ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಚೆನ್ನೈ ವಿರುದ್ಧ ಅಪರೂಪದ ದಾಖಲೆ ಬರೆದ ಬೆಂಗಳೂರು

IPL 2021: Royal Challengers Bangalore creates unique record against Chennai Super Kings
Kohli ಹಾಗು Padikkal ಮಾಡಿದ ವಿಶೇಷ ಸಾಧನೆ | Oneindia Kannada

ಶಾರ್ಜಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ವಿಶೇಷ ದಾಖಲೆ ನಿರ್ಮಿಸಿದೆ. ಶುಕ್ರವಾರ ನಡೆದ ಐಪಿಎಲ್ 35ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬೆಂಗಳೂರು ಆರಂಭಿಕ ಬ್ಯಾಟಿಂಗ್‌ಗಾಗಿ ಮೈಲಿಗಲ್ಲು ಸ್ಥಾಪಿಸಿದೆ.

ಕೊನೇ ಎಸೆತದಲ್ಲಿ ಆಸ್ಟ್ರೇಲಿಯಾ ವಿರುದ್ಧ ಶರಣಾದ ಭಾರತದ ವನಿತೆಯರುಕೊನೇ ಎಸೆತದಲ್ಲಿ ಆಸ್ಟ್ರೇಲಿಯಾ ವಿರುದ್ಧ ಶರಣಾದ ಭಾರತದ ವನಿತೆಯರು

ಶಾರ್ಜಾ ಸ್ಟೇಡಿಯಂನಲ್ಲಿ ಸೆಪ್ಟೆಂಬರ್‌ 24ರಂದು ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರಿನಿಂದ ನಾಯಕ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಆರಂಭಿಕರಾಗಿ ಆಡಿದ್ದರು. ಕೊಹ್ಲಿ 53, ಪಡಿಕ್ಕಲ್ 70 ರನ್ ಬಾರಿಸಿದ್ದರು.

ಪಡಿಕ್ಕಲ್ ಮತ್ತು ಕೊಹ್ಲಿ ಇಬ್ಬರೂ 111 ರನ್ ಜೊತೆಯಾಟ ನೀಡಿ ಆರ್‌ಸಿಬಿಗೆ ಉತ್ತಮ ಆರಂಭ ಕೊಟ್ಟಿದ್ದರು. ಹೀಗಾಗಿಯೇ ದಾಖಲೆ ನಿರ್ಮಾಣವಾಗಿದೆ. ಆರ್‌ಸಿಬಿ ತಂಡ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ 100+ ರನ್ ಆರಂಭಿಕ ಜೊತೆಯಾಟ ನೀಡಿದ್ದು ಇದೇ ಮೊದಲಬಾರಿ. ಇದಕ್ಕೆ ಮುನ್ನ ಆರ್‌ಸಿಬಿ 100ಕ್ಕೂ ಕೆಳಗೆ ಆರಂಭಿಕ ಬ್ಯಾಟಿಂಗ್ ಮಾಡಿತ್ತು.

ಐಪಿಎಲ್ 2021: ಮತ್ತೊಂದು ಗೆಲುವಿನ ಮೇಲೆ ಕಣ್ಣಿಟ್ಟ ಡೆಲ್ಲಿ, ಶಾಕ್ ನೀಡಲು ಸಂಜು ಪಡೆ ಸಜ್ಜುಐಪಿಎಲ್ 2021: ಮತ್ತೊಂದು ಗೆಲುವಿನ ಮೇಲೆ ಕಣ್ಣಿಟ್ಟ ಡೆಲ್ಲಿ, ಶಾಕ್ ನೀಡಲು ಸಂಜು ಪಡೆ ಸಜ್ಜು

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು, ನಾಯಕ ವಿರಾಟ್ ಕೊಹ್ಲಿ, 53, ದೇವದತ್ ಪಡಿಕ್ಕಲ್ 70, ಎಬಿ ಡಿ ವಿಲಿಯರ್ಸ್ 12, ಗ್ಲೆನ್ ಮ್ಯಾಕ್ಸ್‌ವೆಲ್ 11, ಹರ್ಷಲ್ ಪಟೇಲ್ 3, ಟಿಮ್ ಡೇವಿಡ್ 1, ವನಿಂದು ಹಸರಂಗ 1 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 156 ರನ್ ಗಳಿಸಿತು.

ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ XI
ಋತುರಾಜ್ ಗಾಯಕವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಅಂಬಟಿ ರಾಯುಡು, ಸುರೇಶ್ ರೈನಾ, ಎಂಎಸ್ ಧೋನಿ (ಡಬ್ಲ್ಯೂ/ಸಿ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಜೋಶ್ ಹೇಜಲ್‌ವುಡ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ XI
ವಿರಾಟ್ ಕೊಹ್ಲಿ (ಸಿ), ದೇವದತ್ ಪಡಿಕ್ಕಲ್, ಶ್ರೀಕರ್ ಭಾರತ್ (ಡಬ್ಲ್ಯೂ), ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿವಿಲಿಯರ್ಸ್, ಟಿಮ್ ಡೇವಿಡ್, ವಾನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಯುಜ್ವೇಂದ್ರ ಚಾಹಲ್.

Story first published: Saturday, September 25, 2021, 10:31 [IST]
Other articles published on Sep 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X