ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

10-20 ರನ್‌ಗಳು ಕೊರತೆಯಾಯಿತು: ಹೈದರಾಬಾದ್ ವಿರುದ್ಧ ಸೋಲಿನ ಬಳಿಕ ಸಂಜು ಸ್ಯಾಮ್ಸನ್ ಪ್ರತಿಕ್ರಿಯೆ

IPL 2021: RR captain Samson said We could have got 10 or 20 more runs

ಸನ್‌ರೈಸರ್ಸ್ ಹೈದರಾಬಾದ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದ ಬಳಿಕ ಸೋಲಿನ ಬಗ್ಗೆ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಪ್ತತಿಕ್ರಿಯಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡ ಈ ಪಂದ್ಯದಲ್ಲಿ 10-20 ರನ್‌ಗಳ ಕೊರತೆಯನ್ನು ಅನುಭವಿಸಿತು ಎಂದು ಹೇಳಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಸಂಜು ಸ್ಯಾಮ್ಸನ್ ಮೊದಲಿಗೆ ಬ್ಯಾಟಿಂಗ್ ಆಯ್ದುಕೊಂಡಿತ್ತು. ಈ ಸಂದರ್ಭದಲ್ಲಿ ಸಂಜು ಸ್ಯಾಮ್ಸನ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ತಂಡಕ್ಕೆ ನೆರವಾಗಿದ್ದರು. ಆದರೆ ಸಂಜು ನಡೆಸಿದ ಈ ಹೋರಾಟ್ ವ್ಯರ್ಥವಾಗಿದೆ.

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ 57 ಎಸೆತಗಳನ್ನು ಎದುರಿಸಿ 82 ರನ್‌ಗಳಿಸಿದರು. ಇದರಲ್ಲಿ ಏಳು ಬೌಂಡರಿ ಹಾಗೂ 3 ಸಿಕ್ಸರ್ ಸೇರಿತ್ತು. 143.86ರ ಸ್ಟ್ರೈಕ್‌ರೇಟ್‌ನಲ್ಲಿ ಸಂಜು ಬ್ಯಾಟ್ ಬೀಸಿದ್ದಾರೆ. ಪ್ರಾರಂಭದಲ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್ ನಡೆಸಿದ ಸಂಜು ಬಳಿಕ ತಮ್ಮ ರನ್ ವೇಗವನ್ನು ಹೆಚ್ಚಿಸಿದರು. ಉಳಿದಂತೆ 36 ರನ್‌ಗಳನ್ನು ಗಳಿದರೆ ಲಾಮ್ರರ್ 29 ರನ್ ಗಳಿಸಿದರು. ಉಳಿದ ಯಾವ ಬ್ಯಾಟ್ಸ್‌ಮನ್ ಕೀಡ ಮಿಂಚುವಲ್ಲಿ ವಿಫಲವಾಗಿದ್ದಾರೆ. ಅಂತಿಮವಾಗಿ ಐದು ವಿಕೆಟ್ ಕಳೆದುಕೊಂಡು ಸಂಜು ಸ್ಯಾಮ್ಸನ್ ಪಡೆ 164 ರನ್‌ಗಳಿಸಿತು.

ರೈನಾ ಹೊರಗಿಟ್ಟು ಈತನನ್ನೇ ಪ್ರಮುಖ ಬ್ಯಾಟರ್ ಆಗಿ ಕಣಕ್ಕಿಳಿಸಿ: ಮಂಜ್ರೇಕರ್ ಹೇಳಿದ ಅಚ್ಚರಿಯ ಹೆಸರು!ರೈನಾ ಹೊರಗಿಟ್ಟು ಈತನನ್ನೇ ಪ್ರಮುಖ ಬ್ಯಾಟರ್ ಆಗಿ ಕಣಕ್ಕಿಳಿಸಿ: ಮಂಜ್ರೇಕರ್ ಹೇಳಿದ ಅಚ್ಚರಿಯ ಹೆಸರು!

ಈ ಸ್ಕೋರ್ ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಐಪಿಎಲ್‌ನಲ್ಲಿ ಚೊಚ್ಚಲ ಪಂದ್ಯವನ್ನಾಡಿದ ಜೇಸನ್ ರಾಯ್ ಅವರಿಂದ ಅದ್ಭುತ ಪ್ರದರ್ಶನ ಬಂದಿತ್ತು. ಜೇಸನ್ ರಾಯ್ ಈ ಪಂದ್ಯದಲ್ಲಿ 42 ಎಸೆತಗಳನ್ನು ಎದುರಿಸಿ 60 ರನ್ ಬಾರಿಸಿದ್ದಾರೆ. ನಂತರ ನಾಯಕ ಕೇನ್ ವಿಲಿಯಮ್ಸನ್ ಕೂಡ ಅರ್ಧ ಶತಕವನ್ನು ದಾಖಲಿಸಿ ತಂಡಕ್ಕೆ ಜಯವನ್ನು ತಂದಿತ್ತರು.

ಈ ಸೋಲಿನ ನಂತರ ಸಂಜು ಸ್ಯಾಮ್ಸನ್ ಮಾತನಾಡಿದ್ದಾರೆ. "ನನ್ನ ಪ್ರಕಾರ ನಾವು ಡೀಸೆಂಟ್ ಸ್ಕೋರ್ ಗಳಿಸಿದ್ದೇವೆ. ಪಿಚ್ ಸ್ವಲ್ಪ ಕಠಿಣವಾಗಿತ್ತು. ಎದುರಾಳಿಗಳು ಅದ್ಭುತವಾಗಿ ಬೌಲಿಂಗ್ ಪ್ರದರ್ಶನ ನೀಡಿದರು. ನಾವು ಇನ್ನೂ 10-20 ರನ್‌ಗಳನ್ನು ಹೆಚ್ಚಿಗೆ ಗಳಿಸಬೇಕಾಗಿತ್ತು" ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.

