ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಟಿ20 ಕ್ರಿಕೆಟ್‌ನಲ್ಲಿ ಐತಿಹಾಸಿಕ ದಾಖಲೆ ಬರೆಯಲು ರೋಹಿತ್ ಶರ್ಮಾ ಸಜ್ಜು

ipl 2021: Rohit Sharma set to create record of sixes in T20 formate

ಐಪಿಎಲ್‌ನಲ್ಲಿ ಇಂದು ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುವ ಮೂಲಕ 14ನೇ ಆವೃತ್ತಿಯ ಎರಡನೇ ಚರಣದ ಪಂದ್ಯಗಳಿಗೆ ಚಾಲನೆ ದೊರೆಯಲಿದೆ. ದುಬೈ ಅಂಗಳದಲ್ಲಿ ಈ ಎರಡು ತಂಡಗಳು ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಮೂಡಿಸಿದ್ದು ಅಭಿಮಾನಿಗಳು ಪಂದ್ಯಕ್ಕಾಗು ಕಾತರಿಸುತ್ತಿದ್ದಾರೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಐತಿಹಾಸಿಕ ದಾಖಲೆಯೊಂದನ್ನು ಬರೆಯಲು ಸಜ್ಜಾಗಿದ್ದಾರೆ.

 ಐಪಿಎಲ್ ದ್ವಿತೀಯ ಹಂತ ಎಸ್‌ಆರ್‌ಎಚ್‌ಗೆ ನಿರ್ಣಾಯಕವಾಗಲಿದೆ: ಲಕ್ಷ್ಮಣ್ ಐಪಿಎಲ್ ದ್ವಿತೀಯ ಹಂತ ಎಸ್‌ಆರ್‌ಎಚ್‌ಗೆ ನಿರ್ಣಾಯಕವಾಗಲಿದೆ: ಲಕ್ಷ್ಮಣ್

ಸೀಮಿತ ಓವರ್‌ಗ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಆಟಗಾರರಲ್ಲಿ ಒಬ್ಬರೆನಿಸಿರುವ ರೋಹಿತ್ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ 300ಕ್ಕೂ ಅಧಿಕ ಸಿಕ್ಸರ್ ಸಿಡಿಸಿದ ಭಾರತದ ಕೇವಲ 4 ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಈವರೆಗೆ ಟಿ20 ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ 397 ಸಿಕ್ಸರ್ ಸಿಡಿಸಿದ್ದು ಭಾರತೀಯ ಆಟಗಾರರ ಪೈಕಿ ಟಿ020 ಮಾದರಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎನಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಮೂರು ಸಿಕ್ಸರ್ ಸಿಡಿಸಲು ಸಾಧ್ಯವಾದರೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ಶರ್ಮಾ ಚುಟುಕು ಕ್ರಿಕೆಟ್ ಮಾದರಿಯಲ್ಲಿ 400ನೇ ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ ಆಟಗಾರ ಎಂಬ ಐತಿಹಾಸಿಕ ಸಾಧನೆಯನ್ನು ಮಾಡಲಿದ್ದಾರೆ.

ನನ್ನ ಬೌಲಿಂಗ್ ತಂತ್ರಗಾರಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದೇನೆ: ಉನಾದ್ಕತ್ನನ್ನ ಬೌಲಿಂಗ್ ತಂತ್ರಗಾರಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದೇನೆ: ಉನಾದ್ಕತ್

