ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಆರ್‌ಸಿಬಿ vs ಸಿಎಸ್‌ಕೆ ಪಂದ್ಯದಲ್ಲಿ ಗೆಲುವು ಇವರದ್ದೇ: ಸಂಜಯ್ ಮಂಜ್ರೇಕರ್

IPL 2021, Sanjay manjrekar predicts winner of match between CSK and RCB

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯವೆಂದರೆ ಅದು ಅಭಿಮಾನಿಗಳ ಪಾಲಿಗೆ ಹಬ್ಬ. ಎರಡು ತಂಡಗಳ ಅಭಿಮಾನಿಗಳು ಕೂಡ ಈ ತಂಡಗಳ ಮುಖಾಮುಖಿಗಾಗಿ ಎದುರು ನೋಡುತ್ತಿರುತ್ತಾರೆ. ಯಾರು ಗೆಲ್ಲುತ್ತಾರೆ ಯಾರು ಸೋಲುತ್ತಾರೆ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇರುತ್ತದೆ.

ಈ ಎರಡು ಬಲಿಷ್ಠ ತಂಡಗಳು ಈ ಬಾರಿಯ ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿಕೊಂಡು ಬಂದಿದೆ. ಆರ್‌ಸಿಬಿ ಎರಡನೇ ಚರಣದ ಮೊದಲ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಹೀನಾಯ ಪ್ರದರ್ಶನ ನೀಡಿದ್ದು ಹೊರತುಪಡಿಸಿದರೆ ಆರ್‌ಸಿಬಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಮತ್ತೊಂದೆಡೆ ಸಿಎಸ್‌ಕೆ ಈ ಬಾರಿ ಗೆಲುವಿನ ಮೇಲೆ ಗೆಲುವು ಸಾಧಿಸುತ್ತಾ ಬಂದಿದ್ದು ಪ್ಲೇಆಫ್‌ಗೆ ಮತ್ತಷ್ಟು ಹತ್ತಿರವಾಗಿದೆ.

ಕೊಹ್ಲಿ, ಗೇಲ್, ಎಬಿಡಿಗಿಂತ ಈತ ಐಪಿಎಲ್‌ನಲ್ಲಿ ಡೇಂಜರಸ್ ಆಟಗಾರ ಎಂದ ಗೌತಮ್ ಗಂಭೀರ್ಕೊಹ್ಲಿ, ಗೇಲ್, ಎಬಿಡಿಗಿಂತ ಈತ ಐಪಿಎಲ್‌ನಲ್ಲಿ ಡೇಂಜರಸ್ ಆಟಗಾರ ಎಂದ ಗೌತಮ್ ಗಂಭೀರ್

ಇಂತಾ ಸಂದರ್ಭದಲ್ಲಿ ಆರ್‌ಸಿಬಿ ಹಾಗೂ ಸಿಎಸ್‌ಕೆ ತಂಡಗಳ ನಡುವಿನ ಹಣಾಹಣಿಯಲ್ಲಿ ಯಾವ ತಂಡ ಗೆಲ್ಲಬಹುದು ಎಂಬ ವಿಚಾರವಾಗಿ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಪ್ರತಿಕ್ರಿಯಿಸಿದ್ದಾರೆ. ಮಂಜ್ರೇಕರ್ ಪ್ರಕಾರ ಈ ಕುತೂಹಲಕಾರಿ ಕದನದಲ್ಲಿ ಗೆಲ್ಲೋರ್ಯಾರು? ಮುಂದೆ ಓದಿ..

ಸಿಎಸ್‌ಕೆಗೆ ಗೆಲ್ಲುವ ಅವಕಾಶ ಎಂದ ಮಂಜ್ರೇಕರ್: ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಈ ಸೆಣೆಸಾಟದಲ್ಲಿ ಧೋನಿ ನೇತೃತ್ವದ ತಂಡಕ್ಕೆ ಗೆಲ್ಲುವ ಅವಕಾಶ ಹೆಚ್ಚಿದೆ ಎಂದು ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ. ಇತಿಹಾಸದಲ್ಲಿಯೂ ಆರ್‌ಸಿಬಿ ವಿರುದ್ಧ ಸಿಎಸ್‌ಕೆ ಉತ್ತಮ ದಾಖಲೆ ಹಿಂದಿದ್ದು ಈ ಪಂದ್ಯದಲ್ಲಿಯೂ ಅದೇ ಫಲಿತಾಂಶ ಬರುವ ನಿರೀಕ್ಷೆ ವ್ಯಕ್ತೊಡಿಸಿದ್ದಾರೆ ಮಂಜ್ರೇಕರ್.

