ಪಡಿಕ್ಕಲ್ ಶತಕ, ಕೊಹ್ಲಿ ಅರ್ಧ ಶತಕ, ಆರ್‌ಸಿಬಿಗೆ ರಾಜಸ್ಥಾನ್ ವಿರುದ್ಧ 10 ವಿಕೆಟ್‌ಗಳ ಗೆಲುವು

ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನ ಓಟ ಮುಂದುವರಿದಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯವನ್ನು ವಿಕೆಟ್ ಕಳೆದುಕೊಳ್ಳದೆಯೇ ಮೀರಿನಿಂತ ವಿರಾಟ್ ಕೊಹ್ಲಿ ಪಡೆ ಸತತ ನಾಲ್ಕನೇ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ.

ರಾಜಸ್ಥಾನ್ ರಾಯಲ್ಸ್ ತಂಡ ನೀಡಿದ 178 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಆರಂಭದಿಂದಲೇ ಅಬ್ಬರಿಸುತ್ತಾ ಸಾಗಿತು. ಯಾವ ಹಂತದಲ್ಲೂ ಆರ್‌ಸಿಬಿ ಆರಂಭಿಕರನ್ನು ಸಂಕಷ್ಟಕ್ಕೆ ಸಿಲುಕಿಸುವಲ್ಲಿ ಆರ್‌ಆರ್ ಬೌಲರ್‌ಗಳು ಯಶಸ್ವಿಯಾಗಲೇ ಇಲ್ಲ. ಹೀಗಾಗಿ ಇನ್ನೂ 21 ಎಸೆತಗಳು ಬಾಕಿಯಿರುವಂತೆಯೇ ಆರ್‌ಸಿಬಿ ಸುಲಭವಾಗಿ ಗೆಲುವು ಸಾಧಿಸಿದೆ.

ಐಪಿಎಲ್‌ನಲ್ಲಿ 6000 ರನ್‌ ಬಾರಿಸಿದ ಮೊದಲ ಆಟಗಾರ ಎನಿಸಿದ ಕೊಹ್ಲಿಐಪಿಎಲ್‌ನಲ್ಲಿ 6000 ರನ್‌ ಬಾರಿಸಿದ ಮೊದಲ ಆಟಗಾರ ಎನಿಸಿದ ಕೊಹ್ಲಿ

ಪಡಿಕ್ಕಲ್ ಸ್ಪೋಟಕ ಆಟ

ಪಡಿಕ್ಕಲ್ ಸ್ಪೋಟಕ ಆಟ

ಈ ಬಾರಿಯ ಆವೃತ್ತಿಯಲ್ಲಿ ಸ್ವಲ್ಪ ಮಂಕಾದಂತೆ ಕಂಡು ಬಂದಿದ್ದ ದೇವದತ್ ಪಡಿಕ್ಕಲ್ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ತಮ್ಮ ಸಹಜ ಆಟವನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾದರು. 52 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ 101 ರನ್ ಬಾರಿಸಿ ಐಪಿಎಲ್‌ನಲ್ಲಿ ತಮ್ಮ ಚೊಚ್ಚಲ ಶತಕವನ್ನು ಬಾರಿಸಿದರು. ಈ ಸುಂದರ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಹಾಗೂ 6 ಸಿಕ್ಸರ್ ಒಳಗೊಂಡಿತ್ತು.

ನಾಯಕನ ಆಟವಾಡಿದ ಕೊಹ್ಲಿ

ನಾಯಕನ ಆಟವಾಡಿದ ಕೊಹ್ಲಿ

ಇನ್ನು ನಾಯಕ ವಿರಾಟ್ ಕೊಹ್ಲಿ ಆರಂಭದಲ್ಲಿ ನಿಧಾನವಾಗಿ ಆಡುತ್ತಾ ದೇವದತ್ ಪಡಿಕ್ಕಲ್ ಜೊತೆಗೆ ಇನ್ನಿಂಗ್ಸ್ ಕಟ್ಟಿದರು. ನಂತರ ರನ್‌ಗಳಿಸುವ ವೇಗವನ್ನು ಹೆಚ್ಚಿಸಿಕೊಳ್ಳುವ ಮೂಲಕ ರಂಗು ತುಂಬಿದರು. 47 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ 72 ರನ್‌ಗಳಿಸಿದರು. ಇದರಲ್ಲಿ ಆರು ಬೌಂಡರಿ ಹಾಗೂ 3 ಸಿಕ್ಸರ್ ಒಳಗೊಂಡಿತ್ತು.

6000 ರನ್ ಸರದಾರ ಕೊಹ್ಲಿ

6000 ರನ್ ಸರದಾರ ಕೊಹ್ಲಿ

ಇನ್ನು ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಐಪಿಎಲ್‌ನ ಅತ್ಯಂತ ಮಹತ್ವದ ಮೈಲಿಗಲ್ಲೊಂದನ್ನು ಸಾಧಿಸಿದ್ದಾರೆ. ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ 6000ರನ್‌ಗಳಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ವೈಯಕ್ತಿಕ ಮೊತ್ತ 51 ರನ್‌ಗಳಿಸಿದ್ದ ವೇಳೆ ಈ ಮೈಲಿಗಲ್ಲನ್ನು ಕೊಹ್ಲಿ ದಾಟಿದರು.

10 ವಿಕೆಟ್‌ಗಳ ಗೆಲುವು

10 ವಿಕೆಟ್‌ಗಳ ಗೆಲುವು

ಆರ್‌ಸಿಬಿ ಆರಂಭಿಕರ ಈ ಅಜೇಯ ಜೊತೆಯಾಟದಿಂದಾಗಿ ಸುಲಭವಾಗಿ ವಿರಾಟ್ ಪಡೆ ಗೆಲುವು ಸಾಧಿಸಿದೆ. ರಾಜಸ್ಥಾನ್ ರಾಯಲ್ಸ್ ನೀಡಿದ್ದ 178 ರನ್‌ಗಳ ಗುರಿಯನ್ನು ವಿರಾಟ್ ಪಡೆ 16.3 ಓವರ್‌ಗಳಲ್ಲಿ ತಲುಪುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಟೂರ್ನಿಯಲ್ಲಿ ನಾಲ್ಕನೇ ಗೆಲುವು ಸಾಧಿಸಿದೆ.

178 ರನ್‌ಗಳ ಸವಾಲು ನೀಡಿದ್ದ ಆರ್‌ಆರ್

178 ರನ್‌ಗಳ ಸವಾಲು ನೀಡಿದ್ದ ಆರ್‌ಆರ್

ಇದಕ್ಕೂ ಮುನ್ನ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್‌ಗೆ ಇಳಿದ ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್‌ಗಳಲ್ಲಿ 177 ರನ್‌ಗಳನ್ನು ಗಳಿಸಿತು. ಆರಂಭದಲ್ಲಿ ದೊಡ್ಡ ಕುಸಿತವನ್ನು ಕಂಡ ಸ್ಯಾಮ್ಸನ್ ಬಳಗ ಬಳಿಕ ಚೇತರಿಕೆಯನ್ನು ಕಾಣುವಲ್ಲಿ ಯಶಸ್ವಿಯಾಗಿದ್ದಲ್ಲದೆ ಸವಾಲಿನ ಮೊತ್ತವನ್ನು ಪೇರಿಸಿತು.

For Quick Alerts
ALLOW NOTIFICATIONS
For Daily Alerts
Story first published: Thursday, April 22, 2021, 23:05 [IST]
Other articles published on Apr 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X