ಟಿ20 ಮಾದರಿಯಲ್ಲಿ ಸಿಕ್ಸರ್ ಸಿಡಿಸಿದ ಭಾರತದ ಆಟಗಾರರ ಪೈಕಿ ರೋಹಿತ್ ಶರ್ಮಾ ಸಾಕಷ್ಟು ಮುಂದಿದ್ದಾರೆ. ಎರಡನೇ ಸ್ಥಾನದಲ್ಲಿರುವ ಸುರೇಶ್ ರೈನಾ 324 ಸಿಕ್ಸರ್ ಸಿಡಿಸಿ ರೋಹಿತ್ ನಂತರದ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಆರ್‌ಸಿಬಿ ಹಾಗೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯುದ್ದು 315 ಸಿಕ್ಸರ್ ಸಿಡಿಸಿದ್ದಾರೆ. 303 ಸಿಕ್ಸರ್ ಸಿಡಿಸಿರುವ ಎಂಎಸ್ ಧೋನಿ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಇನ್ನು ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ಒಟ್ಟು 224 ಸಿಕ್ಸರ್ ಸಿಡಿಸಿದ್ದಾರೆ. ಇದರಲ್ಲಿ 173 ಸಿಕ್ಸರ್‌ಗಳು ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಸಿಡಿಸಿದ್ದು ಉಳಿದ 51 ಐಪಿಎಲ್ ಸಿಕ್ಸರ್‌ಗಳು ಐಪಿಎಲ್ ಆವೃತ್ತಿಯ ಆರಂಭಿಕ ಮೂರು ವರ್ಷಗಳಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದ ವೇಳೆ ಸಿಡಿದಿದೆ.

ಭರ್ಜರಿ ಸಿಕ್ಸರ್‌ಗಳ ಮೂಲಕ ಎಚ್ಚರಿಕೆ ಕೊಟ್ಟ ಎಂಎಸ್ ಧೋನಿ: ವಿಡಿಯೋಭರ್ಜರಿ ಸಿಕ್ಸರ್‌ಗಳ ಮೂಲಕ ಎಚ್ಚರಿಕೆ ಕೊಟ್ಟ ಎಂಎಸ್ ಧೋನಿ: ವಿಡಿಯೋ

ಈ ಬಾರಿಯ ಐಪಿಎಲ್ ಆವೃತ್ತಿಯ ಎರಡನೇ ಚರಣದ ಪಂದ್ಯಗಳು ಇಂದು ಆರಂಭವಾಗಲಿದೆ. ಐದು ಬಾರಿ ಐಪಿಎಲ್ ಚಾಂಪಿಯನ ಪಟ್ಟಕ್ಕೇರಿರುವ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಹಾಗೂ ಮೂರು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಈ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.

ಸಂಭಾವ್ಯ ತಂಡಗಳು ಹೀಗಿದೆ
ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ತಂಡ: ಫಾಫ್ ಡು ಪ್ಲೆಸಿಸ್ / ರಾಬಿನ್ ಉತ್ತಪ್ಪ, ಋತುರಾಜ್ ಗಾಯಕ್ವಾಡ್, ಸುರೇಶ್ ರೈನಾ, ಮೊಯೀನ್ ಅಲಿ, ಅಂಬಾಟಿ ರಾಯುಡು, ಎಂಎಸ್ ಧೋನಿ (ನಾಯಕ ಮತ್ತು ವಿಕೆಟ್ ಕೀಪರ್‌), ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ದೀಪಕ್ ಚಹಾರ್, ಇಮ್ರಾನ್ ತಾಹಿರ್

 ಐಪಿಎಲ್ 2021: ಚೆನ್ನೈ vs ಮುಂಬೈ ಮುಖಾಮುಖಿಯಲ್ಲಿ ಯಾವುದು ಬಲಿಷ್ಠ ತಂಡ, ಯಾರಿಗೆ ಹೆಚ್ಚು ಸೋಲು? ಐಪಿಎಲ್ 2021: ಚೆನ್ನೈ vs ಮುಂಬೈ ಮುಖಾಮುಖಿಯಲ್ಲಿ ಯಾವುದು ಬಲಿಷ್ಠ ತಂಡ, ಯಾರಿಗೆ ಹೆಚ್ಚು ಸೋಲು?

ಮುಂಬೈ ಇಂಡಿಯನ್ಸ್ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಜಸ್ಪ್ರಿತ್ ಬುಮ್ರಾ, ಟ್ರೆಂಟ್ ಬೌಲ್ಟ್, ರಾಹುಲ್ ಚಾಹರ್, ಮಾರ್ಕೊ ಜಾನ್ಸನ್/ಜಯಂತ್ ಯಾದವ್

Story first published: Monday, September 20, 2021, 23:56 [IST]
Other articles published on Sep 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X