ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಕೆಟ್ಟ ದಾಖಲೆಯನ್ನು ಅಳಿಸಿ ಹಾಕುತ್ತಾ ಆರ್‌ಸಿಬಿ

IPL 2021: Royal Challengers Bangalore in IPL opening encounters

14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಪಾಲ್ಗೊಳ್ಳಲು ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಸಜ್ಜಾಗಿದೆ. ಕಳೆದ ಬಾರಿ ಪ್ಲೇ ಆಫ್‌ ಹಂತಕ್ಕೇರಿ ಹೊರ ಬಿದ್ದ ಕೊಹ್ಲಿ ಪಡೆ ಈ ಬಾರಿಯ ಟೂರ್ನಿಯಲ್ಲಿ ಮತ್ತೆರಡು ಹೆಜ್ಜೆ ಮುಂದಿಟ್ಟು ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದೆ. ಆದರೆ ಐಪಿಎಲ್ ಇತಿಹಾಸವನ್ನು ನೋಡಿದರೆ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ತಂಡದ ಪ್ರದರ್ಶನ ಮಾತ್ರ ಕಳವಳಕಾರಿಯಾಗಿದೆ.

ಕಳೆದ 13 ಆವೃತ್ತಿಗಳಲ್ಲಿ ಆರ್‌ಸಿಬಿ 3 ಬಾರಿ ಉದ್ಘಾಟನಾ ಪಂದ್ಯದಲ್ಲಿ ಪಾಲ್ಗೊಂಡಿದೆ. ಆದರೆ ಈ ಮೂರು ಬಾರಿಯೂ ಆರ್‌ಸಿಬಿ ತಂಡಕ್ಕೆ ಗೆಲುವು ಸಾಧ್ಯವಾಗಿಯೇ ಇಲ್ಲ. ಈಗ 4ನೇ ಬಾರಿ ಆರ್‌ಸಿಬಿ ತನ್ನ ಅದೃಷ್ಟ ಪರೀಕ್ಷೆಗೆ ಇಳಿದಿದ್ದು ಈ ಬಾರಿ ಈ ಸೋಲಿನ ಸರಪಳಿಯನ್ನು ಮುರಿಯುತ್ತಾ ಎಂಬುದು ಪ್ರಶ್ನೆಯಾಗಿದೆ.

ಐಪಿಎಲ್ 2021: ಚೊಚ್ಚಲ ಹಣಾಹಣಿಯಲ್ಲಿ ಮುಂಬೈ vs ಆರ್‌ಸಿಬಿ, ಪಂದ್ಯದ ಗತಿ ಬದಲಿಸಬಲ್ಲ 6 ಆಟಗಾರರು!ಐಪಿಎಲ್ 2021: ಚೊಚ್ಚಲ ಹಣಾಹಣಿಯಲ್ಲಿ ಮುಂಬೈ vs ಆರ್‌ಸಿಬಿ, ಪಂದ್ಯದ ಗತಿ ಬದಲಿಸಬಲ್ಲ 6 ಆಟಗಾರರು!

2008ರಲ್ಲಿ ಐಪಿಎಲ್ ಉದ್ಘಾಟನಾ ಟೂರ್ನಿಯ ಆರಂಭಿಕ ಪಂದ್ಯದಲ್ಲಿಯೇ ಆರ್‌ಸಿಬಿ ತಂಡ ಆಡುವ ಅದೃಷ್ಟವನ್ನು ಗಳಿಸಿಕೊಂಡಿತ್ತು. ಆದರೆ ಆ ಪಂದ್ಯ ಆರ್‌ಸಿಬಿ ಪಾಲಿಗೆ ಸ್ಮರಣೀಯವಾಗಿರಲಿಲ್ಲ. ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ ಅತ್ಯಂತ ಹೀನಾಯವಾಗಿ ಸೋಲು ಕಂಡಿತ್ತು. ಮೆಕಲಮ್ ಬಾರಿಸಿದ ಬಿರುಗಾಳಿಯಂಥ ಶತಕದ ನೆರವಿನಿಂದ ಕೆಕೆಆರ್ ತಂಡ 3 ವಿಕೆಟ್ ಕಳೆದುಕೊಂಡು 222 ರನ್‌ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಆರ್‌ಸಿಬಿ ಕೇವಲ 82 ರನ್‌ಗಳಿಗೆ ಆಲೌಟ್ ಆಗಿತ್ತು.

