ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಂಎಸ್ ಧೋನಿಗೆ ಶೇನ್ ವಾಟ್ಸನ್ ಕಡೆಯಿಂದ ವಿಶೇಷ ಸಂದೇಶ

IPL 2021 : Shane Watson sends a heartwarming message to MS Dhoni for his 200th CSK game

2020ರ ಐಪಿಎಲ್ ಟೂರ್ನಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ತೃಪ್ತಿಗೊಂಡು ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿತ್ತು. ಕಳೆದ ಬಾರಿ ನೀಡಿದ ಕಳಪೆ ಪ್ರದರ್ಶನದಿಂದ ಹೊರಬಂದು ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಯಶಸ್ಸಿನ ಹಾದಿಗೆ ಮರಳಲು ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಠಿಣಾಭ್ಯಾಸವನ್ನು ನಡೆಸಿ ಸಜ್ಜಾಗಿತ್ತು.

ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎಂದುಕೊಂಡಂತೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ತಂಡಕ್ಕೆ ಶುಭಾರಂಭ ಸಿಗಲಿಲ್ಲ. ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಮೊದಲನೇ ಪಂದ್ಯದಲ್ಲಿ ಸೋಲುಂಡಿತು. ಕಳೆದ ಆವೃತ್ತಿಯ ಕಳಪೆ ಪ್ರದರ್ಶನ ಮತ್ತು ಈ ಆವೃತ್ತಿಯ ಮೊದಲ ಪಂದ್ಯದಲ್ಲಿಯೇ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಎಂಎಸ್ ಧೋನಿ ಅವರು ಶುಕ್ರವಾರ ( ಏಪ್ರಿಲ್ 16 ) ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ 200ನೇ ಪಂದ್ಯವನ್ನಾಡಿದ್ದಾರೆ.

ಪಂದ್ಯ ಆರಂಭಕ್ಕೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಶೇನ್ ವಾಟ್ಸನ್ ಅವರು ಧೋನಿ ಅವರಿಗೆ ಟ್ವಿಟರ್ ಮೂಲಕ ವಿಶೇಷ ಸಂದೇಶವನ್ನು ಕಳುಹಿಸಿದ್ದಾರೆ. ಈ ಟ್ವೀಟ್ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ 200ನೇ ಪಂದ್ಯ ಪೂರೈಸಿದ ಧೋನಿ ಅವರಿಗೆ ಶೇನ್ ವಾಟ್ಸನ್ ಶುಭಾಶಯವನ್ನು ಕೋರಿದ್ದಾರೆ. ನೀವು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೃದಯ ಬಡಿತ ಹಾಗೂ ಕ್ರಿಕೆಟ್‍ನ ಅತ್ಯದ್ಭುತ ಆಟಗಾರರಲ್ಲಿ ನೀವು ಒಬ್ಬರು ಎಂದು ಧೋನಿಗೆ ಶೇನ್ ವಾಟ್ಸನ್ ವಿಶೇಷ ಸಂದೇಶವನ್ನು ಟ್ವೀಟ್ ಮಾಡುವ ಮೂಲಕ ಕಳುಹಿಸಿದ್ದಾರೆ.

Story first published: Friday, April 16, 2021, 21:16 [IST]
Other articles published on Apr 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X