ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಪ್ಲೇ ಆಫ್ಸ್‌ ಭರವಸೆ ಕಳೆದುಕೊಂಡ ಮೊದಲ ತಂಡ ಹೈದರಾಬಾದ್

IPL 2021: Sunrisers Hyderabad becomes the first team to be out of the play-offs hopes

ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 2021ರ ಆವೃತ್ತಿಯಲ್ಲಿ ಪ್ಲೇ ಆಫ್ಸ್ ಭರವಸೆಯನ್ನು ಕಳೆದುಕೊಂಡ ಮೊದಲ ತಂಡವಾಗಿ ಸನ್ ರೈಸರ್ಸ್ ಹೈದರಾಬಾದ್ ಕಾಣಿಸಿಕೊಂಡಿದೆ. ಶನಿವಾರ (ಸೆಪ್ಟೆಂಬರ್ 25) ನಡೆದ ಐಪಿಎಲ್ 37ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋತ ಬಳಿಕ ಎಸ್‌ಆರ್‌ಎಚ್‌ನ ಪ್ಲೇ ಆಫ್ಸ್‌ ಭರವಸೆಯೇ ನೆಲಕ್ಕುರುಳಿದೆ. ಕಳೆದ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಲೀಗ್ ಹಂತದಲ್ಲೇ ಪ್ಲೇ ಆಫ್ಸ್ ನಿಂದ ಹೊರ ಬಿದ್ದಿತ್ತು.

IPL 2021 Playoffs: ಪ್ಲೇಆಫ್‌ ಪ್ರವೇಶಿಸಲು ಎಲ್ಲಾ 8 ತಂಡಗಳು ಇಷ್ಟು ಪಂದ್ಯಗಳಲ್ಲಿ ಜಯ ಸಾಧಿಸಲೇಬೇಕಾಗಿದೆ!IPL 2021 Playoffs: ಪ್ಲೇಆಫ್‌ ಪ್ರವೇಶಿಸಲು ಎಲ್ಲಾ 8 ತಂಡಗಳು ಇಷ್ಟು ಪಂದ್ಯಗಳಲ್ಲಿ ಜಯ ಸಾಧಿಸಲೇಬೇಕಾಗಿದೆ!

ಶಾರ್ಜಾ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 5 ರನ್ ಜಯ ಗಳಿಸಿತ್ತು. ಈ ಪಂದ್ಯದ ಬಳಿಕ ಹೈದರಾಬಾದ್ ಆಡಿರುವ 9 ಪಂದ್ಯಗಳಲ್ಲಿ 1 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದೆ.