ಬಳಿಕ ಬರೊಬ್ಬರಿ 9 ವರ್ಷದ ನಂತರ ಆರ್‌ಸಿಬಿ ಐಪಿಎಲ್‌ನ ಉದ್ಘಾಟನಾ ಪಂದ್ಯದಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡಿತ್ತು. ಈ ಬಾರಿ ಆರ್‌ಸಿಬಿಗೆ ಎದುರಾಳಿಯಾಗಿದ್ದ ತಂಡ ಸನ್‌ರೈರರ್ಸ್ ಹೈದರಾಬಾದ್. ಈ ಪಂದ್ಯವನ್ನೂ ಆರ್‌ಸಿಬಿ ದೊಡ್ಡ ಅಂತರದಿಂದಲೇ ಕಳೆದುಕೊಂಡಿತ್ತು. ಮೊದಲಿಗೆ ಬ್ಯಾಟಿಂಗ್ ಮಾಡಿದ ಎಸ್‌ಆರ್‌ಹೆಚ್ ತಂಡ 207 ರನ್‌ಗಳನ್ನು ಗಳಿಸಿತ್ತು. ಇದನ್ನು ಬೆನ್ನಟ್ಟಿದ ಆರ್‌ಸಿಬಿ 172 ರನ್‌ಗಳಿಗೆ ಆಲೌಟ್ ಆಗಿ ಶರಣಾಗಿತ್ತು.

ವಾಂಖೆಡೆ ಸ್ಟೇಡಿಯಂನಲ್ಲಿ ಕೊರೊನಾ ಪ್ರಕರಣಗಳು ಮತ್ತೂ ಏರಿಕೆವಾಂಖೆಡೆ ಸ್ಟೇಡಿಯಂನಲ್ಲಿ ಕೊರೊನಾ ಪ್ರಕರಣಗಳು ಮತ್ತೂ ಏರಿಕೆ

ಆರ್‌ಸಿಬಿ ಮೂರನೇ ಬಾರಿಗೆ 2019ರ ಐಪಿಎಲ್ ಆವೃತ್ತಿಯಲ್ಲಿ ಉದ್ಘಾಟನಾ ಪಂದ್ಯದಲ್ಲಿ ಆಡಿತ್ತು. ಈ ಬಾರಿ ಆರ್‌ಸಿಬಿಗೆ ಎದುರಾಳಿಗಿದ್ದ ತಂಡ ಚೆನ್ನೈ ಸೂಪರ್ ಕಿಂಗ್ಸ್. ಈ ಪಂದ್ಯದಲ್ಲಿ ಆರ್‌ಸಿಬಿ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡಿ ಎದುರಾಳಿ ಸಿಎಸ್‌ಕೆಗೆ ಕೇವಲ 71 ರನ್‌ಗಳ ಗುರಿಯನ್ನು ನೀಡಿತ್ತು. ಇದನ್ನು 14 ಎಸೆತಗಳು ಉಳಿದಿರುವಂತೆಯೇ ಕೇವಲ 3 ವಿಕೆಟ್ ಕಳೆದುಕೊಂಡು ಸಿಎಸ್‌ಕೆ ಗೆದ್ದು ಬೀಗಿತ್ತು. ಈ ಮೂಲಕ ಮೂರನೇ ಬಾರಿಗೆ ಆರ್‌ಸಿಬಿ ಉದ್ಘಾಟನಾ ಪಂದ್ಯದಲ್ಲಿ ಸೋಲು ಕಂಡಿತು.

Story first published: Wednesday, April 7, 2021, 9:48 [IST]
Other articles published on Apr 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X