ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೋರಿಸ್‌ಗೆ ಸಿಂಗಲ್ ನಿರಾಕರಣೆ ಸಮರ್ಥಿಸಿದ ಸ್ಯಾಮ್ಸನ್: ಇಲ್ಲಿದೆ ಅಸಲಿ ಕಾರಣ!

IPL 2021: Sanju Samson defends not taking a single despite Chris Morris 4 sixes against Delhi Capitals

ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲುವುದರಲ್ಲಿದ್ದ ಪಂದ್ಯವನ್ನು ಗೆಲ್ಲಿಸಿದ ಕೀರ್ತಿ ರಾಜಸ್ಥಾನ್ ರಾಯಲ್ಸ್‌ನ ಡೇವಿಡ್ ಮಿಲ್ಲರ್, ಕ್ರಿಸ್ ಮೋರಿಸ್ ಮತ್ತು ಜಯದೇವ್ ಉನಾದ್ಕತ್‌ಗೆ ಸಲ್ಲುತ್ತದೆ. ಅದರಲ್ಲೂ ದಕ್ಷಿಣ ಆಫ್ರಿಕಾದ ಆಲ್ ರೌಂಡರ್ ಕ್ರಿಸ್ ಮೋರಿಸ್ ಕೊನೇ ಕ್ಷಣದಲ್ಲಿ ಸಿಕ್ಸ್ ಚಚ್ಚಿ ಪಂದ್ಯ ಗೆಲ್ಲಿಸಿದ ಬಳಿಕ ಇದಕ್ಕೂ ಮೊದಲಿನ ಪಂದ್ಯದಲ್ಲಿ ಕ್ರಿಸ್ ಮೋರಿಸ್‌ಗೆ ಸಂಜು ಸ್ಯಾಮ್ಸನ್ ಸಿಂಗಲ್ ನಿರಾಕರಿಸಿದ್ದ ಸಂಗತಿ ಚರ್ಚೆಗೀಡಾಗಿತ್ತು.

ಐಪಿಎಲ್: ಎಬಿಡಿಗಿಂತ ಪಂತ್ ಡೇಂಜರಸ್ ಎನ್ನುತ್ತಿವೆ ಈ ಅಂಕಿಅಂಶ!ಐಪಿಎಲ್: ಎಬಿಡಿಗಿಂತ ಪಂತ್ ಡೇಂಜರಸ್ ಎನ್ನುತ್ತಿವೆ ಈ ಅಂಕಿಅಂಶ!

ಪಂಜಾಬ್ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಕೊನೇ ಓವರ್‌ನಲ್ಲಿ ಕ್ರಿಸ್ ಮೋರಿಸ್ ಸಿಂಗಲ್‌ ತೆಗೆದು ಸ್ಟ್ರೈಕ್‌ ತೆಗೆದುಕೊಳ್ಳಲು ಮುಂದಾಗಿದ್ದರೂ ಸಂಜು ಸ್ಯಾಮ್ಸನ್ ಸಿಂಗಲ್ ನಿರಾಕರಿಸಿ ಸ್ಟ್ರೈಕ್‌ ಅನ್ನು ತಾನೇ ಉಳಿಸಿಕೊಂಡಿದ್ದರು. ಅಂದಿನ ಪಂದ್ಯದಲ್ಲಿ ತಾನು ಆ ನಡೆ ತೋರಿಸಿದ್ದಕ್ಕೆ ಸ್ಯಾಮ್ಸನ್ ಕಾರಣ ಹೇಳಿದ್ದಾರೆ.

ಹಿಂದಿನ ಪಂದ್ಯದಲ್ಲಿ ನಡೆದಿದ್ದೇನು?

ಹಿಂದಿನ ಪಂದ್ಯದಲ್ಲಿ ನಡೆದಿದ್ದೇನು?