ಇನ್ನು ಪ್ರತಿಷ್ಠೆಗಾಗಿ ಮಾತ್ರ ಗೆಲ್ಲಬೇಕು

ಇನ್ನು ಪ್ರತಿಷ್ಠೆಗಾಗಿ ಮಾತ್ರ ಗೆಲ್ಲಬೇಕು

ಕೇನ್ ವಿಲಿಯಮ್ಸನ್ ನಾಯಕತ್ವದ ಸನ್ ರೈಸರ್ಸ್, ಶನಿವಾರದ ಪಂದ್ಯದಲ್ಲಿ ಗೆದ್ದಿದ್ದರೆ, ಮುಂದಿನ ಎಲ್ಲಾ ಪಂದ್ಯಗಳಲ್ಲೂ ದೊಡ್ಡ ಅಂತರದಿಂದ ಗೆಲ್ಲುವುದರ ಮೂಲಕ ಪ್ಲೇ ಆಫ್ಸ್ ಆಸೆ ಜೀವಂತವಾಗಿರಿಸಿಕೊಳ್ಳಬಹುದಿತ್ತು. ಆದರೆ ಆ ಪಂದ್ಯವನ್ನು ಸೋತಿರುವುದರಿಂದ ಎಸ್‌ಆರ್‌ಎಚ್‌ನ ಪ್ಲೇ ಆಫ್ಸ್ ಅವಕಾಶವೇ ಕೊನೆಯಾಗಿದೆ. ಇನ್ನೂ ಹೈದರಾಬಾದ್‌ಗೆ ಲೀಗ್‌ ಹಂತದ 5 ಪಂದ್ಯಗಳು ಬಾಕಿ ಉಳಿದುಕೊಂಡಿವೆ. ಇದರಲ್ಲಿ ಪ್ರತಿಷ್ಠೆಗಾದರೂ ಗೆಲ್ಲಲೇಬೇಕಿದೆ. 2021ರ ಸೀಸನ್‌ನ ಆರಂಭದಲ್ಲಿ ಸನ್ ರೈಸರ್ಸ್ ಹೈದರಾಬಾದ್‌ಗೆ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ನಾಯಕರಾಗಿದ್ದರು. ಹೈದರಾಬಾದ್ ಕಳಪೆ ಪ್ರದರ್ಶನ ನೀಡಿದ್ದರಿಂದ ವಾರ್ನರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ನಾಯಕತ್ವದಲ್ಲಿ ಬದಲಾವಣೆಯಾದರೂ ಹೈದರಾಬಾದ್ ಪ್ರದರ್ಶನದಲ್ಲಿ ಬದಲಾವಣೆಯೇನೂ ಆಗಿಲ್ಲ. ಅದೇ ಕಳಪೆ ಪ್ರದರ್ಶನ ಮುಂದುವರೆಯುತ್ತಿದೆ. ಈ ಸೀಸನ್‌ನ ಆರಂಭದಿಂದಲೂ ಎಸ್‌ಆರ್‌ಎಚ್ ಅಂಕಪಟ್ಟಿಯಲ್ಲಿ ಕೆಳ ಸ್ಥಾನದಲ್ಲೇ ಮುಂದುವರೆಯುತ್ತಿದೆ.

ಪಾಯಿಂಟ್ಸ್ ಟೇಬಲ್ ಮಾಹಿತಿ

ಪಾಯಿಂಟ್ಸ್ ಟೇಬಲ್ ಮಾಹಿತಿ

ಸದ್ಯದ ಐಪಿಎಲ್ ಅಂಕಪಟ್ಟಿಯಲ್ಲಿ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಸ್ಥಾನದಲ್ಲಿದೆ. ಆಡಿರುವ 10 ಪಂದ್ಯಗಳಲ್ಲಿ 8 ಗೆಲುವುಗಳೊಂದಿಗೆ ಡೆಲ್ಲಿ ನಂ.1 ಸ್ಥಾನಕ್ಕೇರಿದೆ. ಶನಿವಾರ ಡೆಲ್ಲಿ ವಿರುದ್ಧ ಸೋತಿರುವ ರಾಜಸ್ಥಾನ್ ರಾಯಲ್ಸ್ 7ನೇ ಸ್ಥಾನಕ್ಕೆ ಕುಸಿದಿದೆ. ರಾಜಸ್ಥಾನ್ ತಂಡ ಆಡಿರುವ 9 ಪಂದ್ಯಗಳಲ್ಲಿ 4 ಪಂದ್ಯ ಗೆದ್ದು 4 ಪಾಯಿಂಟ್ಸ್‌ ಕಲೆ ಹಾಕಿದೆ. ಸನ್ ರೈಸರ್ಸ್ ಹೈದರಾಬಾದ್ ಸೋಲಿಸಿರುವ ಪಂಜಾಬ್ ಕಿಂಗ್ಸ್ 7ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಜಿಗಿದಿದೆ. 10 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಗೆದ್ದಿರುವ ಪಂಜಾಬ್ 8 ಪಾಯಿಂಟ್ಸ್ ಕಲೆ ಹಾಕಿದೆ. ಪಂಜಾಬ್ ಎದುರು ಸೋತಿರುವ ಹೈದರಾಬಾದ್ 9ರಲ್ಲಿ 1 ಪಂದ್ಯ ಗೆದ್ದು 2 ಪಾಯಿಂಟ್ಸ್ ಗಳಿಸಿದೆ. ಅಂಕಪಟ್ಟಿಯಲ್ಲಿ ಡೆಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ದ್ವಿತೀಯ ಸ್ಥಾನದಲ್ಲಿದೆ. ಚೆನ್ನೈ 9ರಲ್ಲಿ 7 ಪಂದ್ಯಗಳನ್ನು ಗೆದ್ದಿದೆ. ತೃತೀಯ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳಿವೆ. ಆರ್‌ಸಿಬಿ 9ರಲ್ಲಿ 5 ಪಂದ್ಯಗಳನ್ನು ಗೆದ್ದಿದೆ. 4ನೇ ಸ್ಥಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವಿದೆ. 5ರಲ್ಲಿ ಪಂಜಾಬ್, 6ರಲ್ಲಿ ಮುಂಬೈ ಇಂಡಿಯನ್ಸ್, 7ರಲ್ಲಿ ರಾಜಸ್ಥಾನ್, 8ರಲ್ಲಿ ಹೈದರಾಬಾದ್ ತಂಡಗಳಿವೆ.