ಐಪಿಎಲ್: ಮಹೇಂದ್ರ ಸಿಂಗ್ ಧೋನಿ ದಾಖಲೆ ಮುರಿದ ದಿನೇಶ್ ಕಾರ್ತಿಕ್ಐಪಿಎಲ್: ಮಹೇಂದ್ರ ಸಿಂಗ್ ಧೋನಿ ದಾಖಲೆ ಮುರಿದ ದಿನೇಶ್ ಕಾರ್ತಿಕ್

ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಪಂದ್ಯದಲ್ಲಿ ಎರಡು ತಂಡಗಳ ನಾಯಕರಾದ ವಿರಾಟ್ ಕೊಹ್ಲಿ ಹಾಗೂ ಎಂಎಸ್ ಧೋನಿ ಆಟವನ್ನು ಕಣ್ತಿಂಬಿಕೊಳ್ಳಲು ಎರಡು ತಂಡಗಳ ಅಭಿಮಾನಿಗಳು ಕಾಯುತ್ತಿರುತ್ತಾರೆ. ಪರಿಸ್ಪರ ತಂಡಗಳ ಮೇಲುಗೈ ಸಾಧಿಸಲು ಎರಡು ತಂಡಗಳು ಕೂಡ ಹವಣಿಸುತ್ತಿದೆ. ಸಿಎಸ್‌ಕೆ ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ ಅಮೋಘ ಗೆಲುವು ಸಾಧಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದರೆ ಆರ್‌ಸಿಬಿ ಮಾತ್ರ ಕೆಕೆಆರ್ ವಿರುದ್ಧ ಆಘಾತಕಾರಿಯಾಗಿ ಸೋತಿದ್ದು ತಂಡ ಮೇಲೆ ಒತ್ತಡ ಹೆಚ್ಚಿದೆ.

ಚೆನ್ನೈ ತಂಡದ ಬಗ್ಗೆ ಮಂಜ್ರೇಜಕರ್ ಪ್ರಶಂಸೆ: ಈ ಸಂದರ್ಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್‌ನ ಬಲವನ್ನು ಮಂಜ್ರೇಕರ್ ಪ್ರಶಂಸಿಸಿದ್ದಾರೆ. ಜೊತೆಗೆ ಬೌಲಿಂಗ್‌ನಲ್ಲಿ ಚೆನ್ನೈ ತಂಡಕ್ಕಿರುವ ಹೆಚ್ಚಿನ ಅವಕಾಶಗಳ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಇದು ಐಪಿಎಲ್‌ನ ಹೈ ಪ್ರೊಫೈಲ್ ಮ್ಯಾಚ್‌ಗಳಲ್ಲಿ ಒಂದಾಗಿದೆ. ಆದರೆ ಆರ್‌ಸಿಬಿ ಈಚೆಗೆ ಸ್ವಲ್ಪ ಕಳೆಗುಂದಿದಂತೆ ಕಂಡುಬರುತ್ತಿದೆ. ಒಟ್ಟಾರೆಯಾಗಿ ನೋಡಿದರೆ ಸಿಎಸ್‌ಕೆ ಆರ್‌ಸಿಬಿ ವಿರುದ್ಧ ಉತ್ತಮ ದಾಖಲೆ ಹೊಂದಿದೆ. ಅವರಲ್ಲಿ ಉತ್ತಮ ಆಟಗಾರರ ತಂಡವಿದೆ. ಉತ್ತಮ ಬ್ಯಾಟ್ಸ್‌ಮನ್‌ಗಳ ಪಡೆಯನ್ನು ಹೊಂದಿರುವ ಸಿಎಸ್‌ಕೆ ಬಳಿ ಬೌಲಿಂಗ್ನಲ್ಲಿಯೂ ಹೆಚ್ಚಿನ ಅವಕಾಶಗಳಿದೆ.

