ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಅಶ್ವಿನ್ ಎಸೆತಕ್ಕೆ ಒಂದೇ ಕೈಯ್ಯಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದ ರೋಹಿತ್: ವಿಡಿಯೋ

IPL 2021: Rohit Sharma smashed One-Handed Six Off Ravichandran Ashwins Bowling

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಈ ಬಾರಿಯ ಐಪಿಎಲ್‌ನ ಅದ್ಭುತ ಸಿಕ್ಸರ್‌ವೊಂದನ್ನು ಬಾರಿಸಿದ್ದಾರೆ. ಆರ್ ಅಶ್ವಿನ್ ಎಸೆತವನ್ನು ಒಂದೇ ಕೈಯ್ಯಲ್ಲಿ ಬಾರಿಸಿದ ರೋಹಿತ್ ಶರ್ಮಾ ಬೌಡರಿ ಗೆರೆಯ ಆಚೆಗೆ ಅಟ್ಟಿದ್ದರು.

ಡೆಲ್ಲಿ ಆರ್ ಅಶ್ವಿನ್ ಎಸೆದ ನಾಲ್ಕನೇ ಓವರ್‌ನ ಅಂತಿಮ ಎಸೆತವನ್ನು ರೋಹಿತ್ ಶರ್ಮಾ ಬೌಲರ್‌ಗೆ ಗೊಂದಲವಾಗುವಂತೆ ಮಾಡಿ ಚೆಂಡನ್ನು ಗಾಳಿಯಲ್ಲಿ ಚಿಮ್ಮುವಂತೆ ಮಾಡಿದರು. ಎಕ್ಸ್ಟ್ರಾ ಕವರ್ ಬೌಂಡರಿಯತ್ತ ಸಾಗಿ ಈ ಚೆಂಡು 78 ಮೀಟರ್ ದೂರ ಬಿದ್ದಿತ್ತು. ಒಂದೇ ಕೈಯ್ಯಲ್ಲಿ ರೋಹಿತ್ ಶರ್ಮಾ ಬಾರಿಸಿದ್ದರೂ ಅದ್ಭುತವಾದ ಟೈಮಿಂಗ್‌ನಿಂದಾಗಿ ಆರು ರನ್‌ಗಳು ರೋಹಿತ್ ಖಾತೆಗೆ ಸೇರಿಕೊಂಡಿತ್ತು.

'ನಾನು ಅನ್‌ಫಿಟ್‌ ಎಂದು ಯಾರಾದರು ಹೇಳುವುದನ್ನು ಬಯಸುವುದಿಲ್ಲ''ನಾನು ಅನ್‌ಫಿಟ್‌ ಎಂದು ಯಾರಾದರು ಹೇಳುವುದನ್ನು ಬಯಸುವುದಿಲ್ಲ'

ಎರಡನೇ ವಿಕೆಟ್‌ಗೆ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಅರ್ಧ ಶತಕದ ಜೊತೆಯಾಟವನ್ನು ನೀಡುವ ಮೂಲಕ ಮುಂಬೈ ಇಂಡಿಯನ್ಸ್ ಬೃಹತ್ ಮೊತ್ತ ದಾಖಲಿಸುವ ಮುನ್ಸೂಚನೆ ನೀಡಿತ್ತು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಮಿತ್ ಮಿಶ್ರಾ ಮುಂಬೈ ಲೆಕ್ಕಾಚಾರವನ್ನು ಬುಡಮೇಲುಗೊಳಿಸಿದರು.

Rohit Sharmaಗೆ ಸೋತ ನಂತರ‌ಮತ್ತೋಂದು ಶಾಕ್ | Oneindia Kannada

ಮುಂಬೈ ಇಂಡಿಯನ್ಸ್ ಪರವಾಗಿ ನಾಯಕ ರೋಹಿತ್ ಶರ್ಮಾ 30 ಎಸೆತಗಳನ್ನು ಎದುರಿಸಿ 44 ರನ್‌ ಬಾರಿಸಿದರು. ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರವಾಗಿ ದಾಖಲಾದ ಅತಿ ಹೆಚ್ಚಿನ ರನ್ ಇದಾಗಿದೆ. ಮೂರು ಸಿಕ್ಸರ್ ಹಾಗೂ ಮೂರು ಬೌಂಡರಿ ಸಿಡಿಸಿದ ರೋಹಿತ್ ಶರ್ಮಾ ಅಮಿತ್ ಮಿಶ್ರಾಗೆ ವಿಕೆಟ್ ಒಪ್ಪಿಸಿದರು.

Story first published: Wednesday, April 21, 2021, 17:36 [IST]
Other articles published on Apr 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X