ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಕಣಕ್ಕಿಳಿಯಲು ಪಡಿಕ್ಕಲ್ ಸಜ್ಜು, ಆರ್‌ಸಿಬಿ ಸಂಭಾವ್ಯ ತಂಡ ಹೀಗಿದೆ

IPL 2021: SRH vs RCB: Devdutt Padikkal set to return as opener for Virat Kohli in todays match

ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ ಮೊದಲ ಪಂದ್ಯದಲ್ಲಿ ಅದ್ಭುತ ಗೆಲುವು ಸಾಧಿಸಿದ ವಿರಾಟ್ ಕೊಹ್ಲಿ ಬಳಗ ಈಗ ಎರಡನೇ ಪಂದ್ಯದಲ್ಲಿ ಕಾದಾಡಲು ಸಜ್ಜಾಗಿದೆ. ಈ ಪಂದ್ಯದಲ್ಲಿ ಡೇವಿಡ್ ವಾರ್ನರ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಸವಾಲೊಡ್ಡಿದೆ.

ಈ ಪಂದ್ಯದ ಮೂಲಕ ಆರ್‌ಸಿಬಿ ತಂಡದ ಭರವಸೆಯ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಮತ್ತೆ ಕಣಕ್ಕಿಳಿಯುವುದು ಬಹುತೇಕ ಖಾತ್ರಿಯಾಗಿದೆ. ಕೊರೊನಾ ವೈರಸ್‌ಗೆ ತುತ್ತಾಗಿದ್ದ ಪಡಿಕ್ಕಲ್ ಚೇತರಿಸಿಕೊಂಡಿದ್ದರಾದರೂ ಮೊದಲ ಪಂದ್ಯದಲ್ಲಿ ಪಡಿಕ್ಕಲ್‌ಗೆ ವಿಶ್ರಾಂತಿಯನ್ನು ನೀಡಲಾಗಿತ್ತು. ಈಗ ಪಡಿಕ್ಕಲ್ ಆಡಲು ಸಂಪೂರ್ಣವಾಗಿ ಸಜ್ಜಾಗಿದ್ದಾರೆ.

ಮೋರಿಸ್‌ಗೆ ಸಿಂಗಲ್‌ ನಿರಾಕರಿಸಿದ ಸಂಜು ಸ್ಯಾಮ್ಸನ್: ನೆಟ್ಟಿಗರ ತಮಾಷೆಮೋರಿಸ್‌ಗೆ ಸಿಂಗಲ್‌ ನಿರಾಕರಿಸಿದ ಸಂಜು ಸ್ಯಾಮ್ಸನ್: ನೆಟ್ಟಿಗರ ತಮಾಷೆ

ಮುಂಬೈ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಎಲ್ಲಾ ವಿಭಾಗಗಳಲ್ಲೂ ಭರವಸೆಯ ಪ್ರದರ್ಶನ ನೀಡಿತ್ತು. ಬೌಲಿಂಗ್ ವಿಭಾಗದಲ್ಲಿ ಹರ್ಷದ್ ಪಟೇಲ್ ಮುಂಬೈ ಇಂಡಿಯನ್ಸ್ ವಿರುದ್ಧ ಅಕ್ಷರಶಃ ಅಬ್ಬರಿಸಿದ್ದರು. ಐಪಿಎಲ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಮುಂಬೈ ಇಂಡಿಯನ್ಸ್ ವಿರುದ್ಧ ಐದು ವಿಕೆಟ್ ಗೊಂಚಲು ಪಡೆದ ಆಟಗಾರ ಎನಿಸಿದ್ದಾರೆ. ಈ ಪ್ರದರ್ಶನ ಬಲಿಷ್ಠ ಮುಂಬೈ ತಂಡವನ್ನು 159 ರನ್‌ಗಳಿಗೆ ನಿಯಂತ್ರಿಸಲು ಸಾಧ್ಯವಾಯಿತು.

ಬ್ಯಾಟಿಂಗ್‌ನಲ್ಲಿ ವಿರಾಟ್ ಕೊಹ್ಲಿ(33) ಗ್ಲೆನ್ ಮ್ಯಾಕ್ಸ್‌ವೆಲ್(39) ಹಾಗೂ ಎಬಿ ಡಿವಿಲಿಯರ್ಸ್(48) ರನ್‌ಗಳಿಸಿ ಮುಂಬೈ ವಿರುದ್ಧದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದರು. ಕಳೆದ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಅಲಭ್ಯತೆಯಲ್ಲಿ ಆರಂಭಿಕನಾಗಿ ನಾಯಕ ವಿರಾಟ್ ಕೊಹ್ಲಿಗೆ ಆಲ್‌ರೌಂಡರ್ ವಾಶಿಂಗ್ಟನ್ ಸುಂದರ್ ಸಾಥ್ ನೀಡಿದ್ದರು. ಆದರೆ ಸುಂದರ್ ಆರಂಭಿಕನಾಗಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದರು. ಇಂದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿಗೆ ಸಾಥ್ ನೀಡುವುದು ಬಹುತೇಕ ಖಚಿತ.

ಎಬಿಡಿ ದಾಖಲೆಯನ್ನು ಸರಿದೂಗಿಸಿದ ಸಂಜು ಸ್ಯಾಮ್ಸನ್ಎಬಿಡಿ ದಾಖಲೆಯನ್ನು ಸರಿದೂಗಿಸಿದ ಸಂಜು ಸ್ಯಾಮ್ಸನ್

ಆರ್‌ಸಿಬಿ ಸಂಭಾವ್ಯ ಆಡುವ ಬಳಗ:
ವಿರಾಟ್ ಕೊಹ್ಲಿ (ನಾಯಕ) ದೇವದತ್ ಪಡಿಕ್ಕಲ್, ಎಬಿ ಡಿವಿಲಿಯರ್ಸ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಡೇನಿಯಲ್ ಕ್ರಿಶ್ಚಿಯನ್, ವಾಷಿಂಗ್ಟನ್ ಸುಂದರ್, ಕೈಲ್ ಜಾಮಿಸನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಶಹಬಾಜ್ ಅಹ್ಮದ್, ಯುಜುವೇಂದ್ರ ಚಾಹಲ್

Story first published: Wednesday, April 14, 2021, 13:39 [IST]
Other articles published on Apr 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X