ಈ ಘಟನೆ ನಡೆದಿದ್ದು ಐಪಿಎಲ್ 4ನೇ ಪಂದ್ಯದಲ್ಲಿ. ಆವತ್ತು ಪಂಜಾಬ್ ಕಿಂಗ್ಸ್‌ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿತ್ತು. ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಪಂದ್ಯ ನಡೆದಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ಕಿಂಗ್ಸ್‌ 221 ರನ್ ಬಾರಿಸಿತ್ತು. 222 ರನ್ ಬೆನ್ನಟ್ಟಿದ್ದ ರಾಜಸ್ಥಾನ್ ರಾಯಲ್ಸ್‌ಗೆ ಕೊನೇ ಎಸೆತಕ್ಕೆ 5 ರನ್‌ಗಳ ಅಗತ್ಯವಿತ್ತು. ಆ ಸಂದರ್ಭ ಸಿಂಗಲ್ ತೆಗೆದು ಕ್ರಿಸ್ ಮೋರಿಸ್‌ಗೆ ಸ್ಟ್ರೈಕ್ ನೀಡಲು ಸಂಜು ಸ್ಯಾಮ್ಸನ್ ನಿರಾಕರಿಸಿದ್ದರು. ಆದರೆ ಕೊನೇ ಎಸೆತಕ್ಕೆ ಸ್ಯಾಮ್ಸನ್ ಬೌಂಡರಿ ಬಾರಿಸದಿದ್ದ ಕಾರಣ ಅಂದಿನ ಪಂದ್ಯದಲ್ಲಿ ರಾಜಸ್ಥಾನ್ 4 ರನ್‌ನಿಂದ ಸೋತಿತ್ತು.

ಅವಮಾನ ಎದುರಿಸಿದ್ದ ಮೋರಿಸ್

ಅವಮಾನ ಎದುರಿಸಿದ್ದ ಮೋರಿಸ್

ಪಂಜಾಬ್ ಮತ್ತು ರಾಜಸ್ಥಾನ್ ನಡುವಿನ ಪಂದ್ಯದಲ್ಲಿ ಅಸಲಿಗೆ ರಾಜಸ್ಥಾನ್ ಗೆಲ್ಲಲು ಕೊನೇ ಎರಡು ಎಸೆತಗಳಲ್ಲಿ 5 ರನ್‌ಗಳು ಬೇಕಿತ್ತು. ಅರ್ಷ್‌ದೀಪ್ ಸಿಂಗ್‌ ಓವರ್‌ನಲ್ಲಿ 5ನೇ ಎಸೆತಕ್ಕೆ ಸ್ಯಾಮ್ಸನ್‌ ಸಿಂಗಲ್‌ ಓಡಿ ಮೋರಿಸ್‌ಗೆ ಸ್ಟ್ರೈಕ್ ನೀಡಲು ಅವಕಾಶವಿತ್ತು. ಆ ವೇಳೆ ಮೋರಿಸ್ ಕೂಡ ರನ್‌ಗಾಗಿ ಓಡಿಯಾಗಿತ್ತು. ಆದರೆ ಸ್ಯಾಮ್ಸನ್ ನಿಂತಲ್ಲಿಂದ ಕದಲದೆ ಮೋರಿಸ್‌ಗೆ ವಾಪಸ್ ಹೋಗುವಂತೆ ತಿಳಿಸಿ ತಾನೇ ಕೊನೇ ಎಸೆತವನ್ನು ಎದುರಿಸಲು ಮುಂದಾಗಿದ್ದರು. ಈ ವೇಳೆ ಮೋರಿಸ್ ಮುಖಭಂಗ ಎದುರಿಸಿದ್ದರು. 16.25 ಕೋಟಿ ರೂ.ಗೆ ದುಬಾರಿ ಆಟಗಾರರಾಗಿ ಆರ್‌ಆರ್ ಸೇರಿಕೊಂಡಿದ್ದರಿಂದ ಸಹಜವಾಗೇ ಮೋರಿಸ್‌ಗೆ ಆ ವೇಳೆ ಅವಮಾನವಾಗಿದ್ದು ಅವರ ಮುಖ ಚಹರೆಯಲ್ಲೇ ವ್ಯಕ್ತವಾಗಿತ್ತು.