ನಮ್ಮಿಂದ ಆಗುತ್ತಿಲ್ಲ ಅಂತ ಸೋಲಿನ ನಂತರ ರೋಹಿತ್ ಶರ್ಮಾ ಹೇಳಿದ್ದು ಯಾಕೆ? | Oneindia Kannada
ಪಂಜಾಬ್ ಕಿಂಗ್ಸ್ vs ಸನ್ ರೈಸರ್ಸ್ ಹೈದರಾಬಾದ್ ಸ್ಕೋರ್

ಪಂಜಾಬ್ ಕಿಂಗ್ಸ್ vs ಸನ್ ರೈಸರ್ಸ್ ಹೈದರಾಬಾದ್ ಸ್ಕೋರ್

ಶನಿವಾರ ನಡೆದಿದ್ದ ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್‌ ಕಿಂಗ್ಸ್‌, ಕೆಎಲ್ ರಾಹುಲ್ 21, ಮಯಾಂಕ್ ಅಗರ್ವಾಲ್ 5, ಕ್ರಿಸ್ ಗೇಲ್ 14, ಐಡೆನ್ ಮಾರ್ಕ್ರಮ್ 27, ನಿಕೋಲಸ್ ಪೂರನ್ 8, ದೀಪಕ್ ಹೂಡಾ 13, ಹರ್‌ಪ್ರೀತ್ ಬ್ರಾರ್ 18, ನಾಥನ್ ಎಲ್ಲಿಸ್ 12 ರನ್‌ನೊಂದಿಗೆ 20 ಓವರ್‌ಗೆ 7 ವಿಕೆಟ್ ಕಳೆದು 125 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್, ಡೇವಿಡ್ ವಾರ್ನರ್ 2, ವೃದ್ಧಿಮಾನ್ ಸಹಾ 31,ಕೇನ್ ವಿಲಿಯಮ್ಸನ್ 1, ಮನೀಶ್ ಪಾಂಡೆ 13, ಕೇದಾರ್ ಜಾಧವ್ 12, ಅಬ್ದುಲ್ ಸಮದ್ 1, ಜೇಸನ್ ಹೋಲ್ಡರ್ 47 (29), ರಶೀದ್ ಖಾನ್ 3, ಭುವನೇಶ್ವರ್ ಕುಮಾರ್ 3 ರನ್‌ನೊಂದಿಗೆ 20 ಓವರ್‌ಗೆ 7 ವಿಕೆಟ್ ಕಳೆದು 120 ರನ್ ಗಳಿಸಿತು. ಪಂಜಾಬ್ ಕಿಂಗ್ಸ್ ಇನ್ನಿಂಗ್ಸ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್‌ನ ಜೇಸನ್ ಹೊಲ್ಡರ್ 19 ರನ್‌ಗೆ 3 ವಿಕೆಟ್, ಸಂದೀಪ್ ಶರ್ಮಾ 1, ಭುವನೇಶ್ವರ್ ಕುಮಾರ್ 1, ರಶೀದ್ ಖಾನ್ 1, ಅಬ್ದುಲ್ ಸಮದ್ 1 ವಿಕೆಟ್‌ ಪಡೆದರೆ, ಹೈದರಾಬಾದ್ ಇನ್ನಿಂಗ್ಸ್‌ ನಲ್ಲಿ ಪಂಜಾಬ್ ಕಿಂಗ್ಸ್‌ನ ಮೊಹಮ್ಮದ್ ಶಮಿ 2, ಅರ್ಶದೀಪ್ ಸಿಂಗ್ 1, ರವಿ ಬಿಷ್ಣೋಯ್ 3 ವಿಕೆಟ್‌ನಿಂದ ಗಮನ ಸೆಳೆದರು.

Story first published: Sunday, September 26, 2021, 11:16 [IST]
Other articles published on Sep 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X