕ್ರವಾರದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ಗೆ ಪ್ಲೇ ಆಫ್ಸ್‌ಗೆ ಪ್ರವೇಶಿಸಲು ಕೊನೇ ಅವಕಾಶವಿತ್ತು. ಆದರೆ ಈ ಅವಕಾಶ ಬಲು ಕಠಿಣವಾಗಿತ್ತು. ಅದೇನೆಂದರೆ ಮುಂಬೈ ಮೊದಲು ಬ್ಯಾಟಿಂಗ್‌ ಮಾಡಿ ಹೈದರಾಬಾದ್ ವಿರುದ್ಧ 170+ ರನ್‌ಗಳಿಂದ ಗೆಲ್ಲಬೇಕಿತ್ತು. ಆದರೆ ಇದು ಸಾಧ್ಯವಾಗದೆ ಮುಂಬೈ ಟೂರ್ನಿಯಿಂದ ಹೊರ ಬಿದ್ದಿತ್ತು.

ಎಸ್‌ಆರ್‌ಎಚ್ ವೇಗಿ ಉಮ್ರಾನ್ ಟಿ20 ವಿಶ್ವಕಪ್‌ಗೆ ನೆಟ್ ಬೌಲರ್ ಆಗಿ ಆಯ್ಕೆ?!ಎಸ್‌ಆರ್‌ಎಚ್ ವೇಗಿ ಉಮ್ರಾನ್ ಟಿ20 ವಿಶ್ವಕಪ್‌ಗೆ ನೆಟ್ ಬೌಲರ್ ಆಗಿ ಆಯ್ಕೆ?!

ಎಂಐ ಈ ಸೀಸನ್‌ನಿಂದ ಹೊರ ನಡೆಯುತ್ತಲೇ, ನಾಯಕ ರೋಹಿತ್ ಶರ್ಮಾ ಭಾವನಾತ್ಮಕ ಸಂದೇಶ ಬರೆದುಕೊಂಡಿದ್ದಾರೆ. "ಸೀಸನ್ ತುಂಬಾ ಏರಿಳಿತಗಳಿದ್ದವು, ಕಲಿಯುವುದಿತ್ತು. ಕಳೆದ 2-3 ಸೀಸನ್‌ಗಳಲ್ಲಿ ನಾವು ಗೆದ್ದು ಬೀಗಿದ್ದ ಸಂಭ್ರಮವನ್ನು ಈ ಬರೀ 14 ಪಂದ್ಯಗಳು ದೂರವಿಡಲು ಸಾಧ್ಯವಿಲ್ಲ. ನೀಲಿ ಮತ್ತು ಬಂಗಾರದ ಬಣ್ಣದ ಜೆರ್ಸಿ ಧರಿಸಿ ಆಡಿದ ಪ್ರತೀ ಆಟಗಾರನೂ ತಂಡಕ್ಕೆ ಹೆಮ್ಮೆ ತಂದಿದ್ದಾನೆ. ಈ ಹೆಮ್ಮೆಯೇ ನಮ್ಮನ್ನು ಮುಂಬೈ ಇಂಡಿಯನ್ಸ್ ತಂಡವಾಗಿಸಿದೆ. ಒನ್ ಫ್ಯಾಮಿಲಿ," ಎಂದು ರೋಹಿತ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಶುಕ್ರವಾರದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಮುಂಬೈ ಇಂಡಿಯನ್ಸ್, ರೋಹಿತ್ ಶರ್ಮಾ 18, ಇಶಾನ್ ಕಿಶನ್ 84 (32 ಎಸೆತ), ಸೂರ್ಯಕುಮಾರ್ ಯಾದವ್ 82 (40), ಹಾರ್ದಿಕ್ ಪಾಂಡ್ಯ 10, ಕೀರನ್ ಪೊಲಾರ್ಡ್ 13, ಕೃನಾಲ್ ಪಾಂಡ್ಯ 9, ಜೇಮ್ಸ್ ನೀಶಮ್ 0, ನಾಥನ್ ಕೌಲ್ಟರ್-ನೈಲ್ 3, ಜಸ್ಪ್ರೀತ್ ಬೂಮ್ರಾ 5 ರನ್‌ನೊಂದಿಗೆ 20 ಓವರ್‌ಗೆ 9 ವಿಕೆಟ್ ಕಳೆದು 235 ರನ್ ಗಳಿಸಿತು.

ಕೆಕೆಆರ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಕಣಕ್ಕಿಳಿಯಬಹುದಾದ ಬಲಿಷ್ಠ ಆರ್‌ಸಿಬಿ ತಂಡ ಹೀಗಿದೆಕೆಕೆಆರ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಕಣಕ್ಕಿಳಿಯಬಹುದಾದ ಬಲಿಷ್ಠ ಆರ್‌ಸಿಬಿ ತಂಡ ಹೀಗಿದೆ

ಗುರಿ ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್, ಜೇಸನ್ ರಾಯ್ 34, ಅಭಿಷೇಕ್ ಶರ್ಮಾ 33, ಮನೀಶ್ ಪಾಂಡೆ 69, ಪ್ರಿಯಂ ಗಾರ್ಗ್ 29, ಅಬ್ದುಲ್ ಸಮದ್ 2, ವೃದ್ಧಿಮಾನ್ ಸಹಾ 2, ಜೇಸನ್ ಹೋಲ್ಡರ್ 1, ರಶೀದ್ ಖಾನ್ 9, ಮೊಹಮ್ಮದ್ ನಬಿ 3 ರನ್‌ನೊಂದಿಗೆ 20 ಓವರ್‌ಗೆ 8 ವಿಕೆಟ್‌ ಕಳೆದು 193 ರನ್ ಬಾರಿಸಿ ಶರಣಾಯಿತು.

Story first published: Sunday, October 10, 2021, 1:13 [IST]
Other articles published on Oct 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X