'ದಾಖಲೆ ಮಾಡಿಬಿಟ್ರೆ ಆಗಲ್ಲ, ಪಂದ್ಯದ ದಿನ ಚೆನ್ನಾಗಿ ಆಡಬೇಕು'; ದಾಖಲೆ ಎನ್ನುವವರಿಗೆ ಕುಟುಕಿದ ರೋಹಿತ್'ದಾಖಲೆ ಮಾಡಿಬಿಟ್ರೆ ಆಗಲ್ಲ, ಪಂದ್ಯದ ದಿನ ಚೆನ್ನಾಗಿ ಆಡಬೇಕು'; ದಾಖಲೆ ಎನ್ನುವವರಿಗೆ ಕುಟುಕಿದ ರೋಹಿತ್

ಕೊಹ್ಲಿ, ಎಬಿಡಿ, ಮ್ಯಾಕ್ಸ್‌ವೆಲ್ ಮೇಲೆ ಅವಲಂಬಿತವಾಗಿದೆ ಆರ್‌ಸಿಬಿ: ಇನ್ನು ಮುಂದುವರಿಸುವ ಮಾತನಾಡಿದ ಸಂಜಯ್ ಮಂಜ್ರೇಕರ್ ಈ ಬಾರಿಯ ಐಪಿಎಲ್‌ನಲ್ಲಿಯೂ ಆರ್‌ಸಿಬಿ ತಂಡ ಕೆಲವೇ ಆಟಗಾರರ ಮೇಲೆ ನೆಚ್ಚಿಕೊಳ್ಳುವುದನ್ನು ಮುಂದುವರಿಸಿದೆ ಎಂದಿದ್ದಾರೆ. ಆರ್‌ಸಿಬಿ ತಮಡದ ನಾಯಕ ವಿರಾಟ್ ಕೊಹ್ಲಿ, ಎಬಿ ಡಿವಲಿಯರ್ಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಮೇಲೆ ಆರ್‌ಸಿಬಿ ಅವಲಂಬಿತವಾಗಿದೆ ಎಂದಿದ್ದಾರೆ. ಆದರೆ ಸಿಎಸ್‌ಕೆ ಯಾವುದೇ ಒಬ್ಬ ಆಟಗಾರನ ಮೇಲೆ ಅವಲಂಬಿತವಾಗಿಲ್ಲ ಎಂಬ ಅಭಿಪ್ರಾಯಪಟ್ಟಿದ್ದಾರೆ.

ಏಕದಿನ ನಾಯಕತ್ವವನ್ನೂ ಬಿಟ್ಟುಕೊಡುವಂತೆ ಕೇಳಿದ್ರು ಶಾಸ್ತ್ರಿ; ಕೋಚ್ ಮಾತಿಗೆ ಕೊಹ್ಲಿ ಹೇಳಿದ್ದಿಷ್ಟುಏಕದಿನ ನಾಯಕತ್ವವನ್ನೂ ಬಿಟ್ಟುಕೊಡುವಂತೆ ಕೇಳಿದ್ರು ಶಾಸ್ತ್ರಿ; ಕೋಚ್ ಮಾತಿಗೆ ಕೊಹ್ಲಿ ಹೇಳಿದ್ದಿಷ್ಟು

ಈ ಪಂದ್ಯದಲ್ಲಿ ಎರಡು ತಂಡಗಳ ಆಟಗಾರರು ಕೂಡ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ತಮ್ಮ ತಂಡ ಮೇಲುಗೈ ಸಾಧಿಸಲು ಎರಡು ತಂಡಗಳ ಆಟಗಾರರು ಕೂಡ ಕಠಿಣ ಸವಾಲೊಡ್ಡಲಿದ್ದಾರೆ. ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆಲುವು ಸಾಧಿಸಿದರೆ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರುವ ಅವಕಾಶವನ್ನು ಹೊಂದಿದೆ. ಸದ್ಯ 14 ಅಂಕಗಳನ್ನು ಹೊಂದಿರುವವ ಡೆಲ್ಲಿ ಅಂಕಪಟ್ಟಿಯ್ಲಲಿ ಮೊದಲ ಸ್ಥಾನದಲ್ಲಿದೆ. ಚೆನ್ನೈ ಬಳಿ 12 ಅಂಕಗಳಿದೆ. ಮತ್ತೊಂದೆಡೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಸದ್ಯ ಮೂರನೇ ಸ್ಥಾನದಲ್ಲಿದ್ದು ಈ ಪಂದ್ಯವನ್ನು ಗೆದ್ದರೆ 12 ಅಂಕಗಳನ್ನು ತನ್ನ ಖಾತೆಗೆ ಸೇರಿಸಿಕೊಳ್ಳಲಿದೆ. ಆದರೆ ಅಂಕಪಟ್ಟಿಯಲ್ಲಿ ಆರ್‌ಸಿಬಿ 3ನೇ ಸ್ಥಾನದಲ್ಲಿಯೇ ಮುಂದುವರಿಯಲಿದೆ. ಯಾಕೆಂದರೆ ರನ್‌ರೇಟ್‌ನಲ್ಲಿ ಆರ್‌ಸಿಬಿ ಸಿಎಸ್‌ಕೆಗಿಂತ ಬಹಳ ಹಿಂದಿದೆ.

