ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಆಟಗಾರನೇ ಹೈದರಾಬಾದ್ ತಂಡದ ದೊಡ್ಡ ಸಮಸ್ಯೆ ಎಂದ ಇರ್ಫಾನ್ ಪಠಾಣ್

IPL 2021 : SRH’s Biggest Problem Was David Warner’s Captaincy says Irfan Pathan

ಸನ್ ರೈಸರ್ಸ್ ಹೈದರಾಬಾದ್ ತಂಡದ ಯೋಜನೆಯಂತೆ ಪ್ರಸ್ತುತ ಐಪಿಎಲ್ ಟೂರ್ನಿ ನಡೆಯಲಿಲ್ಲ. ಟೂರ್ನಿ ಶುರುವಿನಿಂದಲೂ ಸಹ ಕಳಪೆ ಪ್ರದರ್ಶನವನ್ನೇ ತೋರುತ್ತಾ ಬಂದ ಸನ್ ರೈಸರ್ಸ್ ಹೈದರಾಬಾದ್ ತಂಡ ಪ್ರಸ್ತುತ ಟೂರ್ನಿಯಲ್ಲಿ ಎಲ್ಲಾ ತಂಡಗಳ ಪೈಕಿ ಅತಿ ಹೆಚ್ಚು ಮುಗ್ಗರಿಸಿದೆ ತಂಡ ಎನಿಸಿಕೊಂಡಿತು. ಸನ್ ರೈಸರ್ಸ್ ಹೈದರಾಬಾದ್ ತಂಡ ಸಾಲು ಸಾಲು ಸೋಲುಗಳನ್ನು ಕಂಡು ಟೂರ್ನಿಯ ಮಧ್ಯದಲ್ಲಿಯೇ ನಾಯಕತ್ವವನ್ನು ಸಹ ಬದಲಾಯಿಸುವ ತೀರ್ಮಾನ ಕೈಗೊಳ್ಳುವ ಮಟ್ಟಿಗೆ ಬೇಸತ್ತಿತ್ತು. ನಾಯಕತ್ವ ನಿಭಾಯಿಸುತ್ತಿದ್ದ ವಾರ್ನರ್ ಬದಲು ಕೇನ್ ವಿಲಿಯಮ್ಸನ್ ಅವರಿಗೆ ನಾಯಕತ್ವವನ್ನು ನೀಡಲಾಯಿತು. ಆದರೂ ಸಹ ಸನ್ ರೈಸರ್ಸ್ ಹೈದರಾಬಾದ್ ತಂಡದ ಅದೃಷ್ಟ ಬದಲಾಗಲಿಲ್ಲ ಮತ್ತೆ ಸೋಲಿನ ಯಾನ ಮುಂದುವರಿಯಿತು.

ಟೂರ್ನಿ ನಿಲುಗಡೆಯಾಗುವ ವೇಳೆಗೆ ಸನ್ ರೈಸರ್ಸ್ ಹೈದರಾಬಾದ್ ತಂಡ 7 ಪಂದ್ಯಗಳನ್ನಾಡಿ 6 ಪಂದ್ಯಗಳಲ್ಲಿ ಸೋತು ಕೇವಲ ಒಂದೇ ಒಂದು ಪಂದ್ಯದಲ್ಲಿ ಜಯಗಳಿಸುವುದರ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಹೀಗೆ ಕಳಪೆ ಪ್ರದರ್ಶನ ತೋರಿದ ಸನ್ ರೈಸರ್ಸ್ ಹೈದರಾಬಾದ್ ತಂಡದ ಸಮಸ್ಯೆಯ ಕುರಿತು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಮಾತನಾಡಿದ್ದಾರೆ. ಟಾಪ್ 4ರಲ್ಲಿ ಇರಬೇಕಾದ ತಂಡ ಇಷ್ಟು ಕೆಟ್ಟ ಪ್ರದರ್ಶನವನ್ನು ನೀಡಿದ್ದು ಆ ಒಂದು ಸಮಸ್ಯೆಯಿಂದ ಎಂದು ಇರ್ಫಾನ್ ಪಠಾಣ್ ತಿಳಿಸಿದ್ದಾರೆ.

ಇರ್ಫಾನ್ ಪಠಾಣ್ ಪ್ರಕಾರ ಸನ್ ರೈಸರ್ಸ್ ಹೈದರಾಬಾದ್ ತಂಡದ ದೊಡ್ಡ ಸಮಸ್ಯೆಯೇ ಡೇವಿಡ್ ವಾರ್ನರ್. ಪ್ರಸ್ತುತ ಟೂರ್ನಿಯಲ್ಲಿ ಡೇವಿಡ್ ವಾರ್ನರ್ ಅವರ ನಾಯಕತ್ವದಲ್ಲಿ 6 ಪಂದ್ಯಗಳನ್ನಾಡಿದ ಹೈದರಾಬಾದ್ 5 ಪಂದ್ಯಗಳಲ್ಲಿ ಸೋತಿತ್ತು. ಕೇವಲ ನಾಯಕನಾಗಿ ಮಾತ್ರವಲ್ಲದೆ ಬ್ಯಾಟ್ಸ್‌ಮನ್‌ ಆಗಿ ಕೂಡ ಡೇವಿಡ್ ವಾರ್ನರ್ ತಂಡಕ್ಕೆ ದೊಡ್ಡ ಸಮಸ್ಯೆಯಾಗಿದ್ದರು, ಟೂರ್ನಿಯಲ್ಲಿ ವಾರ್ನರ್ 193 ರನ್ ಗಳಿಸಿದರೂ ಸಹ ತಂಡಕ್ಕೆ ಬೇಕಾದ ಸ್ಟ್ರೈಕ್ ರೇಟ್‌ನಲ್ಲಿ ಆ ರನ್‌ಗಳು ಬರಲಿಲ್ಲ ಎಂದು ಇರ್ಫಾನ್ ಪಠಾಣ್ ಹೇಳಿದರು. ಇದೇ ಕಾರಣಕ್ಕೆ ನಾಯಕತ್ವದ ಬದಲಾವಣೆಯ ನಂತರ ಡೇವಿಡ್ ವಾರ್ನರ್‌ನ್ನು ತಂಡದಿಂದಲೂ ಕೈಬಿಟ್ಟು ಮೊಹಮ್ಮದ್ ನಬಿ ಅವರಿಗೆ ಅವಕಾಶ ನೀಡಲಾಯಿತು ಎಂದು ಪಠಾಣ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

Story first published: Monday, May 10, 2021, 18:56 [IST]
Other articles published on May 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X