ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪೃಥ್ವಿ ಶಾ ಆಟದ ಮುಂದೆ ನಾವೇನು ಮಾಡಲಾಗಲಿಲ್ಲ ಎಂದ ಮಾರ್ಗನ್

IPL 2021 : Shaw played brilliantly, nothing much we could do says Eoin Morgan

ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ 25ನೇ ಪಂದ್ಯ ಗುರುವಾರ ( ಏಪ್ರಿಲ್ 29 ) ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 154 ರನ್‌ಗಳ ಸಾಧಾರಣ ಮೊತ್ತವನ್ನು ಕಲೆ ಹಾಕಿತು. ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪೃಥ್ವಿ ಶಾ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಕೇವಲ 16.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿ 7 ವಿಕೆಟ್‍ಗಳ ಜಯಗಳಿಸಿತು.

ಐಪಿಎಲ್ 2021 : ಕೆಎಲ್ ರಾಹುಲ್ ನಿರ್ಮಿಸಬಹುದಾದ 3 ಮೈಲಿಗಲ್ಲುಗಳು ಐಪಿಎಲ್ 2021 : ಕೆಎಲ್ ರಾಹುಲ್ ನಿರ್ಮಿಸಬಹುದಾದ 3 ಮೈಲಿಗಲ್ಲುಗಳು

ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ನೀಡಿದ್ದ ಸಾಧಾರಣ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಪೃಥ್ವಿ ಶಾ ಮೊದಲ ಓವರ್‌ನಲ್ಲಿಯೇ ದಾಖಲೆಯ 6 ಬೌಂಡರಿಗಳನ್ನು ಸಿಡಿಸಿದರು. 41 ಎಸೆತಗಳಲ್ಲಿ 82 ರನ್ ಬಾರಿಸಿದ ಪೃಥ್ವಿ ಶಾ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಮತ್ತು 3 ಸಿಕ್ಸರ್ ಸೇರಿದ್ದವು. ಹೀಗೆ ಅಬ್ಬರದ ಬ್ಯಾಟಿಂಗ್ ಮಾಡಿದ ಪೃಥ್ವಿ ಶಾ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು ಮತ್ತು ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಈ ಗೆಲುವಿನ ನೆರವಿನಿಂದ ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.

ಇತ್ತ ಟೂರ್ನಿಯಲ್ಲಿ 5ನೇ ಸೋಲನ್ನು ಕಂಡ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಇಯಾನ್ ಮಾರ್ಗನ್ ಪಂದ್ಯ ಮುಗಿದ ಬಳಿಕ ಪಂದ್ಯದ ಕುರಿತು ಮಾತನಾಡಿದರು. ಈ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪೃಥ್ವಿ ಶಾ ಅವರ ಆಟವನ್ನು ಪ್ರಶಂಸಿಸಿದ ಇಯಾನ್ ಮಾರ್ಗನ್ ತಮ್ಮ ತಂಡದ ತಪ್ಪುಗಳನ್ನು ಸಹ ಹೇಳಿಕೊಂಡರು. ಪೃಥ್ವಿ ಶಾ ಅತ್ಯದ್ಭುತ ಆಟವನ್ನಾಡಿದರು, ನಮ್ಮಿಂದ ಅವರನ್ನು ಬಹುಬೇಗ ಕಟ್ಟಿಹಾಕಲು ಸಾಧ್ಯವಾಗಲಿಲ್ಲ, ನಮ್ಮ ತಂಡ ಯಾವುದೇ ವಿಭಾಗದಲ್ಲಿಯೂ ಸಹ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಲಿಲ್ಲ ಎಂದು ಇಯಾನ್ ಮಾರ್ಗನ್ ಪಂದ್ಯದ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಪೃಥ್ವಿ ಶಾ ಅವರ ಅಬ್ಬರದ ಬ್ಯಾಟಿಂಗ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿವಿಧ ವಿಭಾಗಗಳ ಕಳಪೆ ಪ್ರದರ್ಶನವೇ ತಂಡದ ಸೋಲಿಗೆ ಕಾರಣ ಎಂದು ಇಯಾನ್ ಮಾರ್ಗನ್ ಪರೋಕ್ಷವಾಗಿ ತಿಳಿಸಿದರು.

Story first published: Friday, April 30, 2021, 14:59 [IST]
Other articles published on Apr 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X