RCB vs CSK: ಮುಖಾಮುಖಿ ಪಂದ್ಯಗಳಲ್ಲಿ ಈ ತಂಡ ತುಂಬಾ ಬಲಿಷ್ಠ!RCB vs CSK: ಮುಖಾಮುಖಿ ಪಂದ್ಯಗಳಲ್ಲಿ ಈ ತಂಡ ತುಂಬಾ ಬಲಿಷ್ಠ!

ಆರ್‌ಸಿಬಿ ಸಂಪೂರ್ಣ ಸ್ಕ್ವಾಡ್: ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್, ದೇವದತ್ ಪಡಿಕ್ಕಲ್, ಯುಜುವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ಜಾರ್ಜ್ ಗಾರ್ಟನ್, ಆಕಾಶ್ ದೀಪ್, ಪವನ್ ದೇಶಪಾಂಡೆ, ಟಿಮ್ ಡೇವಿಡ್, ಶಹಬಾಜ್ ಅಹಮದ್, ನವದೀಪ್ ಸೈನಿ, ವನಿಂದು ಹಸರಂಗ, ಕೈಲ್ ಜೇಮಿಸನ್ , ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟಿದಾರ್, ಸಚಿನ್ ಬೇಬಿ, ಮೊಹಮ್ಮದ್ ಅಜರುದ್ದೀನ್, ಡೇನಿಯಲ್ ಕ್ರಿಶ್ಚಿಯನ್, ಕೆಎಸ್ ಭರತ್, ಸುಯಾಶ್ ಪ್ರಭುದೇಸಾಯಿ, ದುಷ್ಮಂತ ಚಮೀರಾ, ಹರ್ಷಲ್ ಪಟೇಲ್

ಸಿಎಸ್‌ಕೆ ಸಂಪೂರ್ಣ ಸ್ಕ್ವಾಡ್: ಮಹೇಂದ್ರ ಸಿಂಗ್ ಧೋನಿ (ನಾಯಕ), ಸುರೇಶ್ ರೈನಾ, ಅಂಬಾಟಿ ರಾಯುಡು, ರಾಬಿನ್ ಉತ್ತಪ್ಪ, ಕೆಎಂ ಆಸಿಫ್, ದೀಪಕ್ ಚಹಾರ್, ಡ್ವೇನ್ ಬ್ರಾವೋ, ಫಾಫ್ ಡು ಪ್ಲೆಸಿಸ್, ಇಮ್ರಾನ್ ತಾಹಿರ್, ಎನ್ ಜಗದೀಸನ್, ಕರ್ಣ್ ಶರ್ಮಾ, ಲುಂಗಿ ಎನ್‌ಗಿಡಿ, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ, ಋತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಸ್ಯಾಮ್ ಕರನ್, ಆರ್ ಸಾಯಿ ಕಿಶೋರ್, ಮೊಯೀನ್ ಅಲಿ, ಕೆ ಗೌತಮ್, ಚೇತೇಶ್ವರ ಪೂಜಾರ, ಹರಿಶಂಕರ್ ರೆಡ್ಡಿ, ಭಗತ್ ವರ್ಮ, ಸಿ ಹರಿ ನಿಶಾಂತ್, ಜೋಶ್ ಹೇಜಲ್‌ವುಡ್.

Story first published: Friday, September 24, 2021, 22:15 [IST]
Other articles published on Sep 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X