ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಮೊದಲ ಪಂದ್ಯಕ್ಕೆ ಆರ್‌ಸಿಬಿ ತಂಡದ ಸಂಭಾವ್ಯ ಆಡುವ ಬಳಗ ಹೀಗಿದೆ!

IPL 2021: Royal Challengers Bangalore probable playing XI for first match of UAE leg

ಪಿಎಲ್ ಎರಡನೇ ಚರಣದ ಸೆಣೆಸಾಟಕ್ಕೆ ಎಲ್ಲಾ ತಂಡಗಳು ಕೂಡ ಸಜ್ಜಾಗಿದೆ. ಈ ಬಾರಿಯ ಐಪಿಎಲ್‌ನಲ್ಲಿ ಆರಂಭದಿಂದಲೂ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡ ಅದ್ಭುತ ಪ್ರದರ್ಶನ ನೀಡುತ್ತಿದ್ದು ಎರಡನೇ ಚರಣದಲ್ಲಿಯೂ ಈ ಪ್ರದರ್ಶನವನ್ನು ಮುಂದುವರಿಸುವ ನಿರೀಕ್ಷೆಯಿದೆ. ತಂಡದಲ್ಲಿ ಕೆಲ ಆಟಗಾರರು ಬದಲಾವಣೆಯಾಗಿದ್ದು ಯಾರೆಲ್ಲಾ ಆಡುವ ಬಳಗದಲ್ಲಿ ಅವಕಾಶವನ್ನು ಪಡೆಯಲಿದ್ದಾರೆ ಎಂಬುದು ಕೂಡ ಕುತೂಹಲ ಮೂಡಿಸಿದೆ.

ಐಪಿಎಲ್ 14ನೇ ಆವೃತ್ತಿಯ ಎರಡನೇ ಚರಣದ ಪಂದ್ಯಗಳನ್ನು ಆರ್‌ಸಿಬಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ಮೂಲಕ ಆರಂಭಿಸಲಿದೆ. ಸೆಪ್ಟೆಂಬರ್ 20 ಸೋಮವಾರದಂದು ಈ ಮುಖಾಮುಖಿ ನಡೆಯಲಿದ್ದು ವಿರಾಟ್ ಪಡೆ ಗೆದ್ದು ಟೂರ್ನಿಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಉತ್ತಮ ಪಡಿಸಿಕೊಳ್ಳಲು ಪ್ರಯತ್ನ ನಡೆಸಲಿದೆ. ಹಾಗಾದರೆ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಬಹುದಾದ ಆರ್‌ಸಿಬಿ ತಂಡದ ಆಡುವ ಬಳಗದ ಹೇಗಿರಬಹುದು? ಮುಂದೆ ಓದಿ

ಟಿ20 ವಿಶ್ವಕಪ್‌ ಸೋತ್ರೆ ಏಕದಿನ ನಾಯಕತ್ವವೂ ತ್ಯಜಿಸುತ್ತಾರಾ ವಿರಾಟ್ ಕೊಹ್ಲಿ!?ಟಿ20 ವಿಶ್ವಕಪ್‌ ಸೋತ್ರೆ ಏಕದಿನ ನಾಯಕತ್ವವೂ ತ್ಯಜಿಸುತ್ತಾರಾ ವಿರಾಟ್ ಕೊಹ್ಲಿ!?