ಈ ಕೆಲಸ ಮಾಡಿದ್ರೆ ಧೋನಿ ಕಳಪೆ ಫಾರ್ಮ್‌ನಿಂದ ಹೊರಬಂದು ಹೆಚ್ಚು ರನ್ ಗಳಿಸಬಹುದು: ಗಂಭೀರ್ಈ ಕೆಲಸ ಮಾಡಿದ್ರೆ ಧೋನಿ ಕಳಪೆ ಫಾರ್ಮ್‌ನಿಂದ ಹೊರಬಂದು ಹೆಚ್ಚು ರನ್ ಗಳಿಸಬಹುದು: ಗಂಭೀರ್

"ಇಂತಾ ಪಿಚ್‌ಗಳಲ್ಲಿ ಒಮ್ಮೆ ನೀವು ಉತ್ತಮ ಆರಂಭವನ್ನು ಪಡೆದ ನಂತರ ನಿಮ್ಮ ಪ್ರದರ್ಶನವನ್ನು ಮುಂದುವರಿಸಬೇಕು. ನಾನು ಪವರ್‌ಪ್ಲೇ ನಂತರ ಮುನ್ನುಗ್ಗಿ ಬಾರಿಸಲು ಬಯಸಿದ್ದೆ. ಆದರೆ ನಾವು ವಿಕೆಟ್ ಕಳೆದುಕೊಳ್ಳಲು ಆರಂಬಿಸಿದ್ದೆವು. ಹೀಗಾಗಿ ಒಳ್ಳೆಯ ಜೊತೆಗಾರಿಕೆ ಬೇಕೆಂದು ಬಯಸಿದ್ದೆ" ಎಂದಿದ್ದಾರೆ ಸಂಜು ಸ್ಯಾಮ್ಸನ್.

ರಾಜಸ್ಥಾನ್ ರಾಯಲ್ಸ್ ಆಡುವ ಬಳಗ:
ಯಶಸ್ವಿ ಜೈಸ್ವಾಲ್, ಎವಿನ್ ಲೂಯಿಸ್, ಸಂಜು ಸ್ಯಾಮ್ಸನ್ (ನಾಯಕ & ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್, ಮಹಿಪಾಲ್ ಲೊಮರ್, ರಾಹುಲ್ ತೆವಾಟಿಯಾ, ರಿಯಾನ್ ಪರಾಗ್, ಕ್ರಿಸ್ ಮೋರಿಸ್, ಚೇತನ್ ಸಕಾರಿಯಾ, ಜಯದೇವ್ ಉನಾದ್ಕಟ್, ಮುಸ್ತಫಿಜುರ್ ರೆಹಮಾನ್
ಬೆಂಚ್: ಕಾರ್ತಿಕ್ ತ್ಯಾಗಿ, ಶ್ರೇಯಸ್ ಗೋಪಾಲ್, ಮನನ್ ವೊಹ್ರಾ, ಗ್ಲೆನ್ ಫಿಲಿಪ್ಸ್, ಕೆಸಿ ಕರಿಯಪ್ಪ, ಶಿವಂ ದುಬೆ, ಓಶಾನೆ ಥಾಮಸ್, ಮಯಾಂಕ್ ಮಾರ್ಕಂಡೆ, ಅನುಜ್ ರಾವತ್, ಜೆರಾಲ್ಡ್ ಕೋಟ್ಜಿ, ಕುಲ್ದಿಪ್ ಯಾದವ್, ಆಕಾಶ್ ಸಿಂಗ್, ತಬ್ರೇಜ್ ಶಮ್ಸಿ, ಡೇವಿಡ್ ಮಿಲ್ಲರ್

ಮಾಡು ಇಲ್ಲವೇ ಮಡಿ ಪಂದ್ಯ ಇದು | Oneindia Kannada

ಸನ್‌ರೈಸರ್ಸ್ ಹೈದರಾಬಾದ್ ಆಡುವ ಬಳಗ:
ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಜೇಸನ್ ರಾಯ್, ಕೇನ್ ವಿಲಿಯಮ್ಸನ್ (ನಾಯಕ), ಪ್ರಿಯಂ ಗರ್ಗ್, ಅಭಿಷೇಕ್ ಶರ್ಮಾ, ಜೇಸನ್ ಹೋಲ್ಡರ್, ಅಬ್ದುಲ್ ಸಮದ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ದಾರ್ಥ್ ಕೌಲ್, ಸಂದೀಪ್ ಶರ್ಮಾ
ಬೆಂಚ್: ಡೇವಿಡ್ ವಾರ್ನರ್, ಖಲೀಲ್ ಅಹ್ಮದ್, ಕೇದಾರ್ ಜಾಧವ್, ಶಹಬಾಜ್ ನದೀಮ್, ಶ್ರೀವಾತ್ ಗೋಸ್ವಾಮಿ, ಮುಜೀಬ್ ಉರ್ ರಹಮಾನ್, ಮೊಹಮ್ಮದ್ ನಬಿ, ವಿರಾಟ್ ಸಿಂಗ್, ತುಳಸಿ ತಂಪಿ, ಜಗದೀಶ ಸುಚಿತ್, ಉಮ್ರಾನ್ ಮಲಿಕ್, ಮನೀಶ್ ಪಾಂಡೆ

Story first published: Tuesday, September 28, 2021, 10:13 [IST]
Other articles published on Sep 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X