ಸ್ಯಾಮ್ಸನ್ ನಡೆಗೆ ಮೋರಿಸ್ ಪ್ರತಿಕ್ರಿಯೆ

ಸ್ಯಾಮ್ಸನ್ ನಡೆಗೆ ಮೋರಿಸ್ ಪ್ರತಿಕ್ರಿಯೆ

ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಅವಮಾನ ಎದುರಿಸಿದ್ದ ಮೋರಿಸ್, ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಕೊನೇ ಘಳಿಗೆಯಲ್ಲಿ ಸಿಕ್ಸ್‌ ಚಚ್ಚಿ ಪಂದ್ಯ ಗೆಲ್ಲಿಸಿದ್ದರು. ಟಾಮ್ ಕರನ್ ಅವರ ಕೊನೇ ಓವರ್‌ನಲ್ಲಿ ಅಂದರೆ 19.4ನೇ ಓವರ್‌ಗೆ ಸಿಕ್ಸ್‌ ಚಚ್ಚಿದ್ದ ಮೋರಿಸ್ ಪಂದ್ಯ ಗೆಲುವಿನ ಹೀರೋ ಅನ್ನಿಸಿದ್ದರು. ಆವತ್ತು ಮೋರಿಸ್ 18 ಎಸೆತಗಳಿಗೆ 36 ರನ್ ಕೊಡುಗೆ ನೀಡಿದ್ದರು. ಇದರಲ್ಲಿ 4 ಸಿಕ್ಸರ್‌ಗಳು ಸೇರಿತ್ತು. ಡೆಲ್ಲಿ ವಿರುದ್ಧ ರಾಜಸ್ಥಾನ್ ಗೆದ್ದ ಬಳಿಕ ಮೋರಿಸ್ ಪ್ರತಿಕ್ರಿಯಿಸಿದ್ದಾರೆ. 'ಸಂಜು ಒಳ್ಳೆಯ ಹೊಡೆತಗಳನ್ನು ಕೊಡುತ್ತಿದ್ದರು. ಹೀಗಾಗಿ ನಾನು ಆವತ್ತು ವಾಪಸ್ ಹೋಗಬೇಕಾಗಿ ಬಂದಿದ್ದಕ್ಕೆ ನನಗೆ ಬೇಜಾರಿಲ್ಲ. ಆದರೆ ಸಂಜು ಕೊನೇ ಎಸೆತಕ್ಕೆ ಸಿಕ್ಸ್‌ ಹೊಡೆದಿದ್ದರೆ ನಾನು ಇಷ್ಟು ಅಪ್‌ಸೆಟ್‌ ಆಗ್ತಿರಲಿಲ್ಲ,' ಎಂದಿದ್ದಾರೆ.

ನನಗಂತೂ ನಂಬಿಕೆ ಇರಲಿಲ್ಲ ಎಂದ ಸಂಜು ಸ್ಯಾಮ್ಸನ್ | Oneindia Kannada
ಸಂಜು ಸ್ಯಾಮ್ಸನ್ ಸಮರ್ಥನೆ

ಸಂಜು ಸ್ಯಾಮ್ಸನ್ ಸಮರ್ಥನೆ

ಕ್ರಿಸ್ ಮೋರಿಸ್ ಡೆಲ್ಲಿ ವಿರುದ್ಧ ಪಂದ್ಯ ಗೆಲ್ಲಿಸಿಕೊಟ್ಟ ಬಳಿಕವೂ ಸಂಜು ತನ್ನ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. 'ನಾನು ಒಂದೆಡೆ ಕುಳಿತು ನನ್ನ ಹಿಂದಿನ ಪಂದ್ಯವನ್ನು ವಿಮರ್ಶಿಸಿಕೊಳ್ಳುತ್ತೇನೆ. ನನ್ನ ಮುಂದೆ ಇನ್ನೂ ಅಂಥ 100 ಸಂರ್ಭಗಳು ಬಂದರೂ ನಾನು ಆ ಸಿಂಗಲ್‌ ತೆಗೆದುಕೊಳ್ಳುತ್ತಿರಲಿಲ್ಲ,' ಎಂದಿದ್ದಾರೆ. ಸಂಜು ಹೀಗೆ ಹೇಳಲು ಕಾರಣವಿದೆ. ಸಂಜು ಅಂದು 63 ಎಸೆತಗಳಲ್ಲಿ 119 ರನ್ ಬಾರಿಸಿದ್ದರು. ಮೋರಿಸ್ ಕೊನೇ ಗಳಿಗೆಯಲ್ಲಿ ಬ್ಯಾಟಿಂಗ್‌ಗೆ ಬಂದಿದ್ದರಷ್ಟೇ. ಮೋರಿಸ್ ಆಗ ಕೇವಲ 2 ರನ್ ಗಳಿಸಿದ್ದರು. ಹೀಗಾಗಿ ಸ್ಟ್ಯಾಂಡಿಂಗ್‌ನಲ್ಲಿದ್ದ ಸ್ಯಾಮ್ಸನ್ ತಾನೇ ಸ್ಟ್ರೈಕ್ ಉಳಿಸಿಕೊಂಡು ಕೊನೇ ಎಸೆತಕ್ಕೆ ಸಿಕ್ಸ್‌ ಬಾರಿಸುವ ಯೋಜನೆ ಹಾಕಿಕೊಂಡಿದ್ದರು. ಆದರೆ ಸ್ಯಾಮ್ಸನ್ ಕೊನೇ ಎಸೆತಕ್ಕೆ ದೀಪಕ್ ಹೂಡಾಗೆ ಕ್ಯಾಚಿತ್ತು ನಿರ್ಗಮಿಸಬೇಕಾಗಿ ಬಂದಿತ್ತು.

Story first published: Friday, April 16, 2021, 17:42 [IST]
Other articles published on Apr 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X