ಆರಂಭಿಕರಾಗಿ ವಿರಾಟ್ ಕೊಹ್ಲಿ- ದೇವದತ್ ಪಡಿಕ್ಕಲ್

ಆರಂಭಿಕರಾಗಿ ವಿರಾಟ್ ಕೊಹ್ಲಿ- ದೇವದತ್ ಪಡಿಕ್ಕಲ್

ಈ ಬಾರಿಯ ಐಪಿಎಲ್‌ನ ಮೊದಲ ಚರಣದ ಪಂದ್ಯಗಳಲ್ಲಿ ಆರಂಬಿಕರಾಗಿ ಕಣಕ್ಕಿಳಿದ ನಾಯಕ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಜೊಡಿ ಅಮೋಘ ಪ್ರದರ್ಶನ ನೀಡಿದೆ. ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ. ಇನ್ನು ಯುವ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಐಪಿಎಲ್ ಮೊದಲ ಹಂತದಲ್ಲಿ ತಮ್ಮ ಚೊಚ್ಚಲ ಐಪಿಎಲ್ ಶತಕವನ್ನು ಕೂಡ ಬಾರಿಸಿ ಮಿಂಚಿದ್ದಾರೆ. ಕಳೆದ ಜುಲೈನಲ್ಲಿ ಶ್ರೀಲಂಕಾದಲ್ಲಿ ನಡೆದ ಸೀಮಿತ ಓವರ್‌ಗಳ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕೂಡ ಪದಾರ್ಪಣೆ ಮಾಡಿಉವ ಪಡಿಕ್ಕಲ್ ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಪಾಟಿದಾರ್, ಮ್ಯಾಕ್ಸ್‌ವೆಲ್ ಡಿವಿಲಿಯರ್ಸ್

ಮಧ್ಯಮ ಕ್ರಮಾಂಕದಲ್ಲಿ ಪಾಟಿದಾರ್, ಮ್ಯಾಕ್ಸ್‌ವೆಲ್ ಡಿವಿಲಿಯರ್ಸ್

ಈ ಬಾರಿಯ ಐಪಿಎಲ್‌ನ ಮೊದಲ ಹಂತದಲ್ಲಿ ರಜತ್ ಪಾಟಿದಾರ್ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಮಿಂಚಿದ್ದಾರೆ. ಈ ಮೂಲಕ ಮೂರನೇ ಕ್ರಮಾಂಕದ ಆಟಗಾರನಾಗಿ ಈ ಯುವ ಆಟಗಾರ ಮುಂದುವರಿಯುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ಆರ್‌ಸಿಬಿಯ ನಾಲ್ಕನೇ ಹಾಗೂ ಐದನೇ ಕ್ರಮಾಂಕದಲ್ಲಿ ಆಸ್ಟ್ರೇಲಿಯಾದ ಮ್ಯಾಕ್ಸ್‌ವೆಲ್ ಹಾಗೂ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಕಣಕ್ಕಿಳಿಯಲಿದ್ದಾರೆ. ಆರ್‌ಸಿಬಿಯ ಈ ಇಬ್ಬರು ಆಟಗಾರರು ಸ್ಪೋಟಕ ಪ್ರದರ್ಶನ ನೀಡುವ ಮೂಲಕ ಪಂದ್ಯದ ಫಲಿತಾಂಶವನ್ನು ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಮೊದಲ ಹಂತದಲ್ಲಿ ಈ ಇಬ್ಬರು ಆಟಗಾರರು ಕೂಡ ಅಮೋಘ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಭರವಸೆ ಮೂಡಿಸಿದ್ದಾರೆ.

ಆಲ್ ರೌಂಡರ್‌ಗಳಾಗಿ ಶಹಬಾಜ್ ಅಹ್ಮದ್, ವನಿಂದು ಹಸರಂಗ ಮತ್ತು ಕೈಲ್ ಜೇಮೀಸನ್

ಆಲ್ ರೌಂಡರ್‌ಗಳಾಗಿ ಶಹಬಾಜ್ ಅಹ್ಮದ್, ವನಿಂದು ಹಸರಂಗ ಮತ್ತು ಕೈಲ್ ಜೇಮೀಸನ್

ವನಿಂದು ಹಸರಂಗ ಸೆಪ್ಟೆಂಬರ್ 20ರಂದು ನಡೆಯುವ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಐಪಿಎಲ್‌ಗೆ ಪದಾರ್ಪನೆ ಮಾಡುವ ಸಾಧ್ಯತೆಯಿದೆ. ಶಹಾಬಾಜ್ ಅಹ್ಮದ್ ಮತ್ತು ಕೈಲ್ ಜೇಮೀಸನ್ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಮತ್ತಿಬ್ಬರು ಆಲ್‌ರೌಂಡರ್‌ಗಳಾಗಲಿದ್ದಾರೆ. ಮೊದಲ ಹಂತದಲ್ಲಿ ಶಹಬಾಜ್ ಐದು ಪಂದ್ಯಗಳಲ್ಲಿ ನಾಲ್ಕು ವಿಕೆಟ್ ಮತ್ತು 23 ರನ್ ಗಳಿಸಿದರೆ, ಜೇಮೀಸನ್ ಏಳು ಪಂದ್ಯಗಳಲ್ಲಿ ಒಂಬತ್ತು ವಿಕೆಟ್ ಪಡೆದಿದ್ದರು.

ಬೌಲರ್‌ಗಳು - ಹರ್ಷಲ್ ಪಟೇಲ್, ಸಿರಾಜ್ ಮತ್ತು ಚಾಹಲ್

ಬೌಲರ್‌ಗಳು - ಹರ್ಷಲ್ ಪಟೇಲ್, ಸಿರಾಜ್ ಮತ್ತು ಚಾಹಲ್

ಈ ಬಾರಿಯ ಐಪಿಎಲ್‌ನ ಮೊದಲ ಚರನದ ಪಂದ್ಯಗಳಲ್ಲಿ ಆರ್‌ಸಿಬಿ ತಂಡದ ವೇಗಿಗಳಾದ ಹರ್ಷಲ್ ಪಟೇಲ್ ಮತ್ತು ಮೊಹಮ್ಮದ್ ಸಿರಾಜ್ ಅಮೋಘ ಪ್ರದರ್ಶನ ನೀಡಿದ್ದರು. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಪ್ಲೇಯಿಂಗ್ ಇಲೆವೆನ್‌ನಲ್ಲಿ ಈ ಇಬ್ಬರು ವೇಗಿಗಳು ಮುಂದುವರಿಯಲಿದ್ದಾರೆ. ಇನ್ನು ಈ ಬಾರಿಯ ವಿರ್ಶವಕಪ್‌ಗೆ ಆಯ್ಕೆಯಾಗದ ಯುಜುವೇಂದ್ರ ಚಾಹಲ್ ಆಯ್ಕೆಗಾರರಿಗೆ ನಿಮ್ಮ ನಿರ್ಧಾರ ತಪ್ಪು ಎಂಬ ಸಂದೇಶ ನೀಡಲು ಉತ್ತಮ ಅವಕಾಶ ಇದಾಗಿದ್ದು ಯುಎಇನಲ್ಲಿ ಈ ಅವಕಾಶವನ್ನು ಅವರು ಸದುಪಯೋಗಪಡಿಸಿಕೊಳ್ಳುವ ವಿಶ್ವಾಸವಿದೆ. ಆರ್‌ಸಿಬಿಯ ಸ್ಪಿನ್ ವಿಭಾಗದಲ್ಲಿ ಚಾಹಲ್ ಹಾಗೂ ಹಸರಂಗ ಜೋಡಿ ಎದುರಾಳಿಗಳಿಗೆ ಅಪಾಯಕಾರಿಯಾಗಬಲ್ಲದು.

ನಾಯಕತ್ವದ ವಿಚಾರದಲ್ಲಿ KL ರಾಹುಲ್ ಗೆ ಮಣೆ ಹಾಕುತ್ತಾ BCCI? | Oneindia Kannada
ಆರ್‌ಸಿಬಿಯ ಸಂಭಾವ್ಯ ಆಡುವ ಬಳಗ

ಆರ್‌ಸಿಬಿಯ ಸಂಭಾವ್ಯ ಆಡುವ ಬಳಗ

ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ (ನಾಯಕ), ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್ ವೆಲ್, ಎಬಿ ಡಿ ವಿಲಿಯರ್ಸ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ವಾನಿಂದು ಹಸರಂಗ, ಕೈಲ್ ಜೇಮೀಸನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್.

Story first published: Saturday, September 18, 2021, 12:15 [IST]
Other articles published on Sep 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X